ಬಜೆಟ್ 2017-18: ಸಮಾಜ ಕಲ್ಯಾಣ ಇಲಾಖೆಗೆ ಭರಪೂರ ಘೋಷಣೆ!

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಸುಮಾರು 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 6,363 ಕೋಟಿ ರು.ಗಳನ್ನು ಮೀಸಲಿಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಸುಮಾರು 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್  ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 6,363 ಕೋಟಿ  ರು.ಗಳನ್ನು ಮೀಸಲಿಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ಇಲಾಖೆಗೆ ಸಿದ್ದರಾಮಯ್ಯ ನೀಡಿರುವ ಘೋಷಣೆಗಳ ಪಟ್ಟಿ ಇಂತಿದೆ.

1. ಶೌಚಾಲಯಕ್ಕಾಗಿ ಸಮರ ಎಂಬ ಹೆಸರಿನಲ್ಲಿ ಯೋಜನೆಯಡಿಯಲ್ಲಿ 28 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಕ್ರಮ.
2. ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರುಪಾಯಿ ವಿಶೇಷ ಗೌರವಧನ.
3. 12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ವಿಸ್ತರಣೆ, ಅನ್ನಭಾಗ್ಯ ಅಕ್ಕಿ 5ಕೆಜಿಯಿಂದ 7ಕೆಜಿಗೆ ಏರಿಕೆ. ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ.
4. ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 198 ನಮ್ಮ ಕ್ಯಾಂಟೀನ್. 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ..ಇದು ನಮ್ಮ ಕ್ಯಾಂಟೀನ್ ವಿಶೇಷತೆ.
5 .ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5ದಿನ ಮಕ್ಕಳಿಗೆ ಹಾಲು ವಿತರಣೆ.
6 .ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಆಶಾದೀಪ ಯೋಜನೆ ಘೋಷಣೆ. ಪರಿಶಿಷ್ಟ, ಜಾತಿ ಮತ್ತು ಪಂಗಡಗಳ ನಿರುದ್ಯೋಗಿಗಳಿಗೆ 3 ಲಕ್ಷ ಅನುದಾನ..
7. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭ.
8. ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ. ವೃದ್ದಾಪ್ಯ ವೇತನ 200ರೂ.ನಿಂದ 500ಕ್ಕೆ ಏರಿಕೆ
9. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ.
10. ಮಾತೃಪೂರ್ಣ ಯೋಜನೆಗೆ 302 ಕೋಟಿ ಅನುದಾನ, ಮಾತೃಪೂರ್ಣ ಯೋಜನೆಯಡಿ ಗರ್ಣಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ. ಪೌಷ್ಠಿಕಾಂಶ ಕೊರತೆ ನಿವಾರಣೆಗೆ ಮಾತೃಪೂರ್ಣ ಯೋಜನೆ ಜಾರಿ.
11. ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರೂಪಾಯಿ ವಿಶೇಷ ಗೌರವಧನ.
12. ವೃದ್ದಾಪ್ಯ ವೇತನ 200ರಿಂದ 500ಕ್ಕೆ ಹೆಚ್ಚಳ. 60ರಿಂದ 64ವಯಸ್ಸಿನ ವೃದ್ಧರಿಗೆ ಈ ಯೋಜನೆಯ ಲಾಭ.
13. ಜನಪ್ರತಿನಿಧಿಗಳ ಗೌರವಧನ ಹೆಚ್ಚಳ. ಜಿಪಂ, ಗ್ರಾಪಂ.  ತಾಪಂ ಅಧ್ಯಕ್ಷರ ಗೌರವಧನ 4.5 ರಿಂದ 6 ಸಾವಿರಕ್ಕೆ ಏರಿಕೆ. ಜಿಪಂ ಸದಸ್ಯರ ಗೌರವಧನ 5 ಸಾವಿರಕ್ಕೆ ಏರಿಕೆ. ಗ್ರಾ.ಪಂ.ಉಪಾಧ್ಯಕ್ಷರ ಗೌರವಧನ 2 ಸಾವಿರಕ್ಕೆ ಹೆಚ್ಚಳ.  ತಾಲೂಕು ಪಂಚಾಯ್ತಿ ಸದಸ್ಯರ ಗೌರವಧನ 3 ಸಾವಿರಕ್ಕೆ ಏರಿಕೆ. ಗ್ರಾ.ಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ.  ಜಿಪಂ ಸದಸ್ಯರ ಗೌರವಧನ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ.
14. ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18 ಯೂನಿಟ್ ನಿಂದ 40 ಯೂನಿಟ್ ಗೆ ಏರಿಕೆ.
15. ಖಾದಿ, ಗ್ರಾಮೋದ್ಯಮ ಉತ್ತೇಜಿಸಲು 4 ಕೋಟಿ ರೂ. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದ ಎರಡು ಕಡೆ ಖಾದಿ ಪ್ಲಾಜಾ ಸ್ಥಾಪಿಸಲು ನಿರ್ಧಾರ
16. 500 ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿ ಮಾಡಲು 3 ಲಕ್ಷ ಸಾಲ, ಅಲ್ಪಸಂಖ್ಯಾತರು ಹೆಚ್ಚು ವಾಸಿಸುವ ಸ್ಥಳಗಳ ಅಭಿವೃದ್ಧಿಗೆ 800 ಕೋಟಿ ಮೀಸಲು
17. ಎಸ್ಸಿ, ಎಸ್ಟಿ ವಿಧವೆಯರನ್ನು ವಿವಾಹವಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ
18. ರಾಜ್ಯದ ಪ್ರತಿ ಮಾಂಸದ ಅಂಗಡಿಗೆ 1.25ಲಕ್ಷ ರೂ. ಸಹಾಯಧನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com