ಸಂಪೂರ್ಣ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಯಾಕೆ ಗೊತ್ತಾ?

ಗ್ರಹಣ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆದಿದ್ದು ಖಗೋಳ ವಿದ್ಯಮಾನವಾದರೂ ಭಾರತದ ಮಟ್ಟಿಗೆ ಧಾರ್ಮಿಕ ನಂಬಿಕೆಗಳು ಬೆಸೆದುಕೊಂಡಿದೆ...
ಸಂಪೂರ್ಣ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಯಾಕೆ ಗೊತ್ತಾ?
ಗ್ರಹಣ ಭಾರತದಲ್ಲಿ ವಿಶೇಷ ಮಹತ್ವವನ್ನು ಪಡೆದಿದ್ದು ಖಗೋಳ ವಿದ್ಯಮಾನವಾದರೂ ಭಾರತದ ಮಟ್ಟಿಗೆ ಧಾರ್ಮಿಕ ನಂಬಿಕೆಗಳು ಬೆಸೆದುಕೊಂಡಿದೆ. ಇತ್ತೀಚೆಗಷ್ಟೇ ಭಾರತದಲ್ಲಿ ಚಂದ್ರ ಗ್ರಹಣ ಗೋಚರವಾಗಿತ್ತು, ಇದಾದ ಬೆನ್ನಲ್ಲೇ ಸಂಪೂರ್ಣ ಸೂರ್ಯ ಗ್ರಹಣ ನಡೆಯಲಿದೆ. ಆದರೆ ಇದು ಭಾರತದ ಮಟ್ಟಿಗೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ, ಅಷ್ಟೇ ಅಲ್ಲದೇ ಈ ಸೂರ್ಯ ಗ್ರಹಣ ಗೋಚರಿಸುವುದೂ ಇಲ್ಲ. 
ಏಕೆಂದರೆ 99 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕಾದಾದ್ಯಂತ ಈ ಗ್ರಹಣ ಗೋಚರಿಸಲಿದೆ. ಆದ್ದರಿಂದಲೇ ಇದನ್ನು ಗ್ರೇಟ್ ಅಮೆರಿಕನ್ ಎಕ್ಲಿಪ್ಸ್ ಎಂದು ಕರೆಯಲಾಗಿದ್ದು, ಆಗ್ನೇಯದಿಂದ ವಾಯುವ್ಯಕ್ಕೆ ಗ್ರಹಣ ಗೋಚರಿಸಲಿದೆ. ಆಫ್ರಿಕಾ ಮತ್ತು ಯೂರೋಪ್‍ನಿಂದಲೂ ಪಾರ್ಶ್ವ ಗ್ರಹಣ ದರ್ಶನವಾಗಲಿದ್ದು ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ರಾತ್ರಿ ಆಗಿರುತ್ತದೆ. ಹೀಗಾಗಿ ಭಾರತದಲ್ಲಿ ಇದರ ಪರಿಣಾಮವಿರುವುದಿಲ್ಲ ಎಂದು ಹೇಳಲಾಗಿದೆ.
14 ರಾಜ್ಯಗಳಲ್ಲಿರುವ 12 ಮಿಲಿಯನ್ ಜನರಿಗೆ ಗ್ರಹಣ ಸಂಪೂರ್ಣವಾಗಿ ಗೋಚರಿಸಲಿದ್ದು, ಹಲವೆಡೆ ಪಾರ್ಶ್ವವಾಗಿ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com