ಮಂಗಳಗ್ರಹ

ಮಾನವ ಜೀವನ ಒಂದು ವಿಶೇಷ ಜೀವನ. ಈ ಜೀವನದಲ್ಲಿ ಮುಖ್ಯವಾದ ಹಂತ ವಿವಾಹ. ಇದು ಕೂಡಾ ನಮ್ಮ ಪೂರ್ವ ಪುಣ್ಯ ಮತ್ತು ಗ್ರಹಗಳ ಆಧಾರದ ಮೇಲೆ ನಡೆಯುತ್ತಿರುತ್ತದೆ. ನಮ್ಮ ಜಾತಕದಲ್ಲಿ ಲಗ್ನಕಾರಕ ಗ್ರಹ ನಿರ್ದಿಷ್ಟ ಸ್ಥಳದಲ್ಲಿ ಇದ್ದರೆ ಮಾತ್ರ ವಿವಾಹ ಯೋಗ ಉಂಟಾಗುವುದು.
ಲಗ್ನದಿಂದ 2, 7, 11 ನೇ ಮನೆಗಳಲ್ಲಿ ಶುಭ ಗ್ರಹಗಳಾದ ಗುರು, ಚಂದ್ರ, ಬುಧ, ಶುಕ್ರ ಇರಬೇಕು ಅಥವಾ 2, 7, 11ನೇ ಮನೆಗಳಿಗೆ ಸಂಬಂಧಿಸಿದಂತೆ ಗ್ರಹಗಳ ಜೊತೆಯಲ್ಲಿ ಶುಭ ಗ್ರಹಗಳ ದೃಷ್ಟಿ ಇರಬೇಕು. 2,7,11ನೇ ಅಧಿಪತಿಗಳು ಅನ್ಯಗ್ರಹಗಳ ಜೊತೆ ಇರಬೇಕು ಅಥವಾ ಸ್ಥಾನಗಳಲ್ಲಿ ಶುಭಗ್ರಹಗಳು ಇರಬೇಕು. ಹೀಗಿದ್ದ ಪಕ್ಷದಲ್ಲಿ ವಿವಾಹ ಜೀವನ ಸುಖಮಯವಾಗಿರುತ್ತದೆ.
ಲಗ್ನದಿಂದ 7ನೇ ಮನೆಯಲ್ಲಿ ರವಿ ಇದ್ದರೆ ವಿವಾಹ ಜೀವನ ಅಷ್ಟೊಂದು ಸುಖವಾಗಿರುವುದಿಲ್ಲ, ಮನಸ್ಸಿಗೆ ಹಿತಕರವಾಗಿರುವುದಿಲ್ಲ ಮತ್ತು ಇವರಿಗೆ ವಿವಾಹ ವಿಳಂಬವಾಗುತ್ತದೆ. ಲಗ್ನದಿಂದ 7ನೇ ಮನೆಯಲ್ಲಿ ಚಂದ್ರ ಇದ್ದರೆ ಇವರ ವೈವಾಹಿಕ ಜೀವನ ಮತ್ತು ದೈಹಿಕ ತೃಪ್ತಿ ಬಹಳ ಸುಖಮಯವಾಗಿದ್ದು, ಜೇನು ತುಪ್ಪ ಸವಿದಂತೆ ಆನಂದಮಯ ಜೀವನವಾಗಿರುತ್ತದೆ.
ಲಗ್ನದಿಂದ 7ನೇ ಮನೆಯಲ್ಲಿ ಮಂಗಳ (ಕುಜ) ಗ್ರಹವಿದ್ದರೆ ಸಣ್ಣಪುಟ್ಟ ವ್ಯಾಜ್ಯ ಮನಸ್ತಾಪ ಉಂಟಾಗಿ ದಂಪತಿಗಳಿಬ್ಬರು ಸಂತೋಷವನ್ನು ಅನುಭವಿಸಲಾಗುವುದಿಲ್ಲ. ಲಗ್ನದಿಂದ 7ನೇ ಮನೆಯಲ್ಲಿ ಬುಧ ಗ್ರಹವಿದ್ದರೆ ಸುಖಕರವಾದ ವೈವಾಹಿಕ ಜೀವನ ಅನ್ಯೋನ್ಯತೆ ಮತ್ತು ದೈಹಿಕ ಸುಖ ಹೆಚ್ಚು ತೃಪ್ತಿಕರವಾಗಿರುತ್ತದೆ.
ಲಗ್ನದಿಂದ 7ನೇ ಮನೆಯಲ್ಲಿ ಬೃಹಸ್ಪತಿ (ಗುರು) ಇದ್ದರೆ ಪತಿವ್ರತೆಯಾದ ಹೆಂಡತಿಯನ್ನು ಹೊಂದಿ ವಿವಾಹ ಜೀವನವು ಅತ್ಯಂತ ಸಂತೋಷ ಉಂಟುಮಾಡುತ್ತದೆ.
ಲಗ್ನದಿಂದ 7ನೇ ಮನೆಯಲ್ಲಿ ಶುಕ್ರ ಗ್ರಹವಿದ್ದರೆ ವೈವಾಹಿಕ ಜೀವನ ಆನಂದಮಯವಾಗಿರುತ್ತದೆ ಮತ್ತು ದೈಹಿಕ ತೃಪ್ತಿ ಉನ್ನತ ಮಟ್ಟದಲ್ಲಿರುತ್ತದೆ. ಲಗ್ನದಿಂದ 7ನೇ ಮನೆಯಲ್ಲಿ ಶನಿ ಇದ್ದರೆ ಇವರ ಜೀವನವು ಅತೃಪ್ತಿ ಮತ್ತು ವಿವಾಹ ವಿಳಂಬ, ಶೀಘ್ರ ವಿವಾಹವಾಗಿದ್ದರೆ ವಿಚ್ಛೇದನ, ವಿಳಂಬ ವಿವಾಹವಾಗಿದ್ದರೂ ಇವರಿಗೆ ಜೀವನ ಸುಖಮಯವಾಗದೆ ತೃಪ್ತಿ ಇಲ್ಲದ ಜೀವನವಾಗಿರುತ್ತದೆ.
ಲಗ್ನದಿಂದ 7ನೇ ಮನೆಯಲ್ಲಿ ರಾಹು ಮತ್ತು ಕೇತುಗಳಿದ್ದರೆ ಏರುಪೇರಿನ ಜೀವನ ಮತ್ತು ಹೊಂದಾಣಿಕೆ ಇಲ್ಲದೆ ಮನಸ್ಸಿನ ನೆಮ್ಮದಿ ಹಾಳಾಗಿ ವೈವಾಹಿಕ ಜೀವನ ಅತೃಪ್ತಿಯಿಂದ ಕೂಡಿರುತ್ತದೆ.
- ಅಂಜನ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


