ವಿಮುಕ್ತಿ

ಸೂರ್ಯನ ವಾರ್ಷಿಕ ಚಲನ ಸಿದ್ಧಾಂತದಲ್ಲಿ ಸಂಭವಿಸುವ ಋತುಮಾನಗಳ ಮೇರೆಗೆ ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರು ನಭೋಮಂಡಲವನ್ನು 12 ವಿಭಾಗಗಳನ್ನಾಗಿ ವಿಭಜಿಸಿ ಪ್ರತಿಯೊಂದು ವಿಭಾಗದಲ್ಲಿ ಸ್ಥಿರಪಟ್ಟಿರುವ ನಿರ್ದಿಷ್ಟ ತಾರಾಮಂಡಲ ಗುರುತಿಸಿದ್ದಾರೆ.
ಮಾತ್ರವಲ್ಲದೆ ಆ ತಾರಾಮಂಡಲದಲ್ಲಿ ಹುದುಗಿಕೊಂಡಿರುವ ತಾರೆಗಳ ಆಕಾರಗಳನ್ನು ಪರಿಗಣಿಸಿ ಮೇಷ, ವೃಷಭ, ಮಿಥುನ ಮತ್ತು ಕಟಕ ಮುಂತಾಗಿ 12 ರಾಶಿಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಳವಡಿಸಲಾಗಿದೆ. ಪ್ರಮುಖವಾಗಿ ಪ್ರತಿಯೊಂದು ರಾಶಿಯಲ್ಲಿ ಸೂರ್ಯನ ಪ್ರವೇಶ ಮತ್ತು ನಿರ್ಗಮನದ ಕಾಲಮಾನದಲ್ಲಿ ಸಂಭವಿಸುವ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಂದ ಪೃಥ್ವಿ ಮೇಲೆ ಎರಕ ಹೊಯ್ಯುವ ನಭೋ ಪ್ರಭಾವದಿಂದ ಘಟಿಸಬಹುದಾದ ಅದೃಷ್ಟ ಮತ್ತು ದೆಸೆಗಳನ್ನು ತಿಳಿಸುವಲ್ಲಿ ಜ್ಯೋತಿಷ್ಯ ಶಾಸ್ತ್ರಜ್ಞರು ಸಫಲರಾಗಿದ್ದಾರೆ.
12 ರಾಶಿಗಳಲ್ಲಿ ಮಕರ ರಾಶಿ ಪರಮ ಪವಿತ್ರ ಎನಿಸಿದೆ. ಗ್ರಹದೋಷಗಳನ್ನು ದಮನ ಮಾಡಿ ಉಜ್ವಲ ಭವಿಷ್ಯ ತರುವ ರಾಶಿ ಎನಿಸಿದೆ. ಈ ರಾಶಿಯಲ್ಲಿ ಸೂರ್ಯ ಡಿ.21ರಂದು ಪ್ರವೇಶ ಹೊಂದಿ ಜನವರಿ 20ರಂದು ನಿರ್ಗಮಿಸುತ್ತಾನೆ. ಈ ಕಾಲಮಾನದ ಕಾಲಗಣನಾಚಕ್ರದಲ್ಲಿ ಎಲ್ಲಾ ರಾಶಿಗಳಲ್ಲಿಯೂ ಭೌತಿಕ ಸಂಚಲನ ಉಂಟಾಗುತ್ತದೆ.
ಪ್ರಮುಖವಾಗಿ ಎಲ್ಲಾ ರಾಶಿಗಳಲ್ಲಿ ಹುದುಗಿರುವ 'ಗ್ರಹದೋಷ'ಗಳನ್ನು ದಮನ ಮಾಡಿ ಸ್ವಚ್ಛ ಮಾಡಲು ಸಹಕಾರಿಯಾಗುತ್ತಿದೆ. 37 ಜ್ಯೋತಿರ್ವರ್ಷ ದೂರದಲ್ಲಿ ಮಕರ ರಾಶಿಯಲ್ಲಿನ ನಕ್ಕು- ನಗಿಸುವ ಎಂಟು ಮಹಾತಾರೆಗಳ ಪೈಕಿ 'ದೇನೇಬ್' ಎಂಬ ಸ್ವರ್ಣಮಯ ಪ್ರಜ್ವಲಿಸುವ ತಾರೆ ಖಗೋಳ ಶಾಸ್ತ್ರದಲ್ಲಿ ಮಹತ್ತರ ಸ್ಥಾನ ಪಡೆದಿದ್ದು, ಎಂತಹ ಗ್ರಹದೋಷಗಳನ್ನು ದೂರ ಸರಿಸಲು ಇದು ಸಹಕಾರಿಯಾಗುತ್ತದೆ. ದೋಷಗಳಲ್ಲಿ ಪ್ರಮುಖವಾಗಿ ಶನಿ, ಕುಜ ಮತ್ತು ಸರ್ವದೋಷಗಳೆಂದು ಪರಿಗಣಿಸಲಾಗಿದೆ. ಶನಿದೋಷ ಇದ್ದರೆ, ಸಾಲಗಳಿಂದ ಸಂಕೋಲೆ, ನಿವಾಸದಲ್ಲಿ ಅಶಾಂತಿ, ಬಂಡವಾಳ ಕುಂಠಿತ, ಮಾನಸಿಕ ಅಸ್ವಾಸ್ಥ್ಯತೆ, ಸಂಶೋಧನೆಗಳು ವಿಫಲ, ದುಂದುವೆಚ್ಚ ದುವ್ಯವಹಾರ, ಮನಸ್ಸು ಸದಾ ಚಂಚಲ.
ಕುಜದೊಷವಿದ್ದರೆ, ಕಂಕಣ ಭಾಗ್ಯ ವಿಳಂಬ, ದಂಪತಿಗಳಲ್ಲಿ ವಿರಸ, ಮನೋವಿಕಲ್ಪನಾ ಶಕ್ತಿಗಳಿದ್ದು ನಿದ್ದೆ ಬಾರದಿರುವಿಕೆ, ಆಕಸ್ಮಿಕ ಆಘಾತ ಮತ್ತು ಅವಗಡಗಳು ಸಂಭವ, ದಾಂಪತ್ಯ ಜೀವನದಲ್ಲಿ ನಿಷ್ಕ್ರಿಯತೆ, ಸರ್ಪದೋಷವಿದ್ದರೆ, ಸಂತಾನ ವಿಳಂಬ, ಸ್ಥಿರ ಮತ್ತು ಚರ ಆಸ್ತಿಗಳಿಂದ ದೂರ, ಇದ್ದಕ್ಕಿದ್ದಂತೆ ನಿವಾಸದಿಂದ ಹೊರಹೋಗುವುದು, ನರಗಳ ದೌರ್ಬಲ್ಯ ಮತ್ತು ಮೈಗ್ರೇನ್ ಕಾಯಿಲೆಗಳಿಂದ ಸದಾ ಬಳಲುತ್ತಿರುವಿಕೆ.
ಮಹಾ ದೆಸೆ
* ಮೇಷ, ಮೀನ ರಾಶಿಯವರಿಗೆ 2014, ಮಾರ್ಚಿ 21 ಅಂದರೆ ಚಂದ್ರ ಮಹಾ ದೆಸೆ ಪ್ರಾರಂಭ (ಮೂರು ವರ್ಷಗಳು)
* ವೃಷಭ, ತುಲಾ ರಾಶಿಯವರಿಗೆ 2013 ಸೆಪ್ಟೆಂಬರ್ 21 ರಂದು ಗುರುಮಹಾ ದೆಸೆ ಪ್ರಾರಂಭವಾಗಿದೆ. ಮಿಥುನ- ವೃಶ್ಚಿಕ ರಾಶಿಯವರಿಗೆ 2013 ಡಿಸೆಂಬರ್ 24 ರಂದು ಶುಕ್ರ ಮಹಾ ದೆಸೆ ಪ್ರಾರಂಭವಾಗಿದೆ.
* ಕರ್ಕಾಟಕ- ಕುಂಭ ರಾಶಿಯವರಿಗೆ 2014 ಫೆ. 20 ರಂದು ಗುರು ಮಹಾದೆಸೆ ಪ್ರಾರಂಭ. 2014 ಆಗಸ್ಟ್ 29 ರಿಂದ 11 ತಿಂಗಳು ರಾಜಯೋಗ ಮತ್ತು ಅಮೃತ ಸಿದ್ಧಯೋಗ ಪ್ರಾಪ್ತಿ.
* ಸಿಂಹ- ಮಕರ ರಾಶಿಯವರಿಗೆ 2013, ಮಾರ್ಚಿ 21 ಶುಕ್ರ ಮಹಾದೆಸೆ ಪ್ರಾರಂಭ. 2013, ಸೆಪ್ಟೆಂಬರ್ 23 ರಾಜಯೋಗ, ಕನ್ಯಾ-ಧನಸ್ಸು ರಾಶಿಯವರಿಗೆ 2014 ಜನವರಿ 21 ರಂದು ಶನಿಮಹಾ ದೆಸೆ ಪ್ರಾರಂಭ. 2013, ಡಿಸೆಂಬರ್ 24 ರಿಂದಲೇ ರಾಜಯೋಗ ಪ್ರಾಪ್ತಿ.
- ವಿ. ನಾರಾಯಣ ಶೆಟ್ಟಿ ಪದ್ಮಸಾಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


