ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಮಿತ್ರ ಯೋಜನೆ

ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆಗಳಿಗೆ ಪ್ರೋತ್ಸಾಹ ಧನವಾಗಿ
ಕ್ರೀಡೆ
ಕ್ರೀಡೆ

ಬೆಂಗಳೂರು: ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆಗಳಿಗೆ ಪ್ರೋತ್ಸಾಹ ಧನವಾಗಿ ವಾರ್ಷಿಕ 25 ಸಾವಿರ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಯೋಜನೆಗಳು
• ಗ್ರಾಮೀಣ ದೇಶಿ ಕ್ರೀಡೆಯಾದ ಕುಸ್ತಿಯನ್ನು ಪೋಷಿಸಲು 50 ಗರಡಿ ಮನಗಳಿಗೆ ತಲಾ 5 ಲಕ್ಷ ರುನಂತೆ 2.5 ಕೋಟಿ ರುಪಾಯಿ ಅನುದಾನ
• ಯುವಜನರಿಗೆ ಸಾಹಸ ಕ್ರೀಡಾ ತರಬೇತಿ ಶಿಬಿರಗಳನ್ನು ಆಯೋಜನೆ
• ಕ್ರೀಡಾ ಮನೋವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ರು. 1 ಕೋಟಿ ಅನುದಾನ.
• 2015-16ನೇ ಸಾಲಿನಲ್ಲಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಗೆ ಒಟ್ಟಾರೆಯಾಗಿ 147 ಕೋಟಿ ರುಪಾಯಿ ಒದಗಿಸಲಾಗಿದೆ.
• `ಯುವ ಕ್ರೀಡಾ ಮಿತ್ರ' ನೂತನ ಕಾರ್ಯಕ್ರಮ ಅನುಷ್ಠಾನ - ಹೋಬಳಿ ಮಟ್ಟದ ಯುವ ಕ್ರೀಡಾ ಸಂಘಗಳಿಗೆ ವಾರ್ಷಿಕ 25000 ರೂ.ಗಳ ಪ್ರೋತ್ಸಾಹಧನ.
• ಗ್ರಾಮೀಣ ದೇಸಿ ಕ್ರೀಡೆ ಕುಸ್ತಿಗೆ ಪ್ರೋತ್ರಾಹ, 50 ಗರಡಿ ಮನೆಗಳಿಗೆ ತಲಾ 5 ಲಕ್ಷ ರೂ.ಗಳಂತೆ 2.5 ಕೋಟಿ ರೂ. ಅನುದಾನ.
• ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ (ಜೇತನಾ) ಸಂಸ್ಥೆಯ ವತಿಯಿಂದ ರಾಜ್ಯದ ಇತರೆ ಸ್ಥಳಗಳಲ್ಲಿ ಯುವಜನರಿಗೆ ಸಾಹಸ ಕ್ರೀಡಾ ತರಬೇತಿ ಶಿಬಿರಗಳ ಆಯೋಜನೆ.
• `ಯುವ ಚೇತನ' ಕಾರ್ಯಕ್ರಮ ಆರಂಭ - ಪ್ರತಿ ತಾಲ್ಲೂಕಿನಲ್ಲಿ ಆಯ್ದ ಒಂದು ಸಂಸ್ಥೆಗೆ ಗರಿಷ್ಠ 1 ಲಕ್ಷ ರೂ.ಗಳ ಪ್ರೋತ್ಸಾಹಧನ.
• `ಯುವ ಸ್ಪಂದನ' ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮತ್ತು ನಿಮಾನ್ಸ್ ಸಂಸ್ಥೆಯಲ್ಲಿ ಕ್ರೀಡಾ ಮನೋವಿಜ್ಞಾನ (Sports Psychology) ವಿಭಾಗದ ಪ್ರಾರಂಭ- 1 ಕೋಟಿ ರೂ.ಗಳು.
• ಯುವ ಸಬಲೀಕರಣ ಕಾರ್ಯಕ್ರಮಗಳ ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಫೆಲೋಷಿಪ್ ಕಾರ್ಯಕ್ರಮ ಜಾರಿ - ಪ್ರತೀ ತಾಲ್ಲೂಕಿನ ಒಬ್ಬ ಅರ್ಹ ಯುವಜನರಿಗೆ ಫೆಲೋಷಿಪ್.
• ಎನ್.ಎಸ್.ಎಸ್. ಮತ್ತು ನಿಮಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಸೇವೆ ಮತ್ತು ಜೀವನ ಕೌಶಲ್ಯ ತರಬೇತಿ - 1 ಕೋಟಿ ರೂ.ಗಳ ಹೆಚ್ಚುವರಿ ಅನುದಾನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com