ವಿಜ್ಞಾನಕ್ಕೂ ಸವಾಲಾಗಿರುವ ಭಾರತದ ಪುರಾತನ ದೇವಾಲಯಗಳು

ಭಾರತ ಪೌರಾಣಿಕ ರಹಸ್ಯಗಳ ತಾಣ. ಕೆಲವೊಂದು ವಿಶಿಷ್ಟ ಪ್ರದೇಶಗಳು ಬಗೆಹರಿಸಲಾರದಂತಹ ರಹಸ್ಯವನ್ನು ತನ್ನೊಳಗಿಟ್ಟುಕೊಂಡಿದ್ದು, ವಿಜ್ಞಾನಕ್ಕೂ ಸಹ ಸವಾಲಾಗಿ ನಿಂತಿವೆ. ಈ ಪೈಕಿ ದೇವಾಲಯಗಳೂ ಇವೆ.
ವಿಜ್ಞಾನಕ್ಕೂ ಸವಾಲಾಗಿರುವ ಭಾರತದ ಪುರಾತನ ದೇವಾಲಯಗಳು
ವಿಜ್ಞಾನಕ್ಕೂ ಸವಾಲಾಗಿರುವ ಭಾರತದ ಪುರಾತನ ದೇವಾಲಯಗಳು
ಭಾರತ ಪೌರಾಣಿಕ ರಹಸ್ಯಗಳ ತಾಣ. ಕೆಲವೊಂದು ವಿಶಿಷ್ಟ ಪ್ರದೇಶಗಳು ಬಗೆಹರಿಸಲಾರದಂತಹ ರಹಸ್ಯವನ್ನು ತನ್ನೊಳಗಿಟ್ಟುಕೊಂಡಿದ್ದು, ವಿಜ್ಞಾನಕ್ಕೂ ಸಹ ಸವಾಲಾಗಿ ನಿಂತಿವೆ. ಈ ಪೈಕಿ ದೇವಾಲಯಗಳೂ ಇವೆ.
ಭಾರತದ ರಹಸ್ಯಗಳನ್ನು ಹೊಂದಿರುವ ದೇವಾಲಯಗಳ ಪಟ್ಟಿ ಇಲ್ಲಿವೆ. 
ಹಜರತ್ ಕಮರ್ ಆಲಿ ದರ್ವೆಶ್- ರಹಸ್ಯಮಯ ಕಲ್ಲು: ಮಹಾರಾಷ್ಟ್ರದ ಶಿವಪುರಿಯಲ್ಲಿರುವ ಹಜರತ್ ಕಮರ್ ಆಲಿ ದರ್ವೆಶ್ ಮಂದಿರ ಪುಣೆಯಿಂದ 16 ಕಿಮೀ ದೂರದಲ್ಲಿದ್ದು, ಇಲ್ಲಿರುವ 90 ಕೆಯಷ್ಟು ತೂಕವಿರುವ ಕಲ್ಲು ರಹಸ್ಯವನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಈ ಕಲ್ಲಿಗೆ ಓರ್ವ ಸಂತನ ಅನುಗ್ರಹವಿದ್ದು, ಕಲ್ಲನ್ನು ಎತ್ತಬೇಕಾದರೆ 11 ಜನರು ಆ ಸಂತನ ಹೆಸರು ಹೇಳಿದರೆ ಮಾತ್ರ ಮೇಲೆತ್ತಲು ಸಾಧ್ಯವಾಗುವುದಂತೆ.         
ಕೃಷ್ಣ ಭೇಟಿ ನೀಡುವ ನಿಧಿ ವನ: ಕೃಷ್ಣ ಭಾರತದ ಆರಾಧ್ಯ ದೈವ, ವೃಂದಾವನದ ರಂಗ್ ಮಹಲ್ ದೇವಾಲಯ ಪ್ರದೇಶವಿರುವ ನಿಧಿವನದಲ್ಲಿ ಕೃಷ್ಣ ಇಂದಿಗೂ ಭೇಟಿ ನೀಡುತ್ತಾನೆ ಎಂಬ ಪ್ರತೀತಿ ಇದೆ. ಈ ದೇವಾಲಯ ಕೃಷ್ಣನಿಗಾಗಿಯೇ ನಿರ್ಮಿಸಲಾಗಿದ್ದು, ದೇವಾಲಯದಲ್ಲಿ ನಿರ್ದಿಷ್ಟ ಸಮಯದಲ್ಲಿ ಸಿಗುವ ಅನುಭೂತಿ ಅವರ್ಣನೀಯವಾದದ್ದು ಎಂದು ಹಲವರು ಹೇಳುತ್ತಾರೆ. 
ಈ ಕಾಡಿನಲ್ಲಿರುವ ಮರದ ತೊಗಟೆಗಳು ಟೊಳ್ಳಾಗಿದ್ದು, ಒಣಭೂಮಿಯಿದ್ದರೂ ಹಸಿರು ತುಂಬಿರುತ್ತದೆ. ಇಲ್ಲಿಗೆ ಪ್ರತಿ ರಾತ್ರಿಯೂ ರಾಧಾ ಕೃಷ್ಣರು ಬರುತ್ತಾರೆಂಬ ನಂಬಿಕೆ ಇದ್ದು, ಈ ಪ್ರದೇಶವೂ ಸಹ ತರ್ಕಕ್ಕೆ ನಿಲುಕದ ರಹಸ್ಯವನ್ನು ಹೊಂದಿದೆ. 
ಜ್ವಾಲಾ ದೇವಾಲಯ: ಹಿಮಾಚಲ ಪ್ರದೇಶದಲ್ಲಿರುವ ಕಂಗರ ದೇವಾಲಯ ರಹಸ್ಯವನ್ನು ಹೊಂದಿರುವ ಮತ್ತೊಂದು ಪುರಾತನ ಮಂದಿರವಾಗೊದೆ. ಸತಿ ದೇವಿಯ ಈ ದೇವಾಲಯದಲ್ಲಿ ಸಹಸ್ರಾರು ವರ್ಷಗಳಿಂದಲೂ ಬೆಂಕಿಯ ಜ್ವಾಲೆ ಯಾವುದೇ ಇಂಧನದ ಆಧಾರವಿಲ್ಲದೇ ಉರಿಯುತ್ತಿದೆ. ಸತಿ ದೇವಿ ದಕ್ಷ ರಾಜನಿಂದ ತನ್ನ ಪತಿಗೆ ಉಂಟಾದ ಅವಮಾನವನ್ನು ಸಹಿಸಲಾಗದೇ ಆತ್ಮಾಹುತಿ ಮಾಡಿಕೊಂಡಳು ಎಂಬ ಪ್ರತೀತಿ ಇದೆ. ಈ ಘಟನೆ ನಡೆದ ಬಳಿಕ ವಿಷ್ಣು ಸತಿಯ ದೇಹವನ್ನು 51 ಭಾಗಗಳನ್ನಾಗಿ ಮಾಡಿದ, ಆ ಭಾಗಗಳಿ ಭೂಮಿಯ ವಿವಿಧ ಪ್ರದೇಶಗಳಲ್ಲಿ ಬಿದ್ದವು, ಸತಿ ದೇವಿಯ ನಾಲಿಗೆ  ಬಿದ್ದ ಪ್ರದೇಶವೇ ಜ್ವಾಲಾ ದೇವಾಲಯವಿರುವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಹಲವು ಸಂಶೋಧನೆ ನಡೆಸಲು ಯತ್ನಿಸಲಾಯಿತಾದರೂ ಅದರಿಂದ ಯಾವುದೇ ಮಾಹಿತಿಯೂ ಹೊರಬೀಳಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com