ಜುಲಾ ತಿಂಗಳು

ದೀಪಾವಳಿ ಹಬ್ಬವನ್ನು ಹಳ್ಳಿಗಳಲ್ಲಿ ಅದ್ಧೂರಿ, ಸಂಭ್ರಮ ಸಡಗರಗಳಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಒಂದು ದಿನವನ್ನು ಗೋಪೂಜೆ ಆಚರಿಸಲಾಗುತ್ತದೆ. ಎತ್ತುಗಳಿಗೆ ವಿಶೇಷವಾಗಿ ಢಅಲಂಕರಿಸುವ ಸಲುವಾಗಿ ಹಳ್ಳಿಗಳಲ್ಲಿ ರೈತರು ಇಡೀ ದಿನ ಮೀಸಲಿಡುತ್ತಾರೆ. ಕೊಂಬುಗಳಿಗೆ ಬಲೂನು ಕಟ್ಟಿ, ಅವುಗಳ ಮೈ ತುಂಬಾ ಜುಲಾ ಹಾಕಿ ಹಾಗೂ ಒಣ ಕೊಬ್ಬರಿಗಳಿಂದ ಸುತ್ತು ಕಟ್ಟುತ್ತಾರೆ.
ಪ್ರತಿ ಬಾರಿ ದೀಪಾವಳಿಯಲ್ಲಿ ಈ ಜುಲಾಗಳಿಗೆ ಬೇಡಿಕೆ ಬರುತ್ತದೆ. ಆಯ್ದ ಟೈಲರ್ ಬಳಿ ಜುಲಾ ಹೊಲಿದು ಕೊಡುವಂತೆ ರೈತರು ತಿಂಗಳ ಮುಂಚೆಯೇ ಹುಡುಕಿಕೊಂಡು ಬರುತ್ತಾರೆ.
ವಿಶೇಷವೆಂದರೆ ಎತ್ತಿನ ಜುಲಾಗಳನ್ನು ಹೊಲಿಯುವುದು ಬಹಳ ಕಷ್ಟದ ಕೆಲಸ. ದುಬಾರಿ ವೆಚ್ಚ ಜೊತೆಗೆ ತಾಳ್ಮೆ ಬೇಕಾಗುತ್ತದೆ. ಈ ಕಲೆಯೇ ಇಂದಿನ ದಿನಗಳಲ್ಲಿ ನಶಿಸುತ್ತಿದೆ. ಈ ಜುಲಾಗಳು ದೀಪಾವಳಿ ಹಬ್ಬದ ಸಂದರ್ಭ ಬಿಟ್ಟು ಬೇರೆ ವೇಳೆ ಯಾರೂ ಕೆಳುವುದಿಲ್ಲ. ಕೇವಲ ಒಂದು ತಿಂಗಳು ಮಾತ್ರದ ಕೆಲಸ ಇದಾಗಿದೆ. ಜುಲಾ ಹೊಲಿಯುವವರು ಹೇಳಿದಂತೆ ಬಟ್ಟೆಗಳನ್ನು ರೈತರೇ ತಂದುಕೊಟ್ಟು ಹೊಲಿಯುವಂತೆ ತಿಳಿಸುತ್ತಾರೆ.
ಕೊಂಬು, ಮುಖ, ಕಾಲು, ಬಾಲ ಹಾಗೂ ದೇಹಕ್ಕೆ ಐದು ವಿಧದಲ್ಲಿ ಒಂದು ಎತ್ತಿಗೆ ಜುಲಾ ಹೊಲಿಯಲಾಗುತ್ತದೆ. ಒಂದು ಸೆಟ್ ಹೊಲಿಯಲು 10ರಿಂದ 15 ಮೀಟರ್ ಬಟ್ಟೆ ಬೇಕಾಗುವುದು. ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆದಾಗ ಇದರ ಬಳಕೆ ಜಾಸ್ತಿ. ಶಿರಾಳಕೊಪ್ಪ, ಹೀರೆಕೇರೂರ ಮುಂತಾದ ಸ್ಥಳಗಳಲ್ಲಿ ಸ್ಪರ್ಧೆ ನಡೆಯುತ್ತಿರುತ್ತದೆ.
ಆಯನೂರು ಹಾಗೂ ಸುತ್ತಲಿನ ಗ್ರಾಮಗಳು ಅಲ್ಲದೆ ದೂರದ ಆನವಟ್ಟಿ, ಶಿರಸಿ, ಶಿಕಾರಿಪುರ, ಶಿರಾಳಕೊಪ್ಪ, ಸಾಗರ, ಸವಳಂಗ ಹಾಗೂ ಹೊನ್ನಾಳಿ ಕುಂಚೇನಹಳ್ಳಿ ಸೇರಿದಂತೆ ದೂರದ ಊರುಗಳಿಂದ ಆಯನೂರಿಗೆ ಬಂದು ಜುಲಾ ಹೊಲಿಸಿಕೊಂಡು ಹೋಗುತ್ತಾರೆ ಎಂದು ಟೈಲರ್ ಯಲ್ಲಪ್ಪ ಹೇಳುತ್ತಾರೆ.
- ಆಯನೂರು ಶಿವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


