ಭಾರತದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳ ಸಾಧ್ಯತೆ

2015ರಲ್ಲಿ ಭಾರತದಲ್ಲಿ ಅಧಿಕ ತಾಪಮಾನಕ್ಕೆ 2,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2015ರಲ್ಲಿ ಭಾರತದಲ್ಲಿ ಅಧಿಕ ತಾಪಮಾನಕ್ಕೆ 2,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ (ಆಂಧ್ರ ಪ್ರದೇಶವೊಂದರಲ್ಲಿಯೇ 1,700ಕ್ಕೂ ಅಧಿಕ) ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ತೀವ್ರ ತಾಪಮಾನ ಹಿಂದಿನಂತೆ ಪ್ರತಿ 100 ವರ್ಷಗಳಿಗೆ ಬದಲಾಗಿ ಪ್ರತಿ 10 ವರ್ಷಗಳಿಗೊಮ್ಮೆ ಬರುತ್ತದೆ.
ಮುಂದಿನ ವರ್ಷ ಭಾರತದಲ್ಲಿ ಇನ್ನಷ್ಟು ತಾಪಮಾನ ಉಂಟಾಗಲಿದೆ. 1901ರಿಂದ ಭಾರತದಲ್ಲಿ ಬಿಸಿಲಿನ ತಾಪಮಾನದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿದೆ. ಈ ವರ್ಷದ ಬೇಸಿಗೆ ಆರಂಭದಲ್ಲಿ ತೀವ್ರ ಬಿಸಿಲು ತಲೆದೋರಿತ್ತು. ಮಾರ್ಚ್ ಕೊನೆಯ ವೇಳೆಗೆ ದೇಶದ 9 ರಾಜ್ಯಗಳಲ್ಲಿ ಅಧಿಕ ತಾಪಮಾನ ಉಂಟಾಗಿತ್ತು.
2002ರಿಂದೀಚೆಗೆ ಭಾರತದ ಅತ್ಯಧಿಕ ತಾಪಮಾನದ 15 ವರ್ಷಗಳಲ್ಲಿ 13 ವರ್ಷಗಳು ತೀವ್ರವಾದ ಶಾಖವನ್ನು ಹೊಂದಿದ್ದವು. ಅಧಿಕ ತಾಪಮಾನ ಬರಗಾಲದಂತಹ ಪರಿಸ್ಥಿತಿಯನ್ನು ತಂದೊಡ್ಡಿ ಸಾವಿರಾರು ಜನರನ್ನು ಸಾಯಿಸಿದರೂ ಕೂಡ ಉಷ್ಣತೆಯಿಂದ ಸಾಯುವುದನ್ನು ತಪ್ಪಿಸಬಹುದು.2014ರಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ದಕ್ಷಿಣ ಏಷ್ಯಾದ ಮೊದಲ ತಾಪಮಾನ ಕಾರ್ಯಯೋಜನೆಯ ಮುಂಚೂಣಿ ವಹಿಸಿತ್ತು ಎಂದು ಇಂಡಿಯಾಸ್ಪೆಂಡ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com