ಲೋಕಾ ಸಮರಕ್ಕೂ ಮುನ್ನ ರಾಜ್ಯ ಬಜೆಟ್; ಎಚ್ ಡಿಕೆ ಬಜೆಟ್ ಮೇಲಿನ ನಿರೀಕ್ಷೆಗಳೇನು..?

ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಬಜೆಟ್ ಮೂಲಕ ಮತದಾರರನ ಓಲೈಕೆಗೆ ದೋಸ್ತಿ ಸರ್ಕರಾ ಮುಂದಾಗುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ಬಜೆಟ್ ಮೂಲಕ ಮತದಾರರನ ಓಲೈಕೆಗೆ ದೋಸ್ತಿ ಸರ್ಕರಾ ಮುಂದಾಗುವ ಸಾಧ್ಯತೆ ಇದೆ.
ಹಾಲಿ ಮೈತ್ರಿ ಸರ್ಕಾರದ 2ನೇ ಬಜೆಟ್ ಮಂಡಿಸುತ್ತಿರುವ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಜನರ ನಿರೀಕ್ಷೆಗೂ ಮೀರಿ ಬಜೆಟ್​​ ವೇಳೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಬಜೆಟ್ ನಲ್ಲಿ ಶಿಕ್ಷಣ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ದಿ, ನೀರಾವರಿ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ರಾಜ್ಯ ಹಣಕಾಸು ಖಾತೆ ಮತ್ತು ಸಿಎಂ ಆಗಿರುವ ಕುಮಾರಸ್ವಾಮಿ ಅವರೇ ಇಂದು ಸದನದಲ್ಲಿ ಬಜೆಟ್​​ ಮಂಡಿಸಲಿದ್ದಾರೆ. ಸಮ್ಮಿಶ್ರ ಸರ್ಕಾರದ 2ನೇ ಬಜೆಟ್​​ ಇದಾಗಿದ್ದು, ಈ ಬಾರಿ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಕಳೆದ ವರ್ಷ ಎಂಟು ತಿಂಗಳ ಹಿಂದೆ ಮಂಡಿಸಿದ್ದ ಮೊದಲ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಿಸಿದ್ದರು. ಅಂದು ಯಾವ ಕ್ಷೇತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೆಂಬ ಸ್ಪಷ್ಟತೆ ಇರಲಿಲ್ಲ. ಇದೀಗ ಸ್ಪಷ್ಟವಾಗಿ ಕೆಲ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಕೃಷಿಗೆ ಸಿಂಹಪಾಲು ದೊರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಮೇಲಿನ ಕೆಲ ನಿರೀಕ್ಷೆಗಳ ಪಟ್ಟಿ ಇಂತಿವೆ.
1. ಈ ಬಾರಿ ಬಜೆಟ್ ನಲ್ಲಿ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕೂ ಒತ್ತು ನೀಡುವುದು
2. ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನ ಹೇಗೆ ಬಳಸಬೇಕೆಂಬುದರ ಬಗ್ಗೆ ಯೋಜನೆ
3. ಇಸ್ರೇಲ್ ತಂತ್ರಜ್ಞಾನ ಅನುಷ್ಠಾನಕ್ಕೆ ಅನುದಾನ
4. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭೂಮೇಲ್ಮೈ ಭಾಗದ ನೀರು ಬಳಕೆ ಯೋಜನೆಗೆ 53 ಸಾವಿರ ಕೋಟಿ ರೂಗಳು ಅನುದಾನ
5. ವೃದ್ದಾಪ್ಯ ಮತ್ತು ವಿಕಲಚೇತನ ಸೇರಿದಂತೆ ವಿವಿಧ ವರ್ಗಗಳಿಗೆ ನೀಡುತ್ತಿರುವ ಪಿಂಚಣಿ ಹಣ ಹೆಚ್ಚಿಸುವುದು
6. ಅಂಗನವಾಡಿ ನೌಕರರ ವೇತನ ಪರಿಷ್ಕರಣೆ, ಕೃಷಿ ವರ್ಗಕ್ಕೆ ವಿಶೇಷ ವಿಮಾ ಸೌಲಭ್ಯ, ರೈತರಿಗೆ ವಿಶೇಷ ವಿಮಾ
7. ಕೇಂದ್ರ ಸರ್ಕಾರಕ್ಕಿಂತ ಮಹತ್ವದ ಯೋಜನೆಗಳು ನೀಡುವುದು
8. ಪೊಲೀಸ್​ ಸಿಬ್ಬಂದಿಗಳ ವೇತನ ಪರಿಷ್ಕರಣೆ, ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯದಂತಹ ಯೋಜನೆಗಳಿಗೆ ಇನ್ನಷ್ಟು ಅನುದಾನ
9. ಕೃಷಿ ವಲಯವನ್ನು ಬಲಪಡಿಸುವುದು, ರೈತರ ಸಾಲಮನ್ನಾ, ಸರ್ಕಾರಿ ನೌಕರರ 6ನೇ ವೇತನ
11. ಆರ್ಥಿಕ ಹೊರೆಯನ್ನು ಸರಿದೂಗಿಸಲು ಹೊಸ ಯೋಜನೆ
12. ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಡಯಾಲಿಸಿಸ್ ಸೆಂಟರ್ ಸ್ಥಾಪನೆ
13. ತಾಲ್ಲೂಕು ಆಸ್ಪತ್ರೆಗಳ ಉನ್ನತೀಕರಣ, ಶಿಕ್ಷಣ ಕ್ಷೇತ್ರದಲ್ಲಿ 1000 ಇಂಗ್ಲೀಷ್ ಮಾಧ್ಯಮ ಶಾಲೆಗಳ ಆರಂಭ
14. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ಅನುದಾನ
15. ದಲಿತ ಸಮುದಾಯಕ್ಕೆ ವಿಶೇಷ ಅನುದಾನ, ಅಲ್ಪಸಂಖ್ಯಾತ ಹಿಂದುಳಿದ ವರ್ಗಕ್ಕೆ ಮಹತ್ವ ಯೋಜನೆಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com