ನಭೋಮಂಡಲದಲ್ಲಿ (ಬ್ರಹ್ಮಾಂಡ) ಸೃಷ್ಟಿಯು ನಿರ್ದಿಷ್ಟ ಆಯಕಟ್ಟುಗಳಿಂದ ರಚಿತವಾಗಿದೆ. ಯಾವುದೇ ಮೂಲ ವಸ್ತು ಅಥವಾ ಯಾವುದೇ ಮೂಲ ಶಕ್ತಿಯು ನಭೋಮಂಡಲದ ನಿರ್ದಿಷ್ಟ ಆಯಕಟ್ಟಿನ ನಭೋ ಪ್ರಾಂತೀಯ ಅಂತರದಲ್ಲಿಯೇ ಸೀಮಿತವಾಗಿ ಸ್ಥಿರಪಟ್ಟಿರುತ್ತದೆ. ಅಂತಹ ಯಾವುದೇ ಮೂಲಭೂತ ವಸ್ತುವಿನ ಅಥವಾ ಶಕ್ತಿಯ ಚಲನ ಸಿದ್ಧಾಂತ ಮತ್ತು ನಭೋ ಪ್ರಭಾವಗಳು ಕಾಲದ ಪರಿಮಿತಿಗಳಲ್ಲಿ ನಿರ್ದಿಷ್ಟ ದಿಕ್ಕುಗಳಲ್ಲಿ ದಿಗ್ಭಂದನಗೊಂಡಿರುತ್ತವೆ.
ಸೂರ್ಯನ ವಾರ್ಷಿಕ ಚಲನ ಸಿದ್ಧಾಂತದಲ್ಲಿ ಸಂಭವಿಸುವ ಅಯನಗಳ (ಉತ್ತರಾಯಣ ಮತ್ತು ದಕ್ಷಿಣಾಯನ) ಮತ್ತು ಋತುಮಾನಗಳನ್ನು ಅವಲಂಬಿಸಿ ನಿರ್ದಿಷ್ಟ ಪ್ರಾಣಿ ಮತ್ತು ವಸ್ತುಗಳಿಗೆ ಹೋಲಿಕೆ ಆಗುವಂಥ ಹನ್ನೆರಡು ರಾಶಿಗಳನ್ನು ಪೂರ್ವಜ ಖಗೋಳಶಾಸ್ತ್ರಜ್ಞರು ನಿರ್ಧರಿಸಿದ್ದಾರೆ.
ಭೂಮಂಡಲದ 2 ಧೃವಗಳ ಮಧ್ಯ ಇರುವ ಆತ್ಮದ ಜೀವಶಾಸ್ತ್ರ, ತತ್ವಶಾಸ್ತ್ರ, ಜ್ಯೋತಿಜ್ಞಾನ ಮತ್ತು ದೇವತಾ ಖ್ಯಾನದಲ್ಲಿ ಸಂಭವಿಸುವ ಭೌತಿಕ ಗುಣಧರ್ಮಗಳಿಗೂ ನಭೋ ಮಂಡಲದ ರಾಶಿಗಳಿಂದ ಎರಕ ಹೊಯ್ಯುವ ನಭೋ ಪ್ರಭಾವಕ್ಕೂ ಅವಿಭಾಜ್ಯ ಸಂಬಂಧವಿದೆ. ರವಿ ದೆಸೆಯಿಂದ ಕೂಡಿದ ಪವಿತ್ರ ರಾಜಯೋಗ ಮತ್ತು ಅಮೃತ ಸಿದ್ಧಿಯೋಗ ದಿನಗಳು ಮೇಷ, ವೃಷಭ ಮತ್ತು ಮಿಥುನ ರಾಶಿಗಳಿಗೆ 2013ರ ಸೆಪ್ಟೆಂಬರ್ 23ರಿಂದ ಡಿಸೆಂಬರ್ 24ರ ಅಂತರದಲ್ಲಿ ಸಂಭವಿಸಿ, ಪೂರ್ವ, ಈಶಾನ್ಯ ಮತ್ತು ಉತ್ತರ ದಿಕ್ಕುಗಳು ಶುಭದಾಯಕವಾಗಿರುತ್ತವೆ.
ಕಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಮಾರ್ಚ್ 21ರಿಂದ ಜೂನ್ 23 ದಿನಾಂಕಗಳ ಅಂತರದಲ್ಲಿ ಸಂಭವಿಸಿ, ಉತ್ತರ ವಾಯುವ್ಯ ಮತ್ತು ಪಶ್ಚಿಮ ದಿಕ್ಕುಗಳು ಶುಭದಾಯಕವಾಗಿರುತ್ತದೆ. ತುಲಾ, ವೃಶ್ಚಿಕ ಮತ್ತು ಧನು ರಾಶಿಗಳಿಗೆ ಜೂನ್ 24ರಿಂದ ಸೆಪ್ಟೆಂಬರ್ 22ರ ಅಂತರದಲ್ಲಿ ಸಂಭವಿಸಿ ಪೂರ್ವ, ಆಗ್ನೇಯ ಮತ್ತು ದಕ್ಷಿಣ ದಿಕ್ಕುಗಳ ಶುಭದಾಯಕವಾಗಿರುತ್ತದೆ. ಮಕರ ಕುಂಭ ಮತ್ತು ಮೀನ ರಾಶಿಗಳಿಗೆ ಡಿಸೆಂಬರ್ 24ರಿಂದ 2014 ಮಾರ್ಚ್ 20ರ ದಿನಾಂಕಗಳ ಅಂತರದಲ್ಲಿ ಸಂಭವಿಸಿ, ದಕ್ಷಿಣ ನೈರುತ್ಯ ಮತ್ತು ಪಶ್ಚಿಮ ದಿಕ್ಕುಗಳು ಶುಭದಾಯಕವಾಗಿರುತ್ತದೆ.
ಚಂದ್ರ ದೆಸೆ ನಿರ್ಧರಿಸಲು ಪ್ರಸಕ್ತ ಕಾಲಮಾನದಲ್ಲಿ ಸಂಭವಿಸುವ ಪೌರ್ಣಿಮೆಯ ದಿನದಿಂದ 2 ರಿಂದ 12 ಮತ್ತು 18 ರಿಂದ 24 ದಿನಗಳನ್ನು ಚಂದ್ರ ದೆಸೆ ದಿನಗಳೆಂದು ಪರಿಗಣಿಸುವುದು. ಇಂಥ ಪರ್ವ ಕಾಲದಲ್ಲಿ ಮನೋ ವಿಕಲ್ಪನಾ ಶಕ್ತಿಗಳು ಮತ್ತು ಭ್ರಾಂತಿ ಪೀಡೆಗಳು ದೂರವಾಗಿ ಅಚಲ ನಿರ್ಧಾರಗಳು ಕೈಗೂಡುತ್ತವೆ. ಮಾಹಿತಿಗೆ ಮೊ. 9945605618 ಸಂಪರ್ಕಿಸಿ.
- ವಿ. ನಾರಾಯಣ ಶೆಟ್ಟಿ ಪದ್ಮಶಾಲಿ