ಸ್ವಪ್ರತಿಷ್ಠೆಯೇ ನೋವಿಗೆ ಕಾರಣ

ಬೆಂಗಳೂರು: ತೊಂದರೆಗಳನ್ನು ದೊಡ್ಡವು ಮತ್ತು ಚಿಕ್ಕವು ಎಂದು ವಿಂಗಡಿಸುವುದೇಕೆ? ಎಲ್ಲವು ತೊಂದರೆಯೇ ಅಲ್ಲವೇ? ಇವುಗಳನ್ನು ಸಣ್ಣ ಅಥಾವ ದೊಡ್ಡ, ಅವಶ್ಯಕ ಅಥವಾ ಅನವಶ್ಯಕ ತೊಂದರೆಗಳೆಂದುಕೊಳ್ಳುವುದೇಕೆ? ಒಂದು ತೊಂದರೆಯ ಬಗ್ಗೆ ಅರಿತುಕೊಳ್ಳಬೇಕಾದಾರೆ ಅದು ದೊಡ್ಡದಾಗಿಯೇ ಇರಲಿ ಸಣ್ನದಾಗಿಯೆ ಇರಲಿ ಅದರ ಆಳಕ್ಕೆ ಹೋಗಬೇಕೆ, ಆಗ ಅದು ಎಲ್ಲ ತೊಂದರೆಗಳನ್ನು ಪರಿಹರಿಸುತ್ತದೆ.
ಇದು ಸುತ್ತಿ ಬಳಸಿ ಅದನ್ನೇ ಹೇಳುತ್ತಿರುವ ಉತ್ತರವಲ್ಲ. ಯಾವುದೇ ತೊಂದರೆಯನ್ನು ತೆಗೆದುಕೊಳ್ಳಿ. ಕೋಪ, ಹೊಟ್ಟೆಕಿಚ್ಚು, ಅಸೂಯೆ, ದ್ವೇಷ ಇವೆಲ್ಲದರ ಬಗ್ಗೆ ನಮಗೆ ಚೆನ್ನಾಗಿಯೇ ಗೊತ್ತಿದೆ. ಕೋಪವನ್ನು ಸುಮ್ಮನೆ ತಳ್ಳಿಹಾಕದೆ ಅದರ ಆಳಕ್ಕೆ ಇಳಿದರೆ, ಈ ಕೋಪದಲ್ಲಿ ಭಾಗಿಯಾಗಿರುವುದೇನು? ಒಬ್ಬನು ಕೋಪಗೊಳ್ಳುವುದೇಕೆ? ಏಕೆಂದರೆ ಅವನಿಗೆ ಘಾಸಿಯಾಗಿದೆ, ಅವನಿಗೆ ಯಾರೋ ನಿರ್ದಯಿಯಾಗಿ ಮಾತನ್ನಾಡಿದ್ದಾರೆ. ಯಾರಾದರೂ ನಮ್ಮನ್ನು ಹೊಗಳಿದರೆ ನಾವು ಖುಷಿಯಾಗಿರುತ್ತೇವೆ.
ನಿಮಗೆ ನೋವಾಗುವುದೇಕೆ? ಸ್ವಪ್ರತಿಷ್ಠೆಯಿಂದ ಅಲ್ಲವೇ? ಈ ಸ್ವಪ್ರತಿಷ್ಠೆ ಇರುವುದಾದರೂ ಏಕೆ?
ಏಕೆಂದರೆ ಒಬ್ಬನಿಗೆ ತನ್ನದೇ ಆದ ಐಡಿಯಾ ಇದೆ, ಅವನದೇ ಆದ ಲಕ್ಷಣ ಇದೆ. ಅವನದೇ ಆದ ಇಮೇಜ್ ಇದೆ, ಅವನು ಏನಾಗಿರಬೇಕು- ಏನಾಗಿರಬಾರದು ಎಂದು ನಿರ್ಧರಿಸಲು. ಈ ರೀತಿಯ ಸ್ವಂತದ ಇಮೇಜ್ ಒಂದನ್ನು ಏಕೆ ಸೃಷ್ಟಿಸಿಕೊಳ್ಳುತ್ತಾನೆ? ಏಕೆಂದರೆ ಅವನು ತನ್ನ ಬಗ್ಗೆ ಸರಿಯಾದ ಅಧ್ಯಯನ ಮಾಡಿಕೊಂಡಿರುವುದಿಲ್ಲ.
ನಾವು ಎಲ್ಲರಿಗೂ ಆದರ್ಶವಾಗಿರಬೇಕು, ಹೀರೊ ಆಗಬೇಕು ಎಂದೆಲ್ಲಾ ಚಿಂತಿಸುತ್ತಿರುತ್ತೇವೆ. ನಾವು ನಮ್ಮ ಬಗ್ಗೆ ಏನು ಅಂದುಕೊಂಡಿರುತ್ತೇವೊ ಅದೇ ಕೋಪವನ್ನು ಎಚ್ಚರಿಸುವುದು. ನಾವು ನಮ್ಮ ಬಗ್ಗೆ ತಿಳಿದುಕೊಂಡಿರುವುದೆ, ನಿಜವಾಗಿ ನಾವೇನಾಗಿದ್ದೇವೊ ಅದರಿಂದ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಕಾರಣ. ನಾವು ನಮ್ಮ ಬಗಿಗಿನ ಖಚಿತವಾದ ಮಾಹಿತಿಯನ್ನು ಗಮಸಿದಾಗ ಯಾರೂ ನಮಗೆ ನೋವುಂಟು ಮಾಡಲು ಸಾಧ್ಯವಿಲ್ಲ. ಒಬ್ಬ ಸುಳ್ಳುಗಾರನಾಗಿದ್ದು, ಅವನನ್ನು ಸುಳ್ಳುಗಾರನೆಂದು ಕರೆದರೆ ಅವನಿಗೆ ನೋವಾಗುವುದಿಲ್ಲ. ಅದು ಖಚಿತತೆ. ಆದರೆ ಸುಳ್ಳುಗಾರನಾಗಿದ್ದು ನೀವು ಸತ್ಯವಂತನ ವೇಷ ತೊಟ್ಟು ನಟಿಸುತ್ತಿದ್ದರೆ, ನಿಮ್ಮನ್ನು ಸುಳ್ಳುಗಾರನೆಂದು ಕರೆದಾಗ ಕೋಪ ತಾಪಗಳು ಬರುತ್ತವೆ. ಅದಕ್ಕೇ ಹೇಳಿದ್ದು, ನಾವು ಯಾವಾಗಲೂ ನಮ್ಮ ಸುತ್ತ ಕಾಲ್ಪನಿಕ ಲೋಕ ಕಟ್ಟಿಕೊಂಡು ಬದುಕುತ್ತಿರುತ್ತೇವೆ, ನಮ್ಮ ನಿಜವಾದ ಲೋಕವನ್ನು ಅರಿಯುವುದೇ ಇಲ್ಲ.
ನಾವೇನೆಂದು ಗಮನಿಸಲು, ಅದನ್ನು ನೋಡಲು, ಅದನ್ನು ಅರಿಯಲು ಅದರ ಬಗ್ಗೆ ತೀರ್ಪು ಕೊಡಬೇಕಾಗಿಲ್ಲ, ಅದನ್ನು ಪರೀಕ್ಷಿಸಬೇಕಿಲ್ಲ, ಅದರ ಬಗ್ಗೆ ಅಭಿಪ್ರಾಯ ಕೊಡಬೇಕಿಲ್ಲ, ಅದರ ಬಗ್ಗೆ ಭಯ ಬೇಕಿಲ್ಲ.
ಜಿಡ್ಡು ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


