ದೇಶ

ಜೆಇಇ ಅಡ್ವಾನ್ಸ್ಡ್ 2022 ಫಲಿತಾಂಶ ಪ್ರಕಟ, ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Sumana Upadhyaya

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆಯ (JEE Advance) ಅಡ್ವಾನ್ಸ್ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ನೋಂದಾಯಿತ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು http://jeeadv.ac.in ನಲ್ಲಿ ನಮೂದಿಸುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಈ ಬಾರಿ ಒಟ್ಟು 1,55,538 ಅಭ್ಯರ್ಥಿಗಳು ಜೆಇಇ (ಅಡ್ವಾನ್ಸ್ಡ್) 2022 ರಲ್ಲಿ 1 ಮತ್ತು 2 ಪತ್ರಿಕೆಗಳಲ್ಲಿ ಪರೀಕ್ಷೆ ಬರೆದಿದ್ದರು. 124 ನಗರಗಳಲ್ಲಿ 577 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಅರ್ಹ ಅಭ್ಯರ್ಥಿಗಳು ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್ (AAT) ಗೆ ನಾಳೆ ಸಾಯಂಕಾಲ 5 ಗಂಟೆಯವರೆಗೆ ನೋಂದಾಯಿಸಿಕೊಳ್ಳಬಹುದು.

JEE ಅಡ್ವಾನ್ಸ್ಡ್ 2022 ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗಳಲ್ಲಿ ಪಠ್ಯ ಸಂದೇಶದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. IITB JEE ಅಡ್ವಾನ್ಸ್ಡ್ 2022 ಫಲಿತಾಂಶದ ಘೋಷಣೆಯನ್ನು ಅಭ್ಯರ್ಥಿಗಳು ಅಖಿಲ ಭಾರತ ಶ್ರೇಣಿಗಳು, ಅಂಕಗಳು, ವರ್ಗವಾರು ಶ್ರೇಣಿ ಮತ್ತು ಹೆಚ್ಚಿನ ವಿವರಗಳನ್ನು ಪರಿಶೀಲಿಸಬಹುದು. 

SCROLL FOR NEXT