ಜನವರಿ ೨೮ ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭ; ಮುಖ್ಯಾಂಶಗಳು

ಜನವರಿ 28, 2016, ಸಂಜೆ 5.30 ಗಂಟೆಗೆ ವಿಧಾನಸೌಧದ ಪೂರ್ವ ದ್ವಾರದ ಗ್ಯ್ರಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
-ಜನವರಿ 28, 2016, ಸಂಜೆ 5.30 ಗಂಟೆಗೆ ವಿಧಾನಸೌಧದ ಪೂರ್ವ ದ್ವಾರದ ಗ್ಯ್ರಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ  ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ.
-ಭಾರತೀಯ ಚಿತ್ರರಂಗದ ಹಿರಿಯ ಕಲಾವಿದೆ, ಶ್ರೀಮತಿ ಜಯಾ ಬಚ್ಚನ್ ರವರು ಉದ್ಘಾಟಿಸುವರು. 
-ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆ.
-ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು
-ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಗುಲ್ಜಾರ್, ಭಾರತೀಯ ಸಂಜಾತ, ಹಾಲಿವುಡ್ ಚಿತ್ರ ನಿರ್ಮಾಪಕ ಅಶೋಕ್ ಅಮೃತ್‍ರಾಜ್ ಹಾಗೂ ಬೆಂಗಾಲಿ ಹಾಗೂ ಹಿಂದಿ ಚಿತ್ರನಟಿ   ಮತ್ತು ನಿರ್ದೇಶಕಿ ಅಪರ್ಣಾ ಸೇನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 
-ದೇಶವಿದೇಶಗಳ ಹಾಗೂ ಕನ್ನಡ ಚಿತ್ರೋಧ್ಯಮದ ಗಣ್ಯರೂ ಸೇರಿದಂತೆ ಸುಮಾರು ಸಮಾರಂಭದಲ್ಲಿ 2000 ಗಣ್ಯರ ಉಪಸ್ಥಿತಿ
-ಲೊಕಾರ್ನೋ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿ ಹಾಗೂ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವ ಕನ್ನಡಿಗ ರಾಮರೆಡ್ಡಿ ಅವರ ನಿರ್ದೇಶನದ ಕನ್ನಡ ಚಿತ್ರ ‘ತಿಥಿ’ ಉದ್ಘಾಟನಾ ಚಿತ್ರ.
-ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದೆ ಶೋಭನಾ ಹಾಗೂ ನಿರುಪಮಾ ರಾಜೇಂದ್ರ ಅವರಿಂದ ಉದ್ಘಾಟನೆಗೆ ಮುನ್ನ 30 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮ. 
-ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಮೈಸೂರಿನಲ್ಲಿ ಜನವರಿ 28 ರಂದು ಸಂಜೆ 5.00 ಗಂಟೆಗೆ ಕಲಾ ಮಂದಿರದಲ್ಲಿ ಚಿತ್ರೋತ್ಸವ ಉದ್ಘಾಟನೆ ಅಲ್ಲಿಯೂ ಉದ್ಘಾಟನಾ ಚಿತ್ರವಾಗಿ ‘ತಿಥಿ’ ಪ್ರದರ್ಶನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com