ಸಿದ್ದು ಬಜೆಟ್ ನಲ್ಲಿ ರಾಜಧಾನಿಗೇನು ಲಾಭ..?
ಬೆಂಗಳೂರು: ಬೆಂಗಳೂರು ನಗರವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ನಗರದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಈ ಬಾರಿಯ ಬಜೆಟ್‌ನಲ್ಲಿ 8ಕೋಟಿ ಮೀಸಲಿಡಲಾಗಿದೆ.
ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಮತ್ತು ‘ನಮ್ಮ ಮೆಟ್ರೊ’ ನಿಗಮಕ್ಕೆ ಒಟ್ಟು 4,770 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಬೆಂಗಳೂರಿನಲ್ಲಿರುವ 117 ಕೆರೆಗಳನ್ನು ಪುನಶ್ಚೇತನದ ಹೊಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಮುಖ್ಯಮಂತ್ರಿಯವರ ನಗರಾಭಿವೃದ್ಧಿ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ 1 ಸಾವಿರ ಕೋಟಿ ಮೀಸಲಿಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
• ನಗರೋತ್ಥಾನ ಯೋಜನೆಯಡಿ 1000 ಕೋಟಿ ರೂ., ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗಗಳ ಅನುದಾನದಿಂದ 391.06 ಕೋಟಿ ರೂ.
• ನಗರಾಭಿವೃದ್ಧಿ ಯೋಜನೆಗೆ 11,465 ಕೋಟಿ ರೂಪಾ,ಯಿ ಮೆಟ್ರೋ ಅಭಿವೃದ್ದಿಗೆ 4,770 ಕೋಟಿ ರೂಪಾಯಿ.
• ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆ, ವಸತಿ ಇಲಾಖೆಗೆ 3,819 ಕೋಟಿ ರೂಪಾಯಿ ಮೀಸಲು.
• 1500 ಕೋಟಿ ರೂ.ಗಳಲ್ಲಿ ಕೆಳಕಂಡ ಕಾಮಗಾರಿಗಳ ಚಾಲನೆಗೆ ಕ್ರಮ-
• ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆಗಳ ಅಗಲೀಕರಣ.
• ಸರ್ಜಾಪುರ ರಸ್ತೆ ಅಗಲೀಕರಣ.
• ಬನ್ನೇರುಘಟ್ಟ ರಸ್ತೆ ಅಗಲೀಕರಣ.
• ಡಾ|| ಅಂಬೇಡ್ಕರ್ (ಟ್ಯಾನರಿ) ರಸ್ತೆ ಅಗಲೀಕರಣ. ಆಯವ್ಯಯ ಮುಖ್ಯಾಂಶಗಳು 2015 - 16 27
• ದಿಣ್ಣೂರು ರಸ್ತೆ ಅಗಲೀಕರಣ.
• ವರ್ತೂರು ರಸ್ತೆ ಅಗಲೀಕರಣ.
• ರಾಜರಾಜೇಶ್ವರಿನಗರದ ಸುಬ್ರತೋ ಮುಖರ್ಜಿ ರಸ್ತೆಯ ಅಗಲೀಕರಣ ಹಾಗೂ ಕೆಳಸೇತುವೆ ನಿರ್ಮಾಣ.
• ಆಯ್ದ ಪ್ರಮುಖ ಜಂಕ್ಷನ್‍ಗಳ ಸಮಗ್ರ ಅಭಿವೃದ್ದಿ ಹಾಗೂ ಗ್ರೇಡ್ ಸಪರೇಟರ್‍ಗಳ ನಿರ್ಮಾಣ.
• ಟೆಂಡರ್ ಶ್ಯೂರ್ ಮಾದರಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ
• ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡ 7 ನಗರಸಭೆ ಮತ್ತು 1 ಪುರಸಭೆ ವ್ಯಾಪ್ತಿಯ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ.
• ನಿರ್ಮಾಣ ಪ್ರಗತಿಯಲ್ಲಿರುವ ಹಾಗೂ ಅನುಮೋದನೆಗೊಂಡಿರುವ ರೈಲ್ವೆ ಮೇಲು ಸೇತುವೆ/ಕೆಳಸೇತುವೆ ನಿರ್ಮಾಣ.
• ಕೆ.ಯು.ಐ.ಡಿ.ಎಫ್.ಸಿ. ಮೂಲಕ ಬೆಂಗಳೂರು ನಗರದಲ್ಲಿ-6 ಘನತ್ಯಾಜ್ಯ ನಿರ್ವಹಣಾ ಘಟಕಗಳ ಕಾರ್ಯಾರಂಭ - 270 ಕೋಟಿ ರೂ.
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA)
• 5000 ಫ್ಲ್ಯಾಟ್‍ಗಳ ನಿರ್ಮಾಣ ಮತ್ತು ಹಂಚಿಕೆಯ ಗುರಿ.
• ನಾಡಪ್ರಭು ಕೆಂಪೇಗೌಡ ಬಡಾವಣೆ- 5000 ನಿವೇಶನಗಳ ರಚನೆ ಮತ್ತು ಹಂಚಿಕೆ ಗುರಿ.
• ಹಂತಹಂತವಾಗಿ 19 ಕೆರೆಗಳ ಅಭಿವೃದ್ಧಿ. ಬಾಕಿ ಕೆರೆಗಳಿಗೆ ತಂತಿಬೇಲಿ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ.
• ರಸ್ತೆ ಅಪಘಾತ ತಪ್ಪಿಸಲು ಪಿಪಿಪಿ ಮಾದರಿಯಲ್ಲಿ 25 Sky walkಗಳ ನಿರ್ಮಾಣದ ಗುರಿ.
• ಹೆಬ್ಬಾಳ ಜಂಕ್ಷನ್ ಕೆಳಸೇತುವೆ ಹಾಗೂ ಮೇಲುಸೇತುವೆ ವಿಸ್ತರಣೆ ಕಾಮಗಾರಿ-80 ಕೋಟಿ ರೂ.
• ಹೊರವರ್ತುಲ ರಸ್ತೆ ದೊಡ್ಡನೆಕ್ಕುಂದಿ ಜಂಕ್ಷನ್ ಮೇಲುಸೇತುವೆ ನಿರ್ಮಾಣ ಕಾಮಗಾರಿ- 44 ಕೋಟಿ ರೂ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ
• ಪೀಣ್ಯ, ನಾಗಸಂದ್ರ, ಮಾಗಡಿ ರಸ್ತೆ ಮತ್ತು ನಾಯಂಡನಹಳ್ಳಿ ಮಾರ್ಗಗಳ ಕಾರ್ಯಾಚರಣೆಗೆ ಚಾಲನೆ ಮತ್ತು ಹಂತ-1ರ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ.
• ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತಕ್ಕೆ ಚಾಲನೆ ಹಾಗೂ ಡಿಸೆಂಬರ್ 2015ಕ್ಕೆ ಉದ್ದೇಶಿತ ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ.
ಬೆಂಗಳೂರು ಜಲ ಮಂಡಳಿ
• ಎನ್.ಬಿ.ಆರ್‍ನಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ಚಾಲನೆ.
• 50 ಕಿ.ಮೀ.ಗಳ ಟ್ರಂಕ್ ಒಳಚರಂಡಿ ತ್ಯಾಜ್ಯ ಕೊಳವೆ ಮಾರ್ಗ ಬದಲಾವಣೆ ಕಾಮಗಾರಿ ಜಾರಿ. ಹೆಬ್ಬಾಳ, ಕೆ.ಆರ್.ಪುರಂ, ಕೆ ಮತ್ತು ಸಿ ಕಣಿವೆ, ದೊಡ್ಡಬೆಲೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪ್ರದೇಶಗಳಲ್ಲಿ 7 ಹೊಸ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ನಿರ್ಮಾಣ.
• 50 ಘನ ತ್ಯಾಜ್ಯ ತೆಗೆಯುವ ಯಂತ್ರಗಳ ಖರೀದಿ-10 ಕೋಟಿ ರೂ.
• ನೀರು ಸರಬರಾಜು ಸಂಪರ್ಕ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆಗಳ ಸಂಯೋಜನೆ. ಗ್ರಾಹಕರ ಆರ್.ಆರ್.ಸಂಖ್ಯೆ ಹಾಗೂ ಬೃ.ಬೆಂ.ಮ. ಪಾಲಿಕೆಯ ಪಿ.ಐ.ಡಿ ಸಂಖ್ಯೆಗಳ ವಿಲೀನ.
• ಬೆಂಗಳೂರು ನಗರ ಅಭಿವೃದ್ಧಿಗಾಗಿ ಬಿ.ಬಿ.ಎಂ.ಪಿ., ಬೆಂಗಳೂರು ಜಲಮಂಡಳಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ಸೇರಿದಂತೆ ರಾಜ್ಯ ಸರ್ಕಾರದಿಂದ ಒಟ್ಟಾರೆ 4770 ಕೋಟಿ ರೂ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ