ರಾಜ್ಯ ಬಜೆಟ್ 2017-18: ಬರದ ನಡುವೆಯೂ ರೈತಾಪಿ ವರ್ಗಕ್ಕೆ ಸಿಎಂ ಸಿದ್ದು ನೀಡಿದ ಘೋಷಣೆಗಳು

2017-18ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತಾಪಿ ವರ್ಗಕ್ಕೆ ಹಲವು ಘೋಷಣೆಗಳನ್ನು ಮಾಡಿದ್ದು, ಕೃಷಿ ಕ್ಷೇತ್ರಕ್ಕೆ 5080 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2017-18ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತಾಪಿ ವರ್ಗಕ್ಕೆ ಹಲವು ಘೋಷಣೆಗಳನ್ನು ಮಾಡಿದ್ದು, ಕೃಷಿ ಕ್ಷೇತ್ರಕ್ಕೆ 5080 ಕೋಟಿ ರೂಪಾಯಿ, ಮೀನುಗಾರಿಕೆಗೆ 337 ಕೋಟಿ,  ಪಶುಸಂಗೋಪನೆ 2245 ಕೋಟಿ, ಸಣ್ಣ ನೀರಾವರಿ 2099, ಅರಣ್ಯ, ಪರಿಸರ ಮತ್ತು ಸಂರಕ್ಷಣೆ 1732 ಕೋಟಿ ರು.ಹಣವನ್ನು ಮೀಸಲಿಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ 2017-18ನೇ ಸಾಲಿನ ಬಜೆಟ್ ನಲ್ಲಿ ಕೃಷಿ ವರ್ಗಕ್ಕೆ ಘೋಷಣೆಯಾದ ಅಂಶಗಳು ಇಂತಿವೆ.
1. ಬಜೆಟ್​ನಲ್ಲಿ ರೈತರ ಸಾಲಮನ್ನಾ ಘೊಷಣೆ ಇಲ್ಲ, ರೈತರಿಗೆ ಶೂನ್ಯ ಬಡ್ಡಿದರಲ್ಲಿ 3 ಲಕ್ಷ ರೂ. ವರೆಗೆ ಸಾಲ ಮುಂದುವರಿಕೆ. 3 ಲಕ್ಷದಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ.3ರಷ್ಟು ಬಡ್ಡಿ. ಸಾಲ ಮರುಪಾವತಿ ಅವಧಿ ವಿಸ್ತರಣೆ. 25  ಲಕ್ಷ ರೈತರಿಗೆ 13,500 ಕೋಟಿ ರೂ. ಕೃಷಿ ಸಾಲ.
2. ಬರ ಪರಿಹಾರಕ್ಕೆ 845 ಕೋಟಿ ರೂ. ಮೀಸಲು, ರಾಜ್ಯದ ಬರಪೀಡಿತ ಪ್ರದೇಶದಲ್ಲಿ ಮೋಡ ಬಿತ್ತನೆ, 30 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ
3. ಅಲ್ಪಸಂಖ್ಯಾತ ಸಣ್ಣ ರೈತರಿಗೆ ಕೃಷಿ ಸಲಕರಣೆ ನೀಡಲು ಶೇಕಡಾ 50 ರಷ್ಟು ಅನುದಾನ, ದ್ವಿದಳ ಧಾನ್ಯ ಮತ್ತು ತೆಂಗಿನಕಾಯಿ ಸಿಪ್ಪೆಗಳ ಮೇಲಿನ ತೆರಿಗೆ ವಿನಾಯತಿ
4. ಗಂಗಾ ಕಲ್ಯಾಣ ಯೋಜನೆಯಡಿ 58,145 ಕೊಳವೆಬಾವಿಗೆ ವಿದ್ಯುತ್ ಸಂಪರ್ಕ, ಗ್ರಾಮ ಪಂಚಾಯತಿಗಳ ಮಾರ್ಚ್ 2015ರೊಳಗಿನ ವಿದ್ಯುತ್ ಬಿಲ್ ಮನ್ನಾ
5.  ಗೇರು ಅಭಿವೃದ್ಧಿ ಮಂಡಳಿ ಸ್ಥಾಪನೆ. ಕೃಷಿಯಲ್ಲಿ ತಾಂತ್ರಿಕ ಬಳಕೆಗೆ ಪ್ರೋತ್ಸಾಹ. ಬೇಸಾಯದಲ್ಲಿ ತಾಂತ್ರಿಕತೆ ಬಳಸುವ ರೈತರಿಗೆ ಸಹಾಯಧನ.
6. ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣ. "ನಮ್ಮ ಹೊಲ, ನಮ್ಮ ದಾರಿ ಯೋಜನೆಯಡಿ ಮಣ್ಣಿನ ರಸ್ತೆ. 25 ಕಿ.ಮೀ. ಉದ್ದದ ಹೊಲಗಳಿಗೆ ಹೋಗುವ ಮಣ್ಣಿನ ರಸ್ತೆ.
7. ಮಾವು ಬೆಳೆಗಾರರ ಉತ್ತೇಜನಕ್ಕೆ 88 ಕೋಟಿ ಮೀಸಲು, ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ.
8. ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ 2 ಸಾವಿರ ರೂಪಾಯಿ ಪಿಂಚಣಿ.
9. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ. 25 ಲಕ್ಷ ರೈತರಿಗೆ 13, 500 ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿ.
10. ರಾಜ್ಯದಲ್ಲಿ ಹೊಸದಾಗಿ 460 ಗ್ರಾಮ ಪಂಚಾಯ್ತಿಗಳ ಆರಂಭ.
11.ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕು ಒಂದರಂತೆ 174 ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪನೆ, ಹೋಬಳಿ ಮಟ್ಟದಲ್ಲಿ 250 ಕೇಂದ್ರ ಸ್ಥಾಪನೆ
12. ಎಪಿಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ 10 ಕೋಟಿ ಮೀಸಲು.
13. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಯೋಜನೆ.
14. 10 ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಟಕ. ಕುರಿ ತಳಿ ಸಂವರ್ಧಣೆಗಾಗಿ ಬಳ್ಳಾರಿಯಲ್ಲಿ ಬಳ್ಳಾರಿ ಕುರಿ ಸಂವರ್ಧನಾ ಕೇಂದ್ರ ಸ್ಥಾಪನೆ, ಇದಕ್ಕಾಗಿ 1 ಕೋಟಿ ಮೀಸಲು.
15. ರಾಜ್ಯದ ನೊಂದಾಯಿತ ಕುರಿ ಸಹಕಾರಿ ಸಂಘಗಳಿಗೆ 7.5 ಲಕ್ಷರೂಗಳ ಸಹಾಯ. ರಾಜ್ಯದ ಪ್ರತೀ ಮಾಂಸದಂಗಡಿಗೆ 1.25 ಲಕ್ಷ ರೂ. ಅನುದಾನ.
16. ಅಪಘಾತದಲ್ಲಿ ಹಸು, ಎತ್ತು ಸಾವನ್ನಪ್ಪಿದರೆ 10 ಸಾವಿರ ರೂಪಾಯಿ ಪರಿಹಾರ.
17. ಕೃಷಿ ಭಾಗ್ಯ ಯೋಜನೆ ಕರಾವಳಿ, ಮಲೆನಾಡಿಗೆ ವಿಸ್ತರಣೆ. ಪಶು ಸಂಗೋಪನೆ ಇಲಾಖೆಗೆ 2,245 ಕೋಟಿ ಮೀಸಲು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com