ಮಕ್ಕಳಿಗಾಗಿ ವಿಶೇಷ ಬಜೆಟ್: ಇದೇ ಮೊದಲ ಬಾರಿಗೆ ಮಕ್ಕಳಿಗಾಗಿ ರೂ.36,340 ಕೋಟಿ ಮೀಸಲಿಟ್ಟ ಸರ್ಕಾರ

2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡಿಸಿದ್ದಾರೆ. 

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಕ್ಕಲಿಗಾಗಿ ಬಜೆಟ್ನಲ್ಲಿ ರೂ.36,340 ಕೋಟಿ ಮೀಸಲಿಟ್ಟಿದ್ದು, ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.15ರಷ್ಟು ಹಣ ಮೀಸಲಿಟ್ಟಿದೆ. 

ಬಜೆಟ್ ಮಂಡನೆ ವೇಳೆ ಮಕ್ಕಳ ಅಭಿವೃದ್ಧಿಗಾಗಿ ಬದ್ಧರಾಗಿರುವುದಾಗಿ ತಿಳಿಸಿದ ಯಡಿಯೂರಪ್ಪ ಅವರು, ಬಜೆಟ್ ನಲ್ಲಿ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಿದ್ದಾರೆ. ಪ್ರತೀ ತಿಂಗಳ ಎರಡು ಶನಿವಾರ ಬ್ಯಾಗ್ ರಹಿತ ಸಂಭ್ರಮ ಶನಿವಾರವಾಗಿ ಘೋಷಣೆ ಮಾಡಿದ್ದಾರೆ. 

ಈ ಮೂಲಕ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುವ ಸಲುವಾಗಿ ಬರುವ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ ಜಾರಿಗೆ ತರುವ ಶಿಕ್ಷಣ ಸಚಿವರ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ.

ಸಂಭ್ರಮದ ಶನಿವಾರ ಮಕ್ಕಳಿಗೆ ಕೇವಲ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ, ಅವರಿಗೆ ಕಲಿಕೆ ಮೇಲೆ ಆಸಕ್ತಿ ಮೂಡಿಸಲಾಗುವುದು ಎಂದಿದ್ದಾರೆ. ಇದೇ ವೇಳೆ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. 

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದ ಅವರು, ಕಲಿಕೆಗೆ ಸಹಾಯವಾಗಲು ಶಿಕ್ಷಕರಿಗೆ ಎಲ್ಲಾ ಸೇವಾ ಸೌಲಭ್ಯಗಲನ್ನು ಅಂತರ್ಜಾಲದ ಮೂಲಕ ಒದಗಿಸಲು ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಬಾಲಮಂದಿರಗಳಿಗೆ ರೂ.7 ಕೋಟಿ, 7 ಹೊಸ ಬಾಲಮಂದಿರಗಳ ಸ್ಥಾಪನೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಲಲಾಗಿದೆ. ನೆರೆ ಪ್ರದೇಶದ ಅಂಗನವಾಡಿಗಳ ಮರು ನಿರ್ಮಾಣ, 500 ಅಂಧ ವಿದ್ಯಾರ್ಥಿಗಳಿಗೆ ವಿಶೇಷ ಕಿಟ್, ಅಂಥ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್ ನೀಡುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ. 5 ಜಿಲ್ಲಗಳಲ್ಲಿ ತಾರಾಯಗಳ ಸ್ಥಾಪನೆ ಮಾಡಿ, ವಿಜ್ಞಾನ ಪ್ರತಿಭಾ ಶೋಧನೆ ಕಾರ್ಯಕ್ರಮ ನಡೆಸಲಾಗುವುದು. 500 ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ಮಾಸಿಕ ರೂ.1 ಸಾವಿರ ಶಿಷ್ಯ ವೇತನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com