ರಾಜ್ಯ

ಅನರ್ಹ ಶಾಸಕರ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲ

Manjula VN

ಬೆಂಗಳೂರು: ಅನರ್ಹ ಶಾಸಕರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರವ ಹಂತದಲ್ಲಿಯೇ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅನರ್ಹ ಶಾಸಕರಿಗೆ ಬೆಂಬಲ ನೀಡಿದ್ದಾರೆ. 

ಅನರ್ಹ ಶಾಸಕರ ಬೆನ್ನಿಗೆ ಇದೀಗ ಹಾಲಿ ಸ್ಪೀಕರ್ ನಿಂತಿದ್ದು, ಕಾಗೇರಿ ಪರ ನ್ಯಾಯಾಲಯಕ್ಕೆ ಹಾಜರಾದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಶಾಸಕರ ರಾಜೀನಾಮೆ ನೀಡುವ ಹಕ್ಕನ್ನು ಗೌರವಿಸಬೇಕೆಂದು ಪ್ರತಿಪಾದಿಸಿದ್ದಾರೆ. 

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಈ 15 ಶಾಸಕರು ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಶಾಸಕರ ರಾಜೀನಾಮೆ ನೀಡುವ ಹಕ್ಕನ್ನು ಪ್ರಶ್ನಿಸಿದ್ದ ಸ್ಪೀಕರ್ ಕಚೇರಿ ಇದೀಗ ರಾಜೀನಾಮೆ ನೀಡುವ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದೆ. 

ಹಾಲಿ ಸ್ಪೀಕರ್ ಕಾಗೇರಿ ಪರ ನ್ಯಾಯಾಲಯಕ್ಕೆ ಹಾಜರಾದ ತುಷಾರ್ ಮೆಹ್ತಾ ಅವರು, ರಾಜೀನಾಮೆ ನೀಡುವ ಹಕ್ಕನ್ನು ಯಾವ ಕಾರಣಕ್ಕೂ ಮೊಟಕುಗೊಳಿಸಲಾಗದು ಎಂದು ಹೇಳಿದರು. ತಮ್ಮ ವಾದ ಮಂಡನೆಯ ಆರಂಭದಲ್ಲಿಯಾ ನಾನು ಯಾವುದೇ ಪಕ್ಷದ ಪರ ವಾದಿಸುತ್ತಿಲ್ಲ. ಸಾಂವಿಧಾನಿಕ ಮತ್ತು ಕಾನೂನಾತ್ಮಕ ಅಂಶಗಳನ್ನು ಮಾತ್ರ ನ್ಯಾಯಪೀಠದ ಮುಂದೆ ಮಂಡಿಸುತ್ತಿದ್ದೇನೆಂದು ಹೇಳಿದರು. 

ಇದೇ ವೇಳೆ ಸ್ಪೀಕರ್ ಮುಂದೆ ರಾಜೀನಾಮೆ ಮತ್ತು ಅನರ್ಹತೆಯ ಅರ್ಜಿಗಳಿದ್ದಾಗ ಯಾವುದರ ಬಗ್ಗೆ ಮೊದಲು ತೀರ್ಮಾನ ಕೈಗೊಳ್ಳಬೇಕಂದು ಸಾಲಿಸಿಟರ್ ಜನರಲ್ ಅವರನ್ನು ನ್ಯಾಯಾಲಯ ಕೇಳಿದರು. ಆದರೆ, ಈ ವೇಳೆ ಪ್ರಶ್ನೆಗೆ ಸಾಲಿಸಿಟರ್ ಜನರಲ್ ನೇರವಾಗಿ ಉತ್ತರ ನೀಡಲಿಲ್ಲ. ಆದರೆ, ವಾದ ಮಂಡನೆಯ ಮುಂದುವರೆದ ಭಾಗದಲ್ಲಿ ಸ್ವ-ಇಚ್ಛೆಯಿಂದ ಮತ್ತು ನೈಜವಾಗಿ ನೀಡಿದ ರಾಜೀನಾಮೆ ಬಗ್ಗೆ ತೀರ್ಮಾನಕ್ಕೆ ಬರಬೇಕೆಂದು ಹೇಳಿದರು. ಅಲ್ಲದೆ, ಶಾಸಕರ ರಾಜೀನಾಮೆ ಮತ್ತು ಅನರ್ಹತೆಯ ಸಂದರ್ಭಗಳನ್ನು ನಿಭಾಯಿಸರು ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರ ರಚಿಸಲು ಇದು ಸೂಕ್ತ ಸಮಯ ಎಂದು ಪ್ರತಿಪಾದಿಸಿದರು. 

SCROLL FOR NEXT