ಎರಡನೇ ಸಲ ಕೇಂದ್ರ ಬಜೆಟ್ ಮಂಡನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧ; ತಂಡ ರಾಷ್ಟ್ರಪತಿಗಳ ಭೇಟಿ  

ಇಡೀ ದೇಶ ನಿರೀಕ್ಷೆ ಮಾಡುವ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಆಗಮಿಸಿ ಬಜೆಟ್ ಪ್ರತಿಗಳನ್ನು ಸುತ್ತಿದ ಕೆಂಪು ಬಣ್ಣದ ಬಹಿ-ಖಾತಾವನ್ನು ಹಿಡಿದುಕೊಂಡು ಮುಗುಳ್ನಗೆ ಬೀರುತ್ತಾ ತಮ್ಮ ತಂಡದೊಂದಿಗೆ ಸಚಿವಾಲಯದ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ನಿಂತುಕೊಂಡರ
ಹಣಕಾಸು ಸಚಿವಾಲಯ ಹೊರಗೆ ತಮ್ಮ ತಂಡದೊಂದಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವಾಲಯ ಹೊರಗೆ ತಮ್ಮ ತಂಡದೊಂದಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
Updated on: 

ನವದೆಹಲಿ: ಇಡೀ ದೇಶ ನಿರೀಕ್ಷೆ ಮಾಡುವ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ ಹಣಕಾಸು ಸಚಿವಾಲಯಕ್ಕೆ ಆಗಮಿಸಿ ಬಜೆಟ್ ಪ್ರತಿಗಳನ್ನು ಸುತ್ತಿದ ಕೆಂಪು ಬಣ್ಣದ ಬಹಿ-ಖಾತಾವನ್ನು ಹಿಡಿದುಕೊಂಡು ಮುಗುಳ್ನಗೆ ಬೀರುತ್ತಾ ತಮ್ಮ ತಂಡದೊಂದಿಗೆ ಸಚಿವಾಲಯದ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ನಿಂತುಕೊಂಡರು.


ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸಂಪ್ರದಾಯದಂತೆ ಒಪ್ಪಿಗೆ ಪಡೆದರು. ಇಂದು ಬೆಳಗ್ಗೆ 10.15ಕ್ಕೆ ಬಜೆಟ್ ಮಂಡನೆಗೆ ಮುನ್ನ ಸಂಸತ್ತು ಭವನದಲ್ಲಿ ಸಂಪುಟ ಸಭೆ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com