
ಬೆಂಗಳೂರು: 7ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಹಿಳೆಯರ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಮಹಿಳೆಯರ ಅಬಿವೃದ್ಧಿಗೆ ರೂ.37,780 ಕೋಟಿ ಮೀಸಲಿಟ್ಟಿರುವ ಯಡಿಯೂರಪ್ಪ ಅವರು ಶೇ.15.88ರಷ್ಟು ಅನುದಾನ ಘೋಷಣೆ ಮಾಡಿದ್ದಾರೆ.
ಬೆಂಗಳೂರಿಗ 75 ಹೊಸ ಹೊಯ್ಸಳ ವಾಹನ, ಮಹಿಳಾ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ, ಬೆಂಗಳೂರಿನ ಮಹಿಳೆಯರ ಸುರಕ್ಷತೆಗೆ ಪರಿಚಯಿಸಲಾಗಿರುವ ಸುರಕ್ಷಾ ಆ್ಯಪ್'ನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಮಹಿಳೆಯರ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಬಲ ತುಂಬುವ ಉದ್ದೇಸದಿಂದ ಮಹಿಳಾ ಉದ್ಯಮಿಗಳಿಗೆ ರೂ.20 ವರೆಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಬಿಬಿಎಂಪಿ ಜೊತೆ ಕೈಜೋಡಿಸಿ ವನಿತಾ ಪಾಸ್ ವಿತರಿಸಲು ರೂ.25 ಕೋಟಿ ಮೀಸಲಿಡಲಾಗಿದೆ. ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಮಹಿಳೆಯರಿಗೆ ವನಿತಾ ಪಾಸ್ ವಿತರಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಮಹಿಳಾ ಮೀನುಗಾರರ ಸಬಲೀಕರಣದ ಬಗ್ಗೆಯೂ ಪ್ರಸ್ತಾಪಿಸಿರುವ ಯಡಿಯೂರಪ್ಪ, ಮಹಿಳಾ ಮೀನುಗಾರರಿಗೆ ಬೈಕ್ ವಿತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಹಿನ್ನೀರು ಮೀನುಗಾರರಿಗೆ ನೆರವು ನೀಡಲಾಗುವುದು. ರೂ.12.5ಕೋಟಿ ವೆಚ್ಚದಲ್ಲಿ ಹೆಜಮಾಡಿಕೋಡಿಯಲ್ಲಿ ಬಂದರು ನಿರ್ಮಿಸಲಾಗುವುದು ಎಂದರು.
Advertisement