ರಾಜ್ಯ ಬಜೆಟ್ 2017-18ರ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌದದಲ್ಲಿ 2017-18ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿದ್ದು, ಇದು ಅವರ 12 ಬಜೆಟ್ ಮಂಡನೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸುಮಾರು 2 ಲಕ್ಷ ಕೋಟಿ ಗಾತ್ರದ್ದಾಗಿದೆ.
ವಿಧಾನ ಪರಿಷತ್ ಸಭೆಗೆ ಆಗಮಿಸಿದ ಸಿಎಂ
ವಿಧಾನ ಪರಿಷತ್ ಸಭೆಗೆ ಆಗಮಿಸಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌದದಲ್ಲಿ 2017-18ನೇ ಸಾಲಿನ ಆಯವ್ಯಯಪಟ್ಟಿ ಮಂಡಿಸುತ್ತಿದ್ದು, ಇದು ಅವರ 12 ಬಜೆಟ್ ಮಂಡನೆಯಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಸುಮಾರು 2 ಲಕ್ಷ ಕೋಟಿ ಗಾತ್ರದ್ದಾಗಿದೆ.

11:09:07 AM ಬಜೆಟ್ ಮಂಡನೆಗೂ ಮುನ್ನ ಮಂತ್ರಿ ಪರಿಷತ್ ಸಭೆ ಆರಂಭ

11:20:14 AM ಮಂತ್ರಿ ಪರಿಷತ್ ನಲ್ಲಿ ಬಜೆಟ್ ಗೆ ಅನುಮೋದನೆ

11:30:00 AM ವಿಧಾನಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಬೃಹತ್ ಗಾತ್ರದ ಬಜೆಟ್ ಪುಸ್ತಕ ಪ್ರತಿ ಹೊರ ತೆಗೆದೆ ಸಿಎಂ

11:30:50 AM ವಿಧಾನಸಭೆಗೆ ಆಗಮಿಸಿದ ಸ್ಪೀಕರ್ ಕೋಳಿವಾಡ್

11:31:06 AM ವಂದೇ ಮಾತರಂ ಗೀತೆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ

11:32:05 AM ಸದನದ ಮಾನ್ಯ ಮೊಯಿನುದ್ದೀನ್ ಭಾವಾ ಅವರಿಗೆ ಜನ್ಮ ದಿನದ ಶುಭ ಕೋರಿದ ಸ್ಪೀಕರ್ ಕೋಳಿವಾಡ್

11:32:57 AM 2017-18 ಸಾಲಿನ ಬಜೆಟ್ ಮಂಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸಿದ ಸ್ಪೀಕರ್ ಕೋಳಿವಾಡ್

11:33:24 AM ಸಿಎಂ ಸಿದ್ದರಾಮಯ್ಯರಿಂದ 2017-18 ಸಾಲಿನ ಬಜೆಟ್ ಮಂಡನೆ ಆರಂಭ

11:37:17 AM ನಮ್ಮದು ಸರ್ವರನ್ನು ಒಳಗೊಂಡ ಸರ್ವೋದಯ ಅಭಿವೃದ್ಧಿ ಮಾದರಿ ಸರ್ಕಾರ. ಅಭಿವೃದ್ಧಿಯ ಪಥವೇ ಸರ್ಕಾರದ ಸಾಧನೆಯಾಗಿದೆ. 


11:39:01 AM ರಾಜ್ಯ ಹೆದ್ದಾರಿಗಳು, ಕೈಗಾರಿಕಾ ಪಾರ್ಕ್ ಗಳು ನಮ್ಮ ಹೆಮ್ಮೆಯ ಸಾಧನೆ.

11:39:49 AM ಬೆಂಗಳೂರನ್ನು ಅತ್ಯಂತ ಕ್ರಿಯಾಶೀಲ ನಗರಿಯನ್ನಾಗಿಸಿದ್ದೇವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಬಜೆಟ್ ಮಂಡನೆ.
11:41:02 AM 21 ಜಿಲ್ಲೆಗಳ 49 ಹೊಸ ತಾಲೂಕುಗಳ ಘೋಷಣೆ.

11:42:20 AM ಅಮ್ಯಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನ ಪ್ರತೀ ವಾರ್ಡ್ ತಲಾ ಒಂದರಂತೆ 198 ನಮ್ಮ ಕ್ಯಾಂಟೀನ್ ಸ್ಥಾಪನೆ. 5 ರುಪಾಯಿಗೆ ತಿಂಡಿ, 10 ರುಪಾಯಿಗೆ ಊಟ..ಇದು ನಮ್ಮ ಕ್ಯಾಂಟೀನ್ ವಿಶೇಷತೆ.  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
11:43:50 AM 12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ. ಹೊಸ ತಾಲೂಕು ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ 300 ಕೋಟಿ ಅನುದಾನ.

11:44:33 AM ರೈತರ ಸಾಲ ಮನ್ನಾ ಇಲ್ಲ. ಸಾಲ ಮರುಪಾವತಿ ಅವಧಿ ವಿಸ್ತರಣೆ. ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಕೆ. 30 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ. 

11:45:36 AM 21 ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ, ಅನ್ನಭಾಗ್ಯ ಅಕ್ಕಿ 5ಕೆಜಿಯಿಂದ 7ಕೆಜಿಗೆ ಏರಿಕೆ. ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ.
11:46:54 AM 6 ಹೊಸ ಮೆಡಿಕಲ್ ಕಾಲೇಜು, 5 ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ದಾವಣಗೆರೆ, ತುಮಕೂರು, ವಿಜಯಪುರ,ಕೋಲಾರ, ರಾಮನಗರದಲ್ಲಿ ಸೂಪರ್, ಸ್ಪೆಶಾಲಿಟಿ ಆಸ್ಪತ್ರೆ.

11:47:39 AM 2017-18ನೇ ಸಾಲಿನಲ್ಲಿ 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆ. 25 ಲಕ್ಷ ರೈತರಿಗೆ 13, 500 ಕೋಟಿ ರುಪಾಯಿ ಕೃಷಿ ಸಾಲ ನೀಡುವ ಗುರಿ.

11:48:38 AM ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5ದಿನ ಮಕ್ಕಳಿಗೆ ಹಾಲು ವಿತರಣೆ.

11:50:07 AM 3 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆ. 42 ಕೋಟಿ ರೂಪಾಯಿ ವೆಚ್ಚದಲ್ಲಿ 10 ಕೆರೆಗಳ ಅಭಿವೃದ್ಧಿ.

11:51:15 AM ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ.

11:53:35 AM  ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ 145 ಚಿಕಿತ್ಸಾ ಘಟಕ ಸ್ಥಾಪನೆ.

11:55:00 AM  ಬೆಳೆಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ. ಭತ್ತ, ಅಕ್ಕಿ, ಗೋಧಿ, ಕಾಳುಗಳ ಮೇಲೆ ತೆರಿಗೆ ವಿನಾಯ್ತಿ.

11:56:43 AM ತುಂತುರು ನೀರಾವರಿ ಯೋಜನೆಗೆ 375 ಕೋಟಿ ಅನುದಾನ. ಕೃಷಿ ಇಲಾಖೆಗೆ 5080 ಕೋಟಿ ರೂಪಾಯಿ ಅನುದಾನ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್.
11:59:26 AM ಖಾಸಗಿ ಸಂಸ್ಥೆಗಳಲ್ಲಿ ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಆಶಾದೀಪ ಯೋಜನೆ. 
12:00:57 PM ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕಕ್ಕೆ 175 ಕೋಟಿ.
12:01:04 PM 1 ಲಕ್ಷ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಹೆಚ್ಚಳ. 
12:01:17 PM ಮಲ್ಟಿಪ್ಲೆಕ್ಸ್ ಗಳಲ್ಲಿನ ಚಿತ್ರಮಂದಿರದ ಟಿಕೆಟ್ ದರ 200ಕ್ಕೆ ನಿಗದಿ. ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಮೈಸೂರಿನ ಹಿಮ್ಮಾವು ಎಂಬಲ್ಲಿ ಚಿತ್ರನಗರಿ ನಿರ್ಮಾಣ.
12:03:26 PM ಎಪಿಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ 10 ಕೋಟಿ ಮೀಸಲು. 
12:05:07 PM ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ. ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು. ಅಬಕಾರಿ ಶುಲ್ಕದಲ್ಲಿ ಹೆಚ್ಚಳ. ರಾಜ್ಯದಲ್ಲಿ ನೀರಾ ನೀತಿ ಜಾರಿ. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ.
12:06:21 PM ಕೆರೆ ಸಂಜೀವಿನಿ ಯೋಜನೆಗೆ 100 ಕೋಟಿ ರೂಪಾಯಿ. 200 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ಯೋಜನೆ. 
12:06:29 PM ಬೆಂಗಳೂರು ವನ್ ಮಾದರಿಯಲ್ಲಿ ಕರ್ನಾಟಕ ವನ್. ರಾಜ್ಯದ 9 ಜಿಲ್ಲೆಗಳಲ್ಲಿ ಕರ್ನಾಟಕ ವನ್ ಕೇಂದ್ರ ಸ್ಥಾಪನೆ.
12:10:03 PM ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವೈಫೈ ಯೋಜನೆ. 
12:11:18 PM ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರೂಪಾಯಿ ಅನುದಾನ. ಶಾಲಾ ನಿರ್ವಹಣೆ, ಸುಧಾರಣೆಗೆ ಶಿಕ್ಷಣ ಕಿರಣ ಯೋಜನೆ ಜಾರಿ. ಹಂಪಿ ಕನ್ನಡ ವಿವಿಗೆ 25 ಕೋಟಿ ಯೋಜನೆ.
12:14:17 PM ಮಡಿಕೇರಿ, ಕಾರವಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏರ್ ಸ್ಟ್ರಿಪ್ ನಿರ್ಮಾಣ. 10 ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಟಕ. ರಾಜ್ಯದ ಪ್ರತೀ ಮಾಂಸದಂಗಡಿಗೆ 1.25 ಲಕ್ಷ ರೂ. ಅನುದಾನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com