ಅಂತ್ಯನಾ? ಆರಂಭನಾ? ಯಾವಾಗಲೂ ಮುಯ್ಯಿ ಜೊತೆ 1 ರೂಪಾಯಿ ಕೊಡೋದ್ಯಾಕೆ?

ಯಾವುದೇ ಶುಭ ಸಮಾರಂಭಗಳಲ್ಲಿ 101, 501 ಅಥವಾ 1001 ರೂಪಾಯಿಗಳಂತೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಉಡುಗೊರೆ ಕೊಡುವುದು ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಹಿಂದಿನ ಕಾರಣವೇನು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:
monetary gift
ಮುಯ್ಯಿ ಜೊತೆ 1 ರೂಪಾಯಿ ಕೊಡೋದ್ಯಾಕೆ?Online Desk
Updated on

ಮದುವೆ, ಉಪನಯನ ಅಥವಾ ಯಾವುದೇ ಶುಭ ಸಮಾರಂಭಗಳಲ್ಲಿ 101, 501 ಅಥವಾ 1001 ರೂಪಾಯಿಗಳಂತೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಮುಯ್ಯಿ ಅರ್ಥಾತ್ ಉಡುಗೊರೆ ಕೊಡುವುದು ಭಾರತೀಯ ಸಂಪ್ರದಾಯದಲ್ಲಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಹೀಗೆ ಕೇವಲ 100 ಅಥವಾ 500 ರೂಪಾಯಿ ಕೊಡದೆ, ಹೆಚ್ಚುವರಿಯಾಗಿ ಒಂದು ರೂಪಾಯಿ ಸೇರಿಸುವುದರ ಹಿಂದಿನ ಕಾರಣವೇನು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:

0 ಅಂದ್ರೆ ಅಂತ್ಯ, 1 ಅಂದ್ರೆ ಆರಂಭ:

100, 500 ಅಥವಾ 1000 ದಂತಹ ಸಂಖ್ಯೆಗಳು ಶೂನ್ಯ (0) ದೊಂದಿಗೆ ಕೊನೆಗೊಳ್ಳುತ್ತವೆ. ಇನ್ನು, ಶೂನ್ಯವನ್ನು ಶೂನ್ಯತೆ ಅಥವಾ ಒಂದು ಪ್ರಕ್ರಿಯೆಯ ಅಂತ್ಯ ಎಂದು ಭಾವಿಸಲಾಗುತ್ತದೆ. ಆದರೆ, ಅದೇ ಸಂಖ್ಯೆಗೆ 1 ಅನ್ನು ಸೇರಿಸಿದಾಗ ಅದು ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತವಾಗುತ್ತದೆ. ಹಾಗಾಗಿ, ಹಣವನ್ನು ಸ್ವೀಕರಿಸುವವರ ಜೀವನದಲ್ಲಿ ಸದಾ ಪ್ರಗತಿ ಇರಲಿ ಎಂಬ ಕಾರಣದಿಂದ ಯಾವಾಗಲೂ ಒಂದು ರೂಪಾಯಿ ಸೇರಿಸಿ ಹೆಚ್ಚುವರಿಯಾಗಿ ನೀಡಲಾಗುತ್ತದೆ.

ವಿಭಜನೆಯಾಗಬಾರದು!

ಗಣಿತದ ಪ್ರಕಾರ 100, 500 ಅಥವಾ 1000 ರೌಂಡ್ ಸಂಖ್ಯೆಗಳನ್ನು ಸುಲಭವಾಗಿ ಭಾಗಿಸಬಹುದು (ಉದಾಹರಣೆಗೆ 100 ನ್ನು ಇಬ್ಬರಿಗೆ 50-50 ಎಂದು ಹಂಚಬಹುದು). ಆದರೆ 101, 501 ಅಥವಾ 1001 ಇವು ಅವಿಭಾಜ್ಯ ಸಂಖ್ಯೆಗಳಾಗಿವೆ.

ಹಾಗಾಗಿ, ನಾವು ನೀಡುವ ಆಶೀರ್ವಾದ, ಪ್ರೀತಿ ಮತ್ತು ಅವರ ನಡುವಿನ ಬಾಂಧವ್ಯವು ಎಂದಿಗೂ ಭಾಗವಾಗಬಾರದು ಮತ್ತು ಅಖಂಡವಾಗಿರಬೇಕು ಎಂಬ ನಂಬಿಕೆಯ ಕಾರಣದಿಂದ ಯಾವಾಗಲೂ ಒಂದು ರೂಪಾಯಿ ಸೇರಿಸಿ ಹೆಚ್ಚುವರಿಯಾಗಿ ನೀಡಲಾಗುತ್ತದೆ.

monetary gift
ಧರ್ಮ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ಜಟಾಯು: ಅವತಾರ ಪುರುಷ ಶ್ರೀರಾಮ ಜಟಾಯುವಿನ ಅಂತ್ಯಕ್ರಿಯೆ- ಪಿಂಡದಾನ ಮಾಡಿದ್ದೇಕೆ?

ಮತ್ತೆ ಭೇಟಿಯಾಗೋಣ!

ಕೆಲವು ಜಾನಪದ ನಂಬಿಕೆಗಳ ಪ್ರಕಾರ, ಈ ಹೆಚ್ಚುವರಿ 1 ರೂಪಾಯಿಯನ್ನು ಬಾಕಿ ಅಥವಾ ಸಾಲ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಹಣ ಪಡೆದವರು ಆ ಒಂದು ರೂಪಾಯಿಯನ್ನು ಮರಳಿ ನೀಡಲು ಅಥವಾ ಮುಯ್ಯಿ ತೀರಿಸಲು ಮುಂದಿನ ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗಲೇಬೇಕು. ಹಾಗಾಗಿ, ಇದು ನಾವು ಶೀಘ್ರದಲ್ಲೇ ಮತ್ತೆ ಭೇಟಿಯಾಗೋಣ ಎಂದು ಹೇಳುವ ಸಾಂಪ್ರದಾಯಿಕ ಶೈಲಿಯಾಗಿದೆ ಎನ್ನಲಾಗುತ್ತದೆ.

ಲಕ್ಷ್ಮಿ ದೇವಿಯ ಸಂಕೇತ:

ಶಾಸ್ತ್ರಗಳ ಪ್ರಕಾರ ಉಡುಗೊರೆಯಲ್ಲಿ ಲೋಹದ ಅಂಶ ಇರಬೇಕು. ಯಾಕಂದ್ರೆ, ನೋಟುಗಳಿಗಿಂತ ಲೋಹದ ನಾಣ್ಯವನ್ನು ಉಡುಗೊರೆಯಾಗಿ ನೀಡುವುದು ಶ್ರೇಷ್ಠ ಎನ್ನಲಾಗಿದೆ. ಯಾಕಂದ್ರೆ, ಲೋಹವು ಭೂಮಿಯಿಂದ ಸಿಗುವುದರಿಂದ ಇದನ್ನು ಲಕ್ಷ್ಮಿ ದೇವಿಯ ರೂಪ ಎನ್ನಲಾಗುತ್ತದೆ. ಹಾಗಾಗಿ, ನೀವು ನೀಡುವ ದೊಡ್ಡ ಮೊತ್ತ ಹೂಡಿಕೆಯಲ್ಲಿ, ಆ 1 ರೂಪಾಯಿ ನಾಣ್ಯವು ಆ ಹೂಡಿಕೆ ಮತ್ತಷ್ಟು ವೃದ್ಧಿಯಾಗಲು ಬೀಜ ದಂತೆ ಕೆಲಸ ಮಾಡುತ್ತದೆ ಎಂಬುದು ಹಿರಿಯರ ನಂಬಿಕೆ.

monetary gift
ಗುರು ಪೂರ್ಣಿಮೆ: ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ...; ಜನ್ಮಕುಂಡಲಿಯಲ್ಲಿ ಗುರು ಬಲ ಹೆಚ್ಚಿಸಿಕೊಳ್ಳಲು ಮಾಡಬೇಕಾದ ಪರಿಹಾರವೇನು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com