ಹುಂಡೈ
ಹುಂಡೈ

ಭಾರತೀಯ ಮಾರುಕಟ್ಟೆಯಲ್ಲಿ 4 ಮಿಲಿಯನ್ ದಾಟಿದ ಹುಂಡೈ ಕಾರುಗಳ ಮಾರಾಟ

ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದ ಪ್ರಮುಖ ಸಂಸ್ಥೆ ಹುಂಡೈ ಮೋಟರ್ ಭಾರತದ ಮಾರುಕಟ್ಟೆಯಲ್ಲಿ 4 ಮಿಲಿಯನ್(4 ದಶಲಕ್ಷ) ವಾಹನಗಳನ್ನು ಮಾರಾಟ ಮಾಡಿದೆ.
Published on

ನವದೆಹಲಿ: ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದ ಪ್ರಮುಖ ಸಂಸ್ಥೆ ಹುಂಡೈ ಮೋಟರ್ ಇಂಡಿಯಾ ಭಾರತದ ಮಾರುಕಟ್ಟೆಯಲ್ಲಿ 4 ಮಿಲಿಯನ್(4 ದಶಲಕ್ಷ) ವಾಹನಗಳನ್ನು ಮಾರಾಟ ಮಾಡಿದೆ.
ಸಾಂಟಾ ಫೆ, ಇಯೋನ್ ನಂತಹ ಪ್ರಮುಖ  ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿರುಜ್ವ ಹುಂಡೈ ಇಂದು ಟಾಪ್ 10  ಪ್ರಭಾವಿ ಬ್ರಾಂಡ್ ಆಗಿದೆ ಎಂದು ಹುಂಡೈ ಮೋಟರ್ ಇಂಡಿಯಾದ ಭಾರತ ವಿಭಾದ ವ್ಯವಸ್ಥಾಪಕ ನಿರ್ದೇಶಕ ವೈ.ಕೆ ಕೂ ಹೇಳಿದ್ದಾರೆ.
ಹುಂಡೈ ಸಂಸ್ಥೆ ಪ್ರಾರಂಭದಿಂಡಲೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಬಗ್ಗೆ ಗಮನ ಕೇಂದ್ರೀಕರಿಸಿತ್ತು. ಪ್ರಸ್ತುತ ಭಾರತದಲ್ಲಿರುವ ಅತಿದೊಡ್ಡ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಹುಂಡೈ ಭಾರತದ ಪ್ರಯಾಣಿಕರ ಕಾರುಗಳ ಅತಿದೊಡ್ಡ ರಫ್ತುದಾರ ಸಂಸ್ಥೆಯೂ ಆಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. 
ಹುಂಡೈ ಸಾಂಟ್ರೋ ಮೂಲಕ 19 ವರ್ಷದ ಹಿಂದೆ ಹುಂಡೈ ಸಂಸ್ಥೆ ಭಾರತದ ಮಾರುಕಟ್ಟೆ ಪ್ರವೇಶಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com