

ಮೇಷ
ಮೇಷ ರಾಶಿಯವರು ಕೊಂಚ ಜೋಪಾನವಾಗಿರುವುದು ಉತ್ತಮ. ಅಶುಭ ಗ್ರಹಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಇದರಿಂದ ಕೆಡುಕಾಗುವ ಸಾಧ್ಯತೆಗಳು ಇವೆ. ಹೀಗಾಗಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ಮುಂದೂಡುವುದು ಒಳ್ಳೆಯದು. ಯಾವುದೇ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುವುದು ಉತ್ತಮ. ಈ ದಿನ ವಿಘ್ನವಿನಾಯಕನನ್ನು ಪೂಜಿಸುವುದು ಉತ್ತಮ. ಆರ್ಥಿಕವಾಗಿ, ಅದೃಷ್ಟವು ನಿಮ್ಮನ್ನು ಕಾಯುತ್ತಿದೆ. ಯಾವುದೇ ಗಂಭೀರ ಸಮಸ್ಯೆಗಳು ನಿಮ್ಮ ಪ್ರೇಮ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ
ವೃಷಭ
ವೃಷಭ ರಾಶಿಯವರಿಗೆ ಮಾರ್ಚ್ ಈ ವಾರ ಶುಭ ಫಲ ನೀಡಲಿದೆ. ಯಾಕೆಂದರೆ ಗುರು ನಿಮಗೆ ಅನುಕೂಲಕರ ಸ್ಥಾನದಲ್ಲಿ ಇರುವುದು. ಅಲ್ಲದೆ ಹತ್ತನೇ ಮನೆಯಲ್ಲಿ ಬುಧ ವೃತ್ತಿ ಪ್ರಗತಿಯನ್ನು ತರಲಿದ್ದಾನೆ. ಜೊತೆಗೆ ಹನ್ನೊಂದನೆ ಮನೆಯಲ್ಲಿ ಶುಕ್ರ ಕೂಡ ಶುಭ ಫಲಗಳನ್ನು ಕರುಣಿಸುವುದು. ಈ ಶುಭ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಎಲ್ಲಾ ಕಾರ್ಯಗಳು ಇಂದು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತವೆ. ಹಣ ಆಗಮನಕ್ಕಿದ್ದ ಹಾದಿಗಳು ಸುಗಮವಾಗುವುದು.
ಮಿಥುನ
ಮಿಥುನ ಅನಗತ್ಯ ಖರ್ಚನ್ನು ಮೈಮೇಲೆ ಎಳೆದುಕೊಳ್ಳದಿರಿ. ಅನವಶ್ಯಕ ವ್ಯಂಗ್ಯ ಮಾತುಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇರುವುದರಿಂದ ಯಾರನ್ನೂ ಅಪಹಾಸ್ಯ ಮಾಡದಿರಿ. ವ್ಯಂಗ್ಯಭರಿತ ಮಾತುಗಳಿಂದ ನೋವನ್ನು ಉಂಟು ಮಾಡದಿರಿ. ಹಿಂದೆ ಮಾಡಿದ ಶ್ರಮದ ಫಲವನ್ನು ನೀಡುತ್ತವೆ. ಆರ್ಥಿಕವಾಗಿ ಈ ದಿನ ಸುವರ್ಣ ಅವಧಿ. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶಗಳು ಸಿಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಪ್ರಾಪ್ತಿ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ, ಆದರೆ ನೀವು ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು
ಕಟಕ
ಕಟಕ ರಾಶಿಯವರಿಗೆ ಮಿಶ್ರ ಫಲ ಸಿಗಲಿವೆ. ಈ ದಿನ ಮಾಡಿದ ಕಾರ್ಯಗಳು ನಿಧಾನಗತಿಯಲ್ಲಿ ಇರಬಹುದು. ಹೀಗಾಗಿ ಕೆಲಸಗಳು ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುವ ಸಂಭವ ಇದೆ. ಹೀಗಾಗಿ ಕೊಂಚ ಒತ್ತಡ ಹೆಚ್ಚಾಗಬಹುದು. ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಶುಭ. ಉದ್ಯೋಗ ಸ್ಥಳದಲ್ಲಿ ಆಗುವ ಬದಲಾವಣೆಗಳಿಗೆ ಬೇಸರಗೊಳ್ಳುವುದು ಬೇಡ. ಹಿಂದಿನ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಹೆಚ್ಚು ಗಮನ ಕೊಡಿ. ಟುಂಬದ ಯಾವುದೇ ಸದಸ್ಯರ ಮಾತುಗಳಿಂದ ನಿಮಗೆ ನೋವಾಗಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ. ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಇಂದು ನೀವು ಷೇರು ಮಾರುಕಟ್ಟೆಯಲ್ಲಿ ಚಿಂತನಶೀಲವಾಗಿ ಹೂಡಿಕೆ ಮಾಡಬಹುದು.
ಸಿಂಹ
ಸಿಂಹ ರಾಶಿಯವರಿಗೆ ಶುಭ ವಾರ ಕೇತು ನಿಮ್ಮ ಲಗ್ನ ಸ್ಥಾನದಲ್ಲಿ ಇದೆ. ಗುರು 11ನೇ ಮನೆಯಲ್ಲಿ ಸಂಚಾರ ಮಾಡುತ್ತಿದೆ. ಗುರುವಿನ ಸ್ಥಾನ ಅತ್ಯಾದ್ಭುತವಾಗಿದ್ದು ಅಪಾರ ಸಂಪತ್ತು, ಸೌಕರ್ಯಗಳನ್ನು ಹೆಚ್ಚಿಸುವುದು. ಆದರೆ ಇದಕ್ಕೆ ನಿಮ್ಮ ಶ್ರಮದ ಅಗತ್ಯತೆ ಇದೆ. ಆರ್ಥಿಕವಾಗಿ ನಿಮ್ಮೆಲ್ಲಾ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಿಂದೆ ಮಾಡಿದ ಶ್ರಮದ ಫಲವನ್ನು ನೀವು ಅನುಭವಿಸುವಿರಿ. ಕಷ್ಟಗಳೆಲ್ಲವೂ ದೂರವಾಗುವ ಸಮಯ ಇದು. ಈ ದಿನ ವಿಘ್ನವಿನಾಯಕನ ಅನುಗ್ರಹ ಪಡೆಯಲು ಅಗತ್ಯ ಇರುವವರಿಗೆ ದಾನ ಮಾಡುವುದು ಶುಭ.
ಕನ್ಯಾ
ಕನ್ಯಾ ರಾಶಿಯ 5ನೇ ಮನೆಯಲ್ಲಿ ಬುಧ ಸಂಚಾರ ಮಾಡುವುದು. ಜೊತೆಗೆ ಗುರು 10ನೇ ಮನೆಯಲ್ಲಿ ಇರಲಿದೆ. ಈ ಎರಡು ಗ್ರಹಗಳ ಸ್ಥಾನ ಮಂಗಳಕರವಾಗಿದೆ. ಎಲ್ಲಾ ಕೆಲಸಗಳು ಇಂದು ನೀವಂದುಕೊಂಡ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಇದರಿಂದಾಗಿ ಲಾಭವನ್ನು ಇಂದು ನೀವು ನಿರೀಕ್ಷೆ ಮಾಡಬಹುದು. ನಿಮ್ಮೆಲ್ಲಾ ಶ್ರಮಕ್ಕೆ ಫಲವನ್ನು ಶುಭ ಗ್ರಹಗಳು ಕರುಣಿಸಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ನಿಮ್ಮ ಖರ್ಚುಗಳ ಕಡೆ ಗಮನ ಕೊಡಿ.
ತುಲಾ
ತುಲಾ ರಾಶಿಯವರಿಗೆ ಗುರು ಬೇಡಿದ ವರವನ್ನು ನೀಡಬಹುದು. ಹೀಗಾಗಿ ನೀವು ಈ ದಿನ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಲು ಪ್ರಯತ್ನಿಸಬಹುದು. ಉದ್ಯೋಗ ಸ್ಥಳದಲ್ಲಿ ನೀವು ಅನುಭವಿಸುವ ಒತ್ತಡ ಕಡಿಮೆ ಯಾಗುವ ಸಾಧ್ಯತೆ ಇದೆ. ಹಿಂದೆ ಮಾಡಿದ ಶ್ರಮದ ಫಲವನ್ನು ನೀವು ಪಡೆಯುವಿರಿ. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಬಹುದು. ಪ್ಪಿಸಿ. ಹಣವನ್ನು ಮರಳಿ ಪಡೆಯುವಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ವ್ಯವಹಾರದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸುವುದನ್ನು ತಪ್ಪಿಸಿ. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ನಿಮ್ಮ ಮಾತನ್ನು ನಿಯಂತ್ರಿಸಿ
ವೃಶ್ಚಿಕ
ವೃಶ್ಚಿಕ ರಾಶಿಯವರಿಗೆ ಮಾರ್ಚ್ 18 ಮಿಶ್ರ ಫಲಗಳು ಪ್ರಾಪ್ತಿಯಾಗಲಿವೆ. ಬುಧನ ಹಿಮ್ಮೆಟ್ಟುವಿಕೆಯಿಂದಾಗಿ ಹೊಸ ಉದ್ಯಮವನ್ನು ಪ್ರಾರಂಭಿಸಲು ನಿಮ್ಮ ಹಳೆಯ ಆಲೋಚನೆಗಳನ್ನು ಸುಧಾರಿಸುವ ಕೆಲಸ ಮಾಡಿ. ಮೇಲಧಿಕಾರಿಗಳೊಂದಿಗೆ ವೃತ್ತಿಪರ ಸಮನ್ವಯವು ಹಾಗೆಯೇ ಉಳಿಯುತ್ತದೆ. ಸಂಪತ್ತನ್ನು ಸಂಗ್ರಹಿಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಹಳೆಯ ಹೂಡಿಕೆಗಳು ಲಾಭವನ್ನು ನೀಡಬಹುದು. ಬುಧನ ಹಿಮ್ಮೆಟ್ಟುವಿಕೆ ದಾಖಲೆಗಳಲ್ಲಿ ದೋಷಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಮನೆಯ ವೆಚ್ಚಗಳಿಗೆ ಆತುರಪಡುವುದನ್ನು ತಪ್ಪಿಸಿ.
ಧನಸ್ಸು
ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಸ್ವ-ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಗೆ ಸಿದ್ಧರಾಗಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವರು. ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಕುಟುಂಬ ಸದಸ್ಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಮತ್ತು ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯಮಿಗಳು ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು.
ಮಕರ
ಖಾಸಗಿ ಕಂಪನಿಗಳಲ್ಲಿಕೆಲಸ ಮಾಡುವವರಿಗೆ ಶುಭದಿನ. ನಿಮ್ಮ ಕಾರ್ಯಗಳನ್ನು ನಿಮ್ಮ ಮೇಲಧಿಕಾರಿಗಳು ಪ್ರಶಂಸಿಸುವರು. ಇದರಿಂದ ಮತ್ತಷ್ಟು ಕೆಲಸಗಳು ನಿಮ್ಮನ್ನು ಕೈಬೀಸಿ ಕರೆಯುವುವು. ಹಣವನ್ನು ಹಿತಮಿತವಾಗಿ ಬಳಸಿ. ನಿಮ್ಮ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹ ಹೆಚ್ಚಾಗಲಿದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕುಟುಂಬದೊಂದಿಗೆ ಹಂಚಿಕೊಳ್ಳಿ. ಇದು ಸಮಸ್ಯೆಯನ್ನು ಪರಿಹರಿಸಲು ಉತ್ತಮ ಸಲಹೆಗಳನ್ನು ನೀಡುತ್ತದೆ.
ಕುಂಭ
ನಿಮ್ಮ ದೈನಂದಿನ ಕೆಲಸಗಳಿಗೆ ಸಹಾಯ ಮಾಡಲೆಂದೇ ಆ ಗೆಳೆಯರು ನಿಮ್ಮನ್ನು ಸೇರಿಕೊಳ್ಳುವರು. ಉದ್ಯೋಗದ ವಿಚಾರವಾಗಿ ಪ್ರಯಾಣ ಮಾಡುವ ಅವಕಾಶವಿರುತ್ತದೆ. ಕಚೇರಿಯಲ್ಲಿ ವಿರೋಧಿಗಳು ಸಕ್ರಿಯರಾಗಿರುತ್ತಾರೆ, ಇದರಿಂದಾಗಿ ಗೊಂದಲವು ಸ್ವಲ್ಪ ಹೆಚ್ಚಾಗಬಹುದು. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.
ಮೀನ
ನಿಮಗೆ ತುಂಬಾ ಶುಭ ದಿನವಾಗಲಿದೆ. ಜೀವನದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡವನ್ನು ಎದುರಿಸಬಹುದು. ಆಪ್ತ ಸ್ನೇಹಿತರ ಸಹಾಯದಿಂದ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ. ನೂರಕ್ಕೆ ನೂರರಷ್ಟು ಯಶಸ್ಸನ್ನು ನಿರೀಕ್ಷಿಸಿ ಬೇಸರಕ್ಕೆ ದಾರಿ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ಸಿನತ್ತ ಪಯಣಿಸುವುವು. ಬಂಧುಗಳು ಮತ್ತು ಸ್ನೇಹಿತರು ನಿಮ್ಮನ್ನು ಪ್ರಶಂಸಿಸುವರು.
Advertisement