ನೀವೆಷ್ಟು ಸಲ ಉಸಿರಾಡುತ್ತೀರಿ?

ಮಾನವ ಶರೀರ ಎನ್ನುವುದು ಒಂದು ಕೋಶದ ಪ್ರತಿರೂಪ. ಈ ಕೋಶ ಅಸ್ತಿತ್ವ ಪಡೆಯುವುದು ತಾಯಿಯ ಗರ್ಭದಲ್ಲಿ. ಆ ನಂತರ ಅದಕ್ಕೆ ಹಲವಾರು ಅಂಗಾಂಗಗಳು ಸೇರಿಕೊಳ್ಳುತ್ತ ಶರೀರದ ಸ್ವರೂಪ ತಾಳುತ್ತದೆ. ವಯಸ್ಸಾಗುವಿಕೆ ಹಲವು ಹಂತಗಳಲ್ಲಿ ನಡೆಯುತ್ತದೆ. ಕೋಶದಲ್ಲಿ ಯಾವ ರೀತಿಯ ಪದಾರ್ಥಗಳು ಅತಿಯಾಗಿ ಸಂಗ್ರಹಗೊಳ್ಳುತ್ತವೆ ಎನ್ನುವುದರ ಆಧಾರದ ಮೇಲೆ ದೋಷ ಅಥವಾ ರೋಗವನ್ನು ಗುರುತಿಸಲಾಗುತ್ತದೆ. ಬೊಜ್ಜು, ಖಿನ್ನತೆ, ಹೃದ್ರೋಗ...ಹೀಗೆ. ಇವೆಲ್ಲವೂ ವಯಸ್ಸಾಗುವಿಕೆಯನ್ನು ತೀವ್ರಗೊಳಿಸುವಂಥವೇ.
ಶಿಶು ಜನಿಸಿದ ದಿನದಿಂದಲೇ ವಯಸ್ಸಾಗುವ ಪ್ರಕ್ರಿಯೆಯೂ ಶುರುವಾಗುತ್ತದೆ. ಈ ಪ್ರಕ್ರಿಯೆ ಆರಂಭವಾಗುವುದು ಉಸಿರಾಟದಿಂದ. ಪ್ರತಿ ಉಸಿರೂ ಶಕ್ತಿಯನ್ನು ಉತ್ಪಾದಿಸುತ್ತದೆ. ಉಸಿರು ಒಳಗೆ ಎಳೆದುಕೊಂಡಾಗ ಅದರಲ್ಲಿ ವಿಷಕಾರಿ ಅಂಶಗಳೂ ಸೇರಿರುವುದರಿಂದ ಕೋಶದ ಮೇಲೆ ಸಮಾನ ಮತ್ತು ತದ್ವಿರುದ್ಧ ಪರಿಣಾಮ ಉಂಟಾಗುತ್ತದೆ. ಅದನ್ನೇ ಆಯುರ್ವೇದದಲ್ಲಿ 'ಆಮ' ಎಂದಿರುವುದು. ಈ ಉಸಿರಾಟವೇ ಚರ್ಮ ಬಿಗಿ ಕಳೆದುಕೊಳ್ಳುವುದು, ಪಂಚೇಂದ್ರಿಯಗಳ ಸಾಮರ್ಥ್ಯ ಕಡಿಮೆಯಾಗುವುದು ಮೊದಲಾದ ಸಂಗತಿಗಳಿಗೂ ಕಾರಣವಾಗುತ್ತದೆ.
ನಿಮ್ಮ ಆರೋಗ್ಯದ ಸ್ಥಿತಿ ಅರಿತುಕೊಳ್ಳುವ ಸುಲಭ ವಿಧಾನ ಎಂದರೆ ಉಸಿರಾಟ. ಒಂದು ನಿಮಿಷದಲ್ಲಿ 10ಕ್ಕಿಂತ ಕಡಿಮೆ ಸಲ ಉಸಿರಾಟ ನಡೆಸುತ್ತೀರಿ ಎಂದಾದರೆ ನಿಮ್ಮದು ಅತ್ಯುತ್ತಮ ಆರೋಗ್ಯ. ಈ ಸಂಖ್ಯೆ 15 ಮೀರಿದರೆ ಅನಾರೋಗ್ಯ ಕಾಡುತ್ತದೆ ಅಥವಾ ವಯಸ್ಸಾಗುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದೆ ಎಂದರ್ಥ. ನೀವು ಯಾವ ವಯಸ್ಸಿನವರೇ ಆಗಿದ್ದರೂ ಉಸಿರಾಟದ ಪ್ರಮಾಣ ಜಾಸ್ತಿಯಾದರೆ ನೀವು ಅಕಾಲ ಮುಪ್ಪಿನತ್ತ ದಾಪುಗಾಲಿಡುತ್ತಿದ್ದೀರಿ ಎಂದೇ ಅರ್ಥ.
ಉಸಿರಾಟದ ಮೂಲಕ ಉತ್ತಮ ಆರೋಗ್ಯ ಪಡೆಯಲು ಪ್ರಾಣಾಯಾಮ ಅತ್ಯಂತ ಉಪಯುಕ್ತ. ಅದನ್ನು ಗುರುಮುಖೇನವೇ ಕಲಿತುಕೊಳ್ಳಬೇಕು. ನಮ್ಮ ಶರೀರ ಹೇಗೆ ಕೆಲಸ ಮಾಡುತ್ತದೆ, ಹೇಗೆ ಶಕ್ತಿ ಉತ್ಪಾದನೆಯಾಗುತ್ತದೆ, ದೇಹದೊಳಗಿನ ತ್ಯಾಜ್ಯಗಳನ್ನು ಹೊರಹಾಕುವುದು ಹೇಗೆ ಇದೆಲ್ಲವನ್ನೂ ಅರಿತುಕೊಳ್ಳುವುದು ಅಗತ್ಯ. ಅಲ್ಲದೆ ನಮ್ಮ ಕ್ರಿಯೆ ಮತ್ತು ಪ್ರಾಣಾಯಾಮ ಇವುಗಳ ನಡುವೆ ಸಮತೋಲನ ಸಾಧಿಸುವುದೂ ಮುಖ್ಯವಾಗುತ್ತದೆ. ಆದ್ದರಿಂದಲೇ ಯೋಗ ಮತ್ತು ಸನಾತನ ಕ್ರಿಯೆಯಲ್ಲಿ ಗುರು-ಶಿಷ್ಯ ಸಂಬಂಧಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ಇವನ್ನು ಗುರುಮುಖೇನವೇ ಕಲಿತು ಆಚರಣೆಗೆ ತರುವುದು ಸೂಕ್ತ.
-ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


