2-3 ದಿನದ ಬಳಿಕ ರಾಜ್ಯಕ್ಕೆ ಮುಂಗಾರು ಪ್ರವೇಶ

ಮುಂಗಾರು ಮಳೆ ಮುಂದಿನ ಎರಡು ಮೂರು ದಿನಗಳಲ್ಲಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಮುಂಗಾರು ಮಳೆ ಮುಂದಿನ ಎರಡು ಮೂರು ದಿನಗಳಲ್ಲಿ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಆರಂಭವಾಗಿದೆಯೋ ಎಂಬ ಸಂಶಯ ತರಿಸುವಂತಹ ಮಳೆ ಬೀಳುತ್ತಿದ್ದರೂ ಮಾರುತಗಳು ಇನ್ನೂ ಕೇರಳಕ್ಕೆ ಆಗಮಿಸಿಲ್ಲ. ಮೊದಲು ಕೇರಳಕ್ಕೆ ಬರುವ ಮಾರುತಗಳು, ನಂತರದ ಒಂದೆರಡು ದಿನದಲ್ಲೇ ರಾಜ್ಯದ ಕರಾವಳಿ ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. 
ಭಾರತೀಯ ಹವಮಾನ ಇಲಾಖೆಯು ನೈರುತ್ಯ ಮಾನ್ಸೂನ್ ಕುರಿತಾದ ಎರಡನೇ ಹಂತದ ವಿಸ್ತೃತ ವರದಿ ಪ್ರಕಟಿಸಿದ್ದು, ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಮಾರುತಗಳ ಚಲನೆಗೆ ಪೂರಕವಾದ ವಾತಾವರಣ ಇದೆ. ಮುಂದಿನ 48 ಗಂಟೆಗಳಲ್ಲಿ ಮಾರುತಗಳು ವಿಸ್ತರಿಸಲಿದೆ ಎಂದು ತಿಳಿಸಿದೆ. 
ಬೆಂಗಳೂರು ಸೇರಿ ರಾಜ್ಯ ಹಲವೆಡೆ ಈಗಾಗಲೇ ಆಗಾಗ ಮಳೆ ಸುರಿಯುತ್ತಿದೆ. ಮುಂದಿನ 5 ದಿನಗಳಲ್ಲಿ ಕರಾವಳಿ ಸೇರಿ ಉತ್ತರಕನ್ನಡ ಜಿಲ್ಲೆಗಳಲ್ಲೂ ಜೂನ್ 8ರಿಂದ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com