ಕರ್ನಾಟಕ ಬಜೆಟ್ 2018: ಬೆಂಗಳೂರಿನಲ್ಲಿ ಸುಗಮ ಸಂಚಾರ, ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಆದ್ಯತೆ

ನಗರದ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ
ಬೆಂಗಳೂರಿನ ಜಿಕೆವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ. ಬೆಂಗಳೂರು ಕಾರಾಗೃಹದಲ್ಲಿ ಅತ್ಯುನ್ನತ ಮಟ್ಟದ ಭದ್ರತೆಗೆ 100 ಕೋಟಿ ಮೀಸಲು, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಭಯ ಕೇಂದ್ರ ಸ್ಥಾಪನೆ.
150 ಕಿ.ಮೀ ಉದ್ದದ ಅರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ವತಿಯಿಂದ 40 ಕೆರೆಗಳ ಅಭಿವೃದ್ಧಿ. ಪಾಲಿಕೆ ವ್ಯಾಪ್ತಿಯ 100 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ. 150 ಕಿ.ಮೀ ಬೃಹತ್ ನೀರುಗಾಲುವೆ ಅಭಿವೃದ್ಧಿಪಡಿಸಲಾಗುತ್ತದೆ. 250 ಕಿ.ಮೀ ಉದ್ದದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗಗಳ ಅಭಿವೃದ್ಧಿ.
ಸ್ಮಾಟ್ ಸಿಟಿ ಯೋಜನೆಗೆ ಬೆಂಗಳೂರು ನಗರ ಸೇರ್ಪಡೆ; ವಿಶೇಷ ಉದ್ದೇಶ ವಾಹಕದ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ತಲಾ 500 ಕೋಟಿ ಅನುದಾನದೊಂದಿಗೆ ಕ್ರಿಯಾ ಯೋಜನೆ ಸಿದ್ಧ; ಪ್ರದೇಶಾಧಾರಿತ ಮಾದರಿಯಲ್ಲಿ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ.
ಐತಿಹಾಸಿಕ ವಾಣಿಜ್ಯ ಕೇಂದ್ರವಾದ ಕೆ.ಆರ್. ಮಾರುಕಟ್ಟೆ ಪ್ರದೇಶದ ಪುನಶ್ಚೇತನ, ಶಿವಾಜಿನಗರದ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್ ಉದ್ಯಾನ ಅಭಿವೃದ್ಧಿ, ಸ್ವತಂತ್ರಪಾಳ್ಯ ಪ್ರದೇಶದ ಅಭಿವೃದ್ಧಿ, ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಗಳ ಅಭಿವೃದ್ಧಿ, ಕೆ.ಸಿ.ಜನರಲ್ ಆಸ್ಪತ್ರೆಯ ನವೀಕರಣ.
ಗಾಂಧಿಬಜಾರ್, ಗಾಂಧಿನಗರದ ಸುಖಸಾಗರ್ ಹೋಟೆಲ್ ಬಳಿ, ಡಿಸ್ಪೆನ್ಸರಿ ರಸ್ತೆ ಬಳಿ, ರೇಸ್ ಕೋರ್ಸ್ ಬಳಿ, ಶೇಷಾದ್ರಿ ರಸ್ತೆ, ಕೋರಮಂಗಲ 4ನೇ ಬಡವಾಣೆ ಬಳೀ, ಜಯನಗರದ ಕಾಂಪ್ಲೆಕ್ಸ್ ಬಳೀ ಹಾಗೂ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 20 ಕೋಟಿ ರು ವೆಚ್ಚದಲ್ಲಿ ಬಹುಮಹಡಿ ವಾಹನ ನಿಲ್ದಾಣಗಳ ನಿರ್ಮಾಣ. ಟ್ರಾಫಿಕ್ ಜಾಮ್ ನಿವಾರಣೆಗಾಗಿ ಬೆಂಗಳೂರು ನಗರದಲ್ಲಿ ಕ್ರಮ
ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 1000 ಹಾಸಿಗೆಗಳ ಹೆಚ್ಚುವರಿ ವಾರ್ಡ್ಬೆಂ ಗಳೂರಿಗೆ ಉದ್ಯೋಗ ಸಂದರ್ಶನಕ್ಕಾಗಿ, ಪ್ರವೇಶ ಪರೀಕ್ಷಗೆ ಬರುವ ಯುವತಿಯರಿಗೆ ಟ್ರಾನ್ಸಿಟ್ ಹಾಸ್ಟೆಲ್ ಆರಂಭ, ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಪೆಟ್ ಸಿಟಿ ಸ್ಕ್ಯಾನ್ ಸೌಲಭ್ಯ, ಬೆಂಗಳೂರು ಸಮೀಪ 400 ಎಕರೆಯಲ್ಲಿ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗೆ ಸಂಬಂಧಿಸಿದಂತೆ ಒಡಂಬಡಿಕೆಯ ಪ್ರಕಾರ ಹೆಚ್.ಎ.ಎಲ್ ಸಂಸ್ಥೆಯವರು ನೀಡಿರುವ ಸ್ವತ್ತಿಗೆ ಬದಲಾಗಿ, ಎನ್.ಎ.ಎಲ್ ವಿಂಡ್ ಟನಲ್ ರಸ್ತೆ ನಿರ್ಮಾಣ. ಕಬ್ಬನ್ ಪಾರ್ಕ್ ಉದ್ಯಾನ ಅಭಿವೃದ್ಧಿ, ಕೆ.ಆರ್ ಪುರಂ ಬಳಿ ನೀರು ಶುದ್ದೀಕರಣ ಘಟಕ ಸ್ಥಾಪನೆ,
ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ. ಐ.ಟಿ.ಪಿ.ಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ.
ಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ತಯಾರಿಕೆಗೆ ಅಗತ್ಯ ಅನುದಾನ  ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೆ. ಪಿ. ನಗರದಿಂದ ಹೆಬ್ಬಾಳದವರೆಗೂ ಸುಮಾರು 105. 55 ಉದ್ದದ ಮೂರನೇ ಮೆಟ್ರೋ ರೈಲು ಯೋಜನೆ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕೋಗಿಲು ಕ್ರಾಸ್ ನಿಂದ ರಾಜಾನುಕುಂಟೆಯವರೆಗಿನ ಎಲ್ಲಾ ಕಾಮಗಾರಿಯಿಂದ ಮೆಟ್ರೋ ಉದ್ದ 266 ಕಿಲೋ ಮೀಟರ್ ಗೆ ಏರಿಕೆ . ಜೆ. ಪಿ. ನಗರದಿಂದ ಹೆಬ್ಬಾಳದ ಮೂಲಕ ಕೆ. ಆರ್. ಪುರಂವರೆಗೂ ಮೆಟ್ರೋ ರೈಲು ವಿಸ್ತರಿಸಲಾಗುತ್ತಿದೆ. ಟೋಲ್ ಗೇಟ್ ನಿಂದ ಕಡಬಗೆರೆ, ಗೊಟ್ಟಿಗೆಹಾರದಿಂದ ಬಸವಪುರ, ಆರ್ . ಕೆ. ಹೆಗಡೆ ನಗರಿಂದ ಏರೋ ಸ್ಪೆಸ್ ವರೆಗೂ ,ಕೋಗಿಲು ಕ್ರಾಸ್ ನಿಂದ ರಾಜಾನುಕುಂಟೆ  ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೂ ಮತ್ತು ಇಬ್ಬಲೂರಿನಿಂದ ಕಾರ್ಮೆಲರಾಮ್ ಮಾರ್ಗ ವಿಸ್ತರಣೆ .

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com