ಹರಿ ನಾಮವೇ ಚಂದ...

ಮಾನವ ಜೀವನದಲ್ಲಿನ ಎಲ್ಲಾ ಅಮಂಗಳಗಳನ್ನು ತೆಗೆಯುತ್ತಾನೋ ಹಾಗೂ ಭಕ್ತನಿಗೆ ಅಲೌಕಿಕ ದೈವ ಪ್ರೇಮ ಪ್ರಧಾನ ಮಾಡುತ್ತಾನೊ ಆ ಭಗವಂತನನ್ನೇ 'ಹರಿ' ಎಂದು ಸ್ಮರಿಸುತ್ತಾರೆ. ಆ ಹರಿಯೆನಿಸಿದ ಶ್ರೀಕೃಷ್ಣನು ಎಷ್ಟು ಮನೋಹರನೆಂದರೆ ಒಂದಲ್ಲಾ ಒಂದು ವಿಧದಲ್ಲಿ ಅವನ ಸ್ಮರಣೆ ನಿರಂತರವಾಗಿ ಮಾಡುವವನಿಗೆ ಬದುಕಿನ ನಾಲ್ಕು ಬಗೆಯ ತಾಪಗಳಾದ ಹುಟ್ಟು-ಸಾವು, ರೋಗ-ರುಜಿನ, ವೃದ್ಧಾಪ್ಯಗಳಿಂದ ಮುಕ್ತನಾಗುವಂತೆ ಮಾಡುತ್ತಾನೆ.
ದೇವೋತ್ತಮ ಪರಮ ಪುರುಷ ಹರಿಯನ್ನು ಕುರಿತು ಶ್ರವಣ ಮಾಡುವುದು. ಅವನ ನಾಮ ಸಂಕೀರ್ತನೆ ಮಾಡುವುದು ಹಾಗೂ ಸದಾ ಅವನ ಸ್ಮರಣೆಯಲ್ಲಿರುವುದು ಭಯ ವಿಹೀನರಾಗಬಯಸುವ ಎಲ್ಲಾ ಜನರ ಕರ್ತವ್ಯ.
ಭಗವಾನ್ ವಿಷ್ಣುವಿನ ಸದಾ ಸ್ಮರಣೆಯಲ್ಲಿರಬೇಕು. ವಾಸ್ತವವಾಗಿ ಅವನನ್ನು ಒಂದು ಕ್ಷಣವೂ ಮರೆಯಬಾರದು. ಎಲ್ಲಾ ನಿಯಂತ್ರಕ ತತ್ವಗಳ ಸಾರಸರ್ವಸ್ವ ಅವನು. ಪ್ರತಿಯೊಬ್ಬನ ಹೃದಯದಲ್ಲಿರುವ ದೇವೋತ್ತಮ ಪರಮ ಪುರುಷನ ಸ್ಮರಣೆ ಶಕ್ತಿ ಸೇವೆಯ ಗುರಿಯಾಗಿ ಭಕ್ತಿ ಸೇವೆಯನ್ನು ಶುದ್ಧವಾಗಿಯೂ, ವಾತ್ಸಲ್ಯ ಪೂರ್ಣವಾಗಿಯೂ ಮಾಡಿದರೆ ನಿಯಂತ್ರಕ ತತ್ವಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಇದನ್ನು ಶ್ರೀಮದ್ಭಾಗವತ ವಿವರಿಸಿದೆ. ನಾಮೋಚ್ಚಾರಣೆಯ ದಿವ್ಯ ಬಣ್ಣದ ತರಂಗಗಳ ಅಲೆಗಳು ಜಡ ದೇಹವನ್ನು ಪವಿತ್ರಗೊಳಿಸುತ್ತದೆ. ಈ ದಿವ್ಯ ಶಬ್ದದ ಅಲೆಗಳು. ಭೌತಿಕ ಅಸ್ತಿತ್ವದಿಂದ - ಭಗವದ್ಭಾವಕ್ಕೆ, ಮೃತ್ಯುವಿನಿಂದ - ಅಮೃತತ್ವಕ್ಕೆ, ಅಜ್ಞಾನದಿಂದ - ಸುಜ್ಞಾನದೆಡೆಗೆ, ಐಹಿಕ - ಕ್ಲೇಶಗಳಿಂದ ಪರಮಾನಂದಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ಮರಣೋನ್ಮುಖ ಸನ್ನಿಹಿತ ಕಾಲದಲ್ಲಿಯೂ ಸಹಾ ಹರಿನಾಮ ಸ್ಮರಣೆಯನ್ನು ಉಚ್ಚಸ್ವರ (ಗಟ್ಟಿಯಾಗಿ)ದಲ್ಲಿ ಮಾಡಿದಾಗ ಭಗವದ್ಭಾವಕ್ಕೆ ಹೋಗುವುದು ಖಚಿತವೆಂದು ಭಗವದ್ಗೀತೆಯಲ್ಲಿ ವಿವರಿಸಿದೆ.
-ಕೆ.ಎನ್. ಸಂಜೀವ ಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


