ರಾಜ್ಯ ಬಜೆಟ್: ಪ್ರವಾಸೋಧ್ಯಮ ಇಲಾಖೆಗೆ 507 ಕೋಟಿ

1,63,419 ಕೋಟಿ ರು. ಗಾತ್ರದ ಬಜೆಟ್ ನಲ್ಲಿ ಪ್ರವಾಸೋಧ್ಯಮ ಇಲಾಖೆಗೆಂದೇ 507 ಕೋಟಿ ರು.ಗಳನ್ನು ಮೀಸಲಿರಿಸಲಾಗಿದೆ...
ಪ್ರವಾಸೋಧ್ಯಮ ಇಲಾಖೆ (ಸಂಗ್ರಹ ಚಿತ್ರ)
ಪ್ರವಾಸೋಧ್ಯಮ ಇಲಾಖೆ (ಸಂಗ್ರಹ ಚಿತ್ರ)

ಬೆಂಗಳೂರು: 1,63,419 ಕೋಟಿ ರು. ಗಾತ್ರದ ಬಜೆಟ್ ನಲ್ಲಿ ಪ್ರವಾಸೋಧ್ಯ ಇಲಾಖೆಗೆಂದೇ 507 ಕೋಟಿ ರುಗಳನ್ನು ಮೀಸಲಿರಿಸಲಾಗಿದೆ.

ಈ 507 ಕೋಟಿ ರುಗಳ ಪೈಕಿ ಬಾಗಲಕೋಟೆಯ ಪಟ್ಟದಕಲ್ ಮತ್ತು ಐಹೊಳೆ ಹಾಗೂ ಮುಚಥಂಡಿ ಗ್ರಾಮದ ಕೆರೆಯ ಅಭಿವೃದ್ದಿಗೆ ಹಾಗೂ ಕಾರವಾರ ಬೀದರ್ ಹಾಗೂ ಚಿಕ್ಕಬಳ್ಳಾಪುರ ಪ್ರವಾಸಿ ತಾಣಗಳನ್ನು ಮಾದರಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು 10 ಕೋಟಿ ರು. ನಿಗದಿಪಡಿಸಲಾಗಿದೆ.

ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ವತಿಯಿಂದ ಜಂಗಲ್ ಕ್ಯಾಂಪಸ್ ಮತ್ತು ಟ್ರೇಲ್ಸ್ ಹೆಸರಿನ ಸಾಮಾನ್ಯ ದರ್ಜೆಯ ವಸತಿ ಅವಕಾಶವನ್ನು ಕಲ್ಪಿಸಲಾಗುವುದು ಮತ್ತು ಪ್ರವಾಸಿಗರಿಗೆ ಮಾಹಿತಿ ಹಾಗೂ ಇತರೆ ಸೇವೆಗಳನ್ನು ನೀಡಲು ಸಮಗ್ರ ಡಿಜಿಟಲ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು. ಇನ್ನು ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ಆಂತರರಾಷ್ಟ್ರೀಯ ಗುಣಮಟ್ಟದ ಖಾಯಂ ವಸ್ತು ಪ್ರದರ್ಶನ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕುಟೀರ ಹೆಸರಿನಡಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಓಪನ್ ಸ್ಟ್ರೀಟ್ ಕಾರ್ಯಕ್ರಮವನ್ನು ಹೆಚ್ಚು ದೇಶೀ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಅಂತರರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಮತ್ತು ಇತರೆ ಸ್ಥಳಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಗೋಲ್ಡನ್ ಚಾರಿಯಟ್ ಐಶಾರಾಮಿ ರೈಲಿನಲ್ಲಿ ಹೆಚ್ಚಿನ ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಕೈಗೆಟುಕುವ ಬೆಲೆಯ ಪ್ರವಾಸಿ ಪ್ಯಾಕೇಜ್ ಗಳನ್ನು ಪರಿಚಯಿಸಲಾಗುತ್ತಿದೆ.

ಬೆಂಗಳೂರಿನಲ್ಲಿ 2 ವರ್ಷಗಳಿಗೊಮ್ಮೆ ಕರ್ನಾಟಕ ಟ್ರಾವೆಲ್ ಮಾರ್ಟ್ ಆಯೋಜನೆ, ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಏರ್ ಮತ್ತು ಹೆಲಿ ಟ್ಯಾಕ್ಸಿ ಸೇವಲೆ ಆರಂಭಕ್ಕೆ ಕ್ರಮ. ಬೀದರ್ ವಿಜಯಪುರ ನಗರಗಳಲ್ಲಿ ಕಂಡುಬಂದಿರುವ ಪ್ರಾಚೀನ ಕಾಲದ ನೀರು ಸರಬರಾಜು ವ್ಯವಸ್ಥೆಯನ್ನು ಪುನರುತ್ಥಾನಗೊಳಿಸಿ ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ. ಜೈನ ಮತ್ತು ಬೌದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com