ಕೇಂದ್ರ ಬಜೆಟ್ 2022: ಅಕ್ಟೋಬರ್ 1ರಿಂದ ಡೀಸೆಲ್ ಬೆಲೆ 2 ರೂ ಏರಿಕೆ ಸಾಧ್ಯತೆ.. ಕಾರಣ ಗೊತ್ತಾ?

ಮುಂಬರುವ ಅಕ್ಟೋಬರ್ 1 ರಿಂದ ದೇಶದ ಬಹುತೇಕ ಭಾಗಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 2 ರೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮುಂಬರುವ ಅಕ್ಟೋಬರ್ 1 ರಿಂದ ದೇಶದ ಬಹುತೇಕ ಭಾಗಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 2 ರೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೌದು.. ಮುಂಬರುವ ಅಕ್ಟೋಬರ್ 1 ರಿಂದ  ದೇಶದ ಬಹುತೇಕ ಭಾಗಗಳಲ್ಲಿ ಡೀಸೆಲ್ ದರ 2 ರೂಗಳಷ್ಟು ಏರಿಕೆಯಾಗಲಿದ್ದು, ಈಶಾನ್ಯ ಭಾರತದಂತಹ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಕೂಡ ಏರಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂಧನ ದರ ಏರಿಕೆಗೆ ಕಾರಣ ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2022 ಎಂದು ಹೇಳಲಾಗುತ್ತಿದ್ದು, ಎಥೆನಾಲ್ ಅಥವಾ ಜೈವಿಕ ಡೀಸೆಲ್ ನೊಂದಿಗೆ ಮಿಶ್ರಣ ಮಾಡದೆ ಮಾರಾಟ ಮಾಡುವ ಇಂಧನದ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ವಿಧಿಸಿದೆ. 

ಬಜೆಟ್ ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಥೆನಾಲ್ ಅಥವಾ ಜೈವಿಕ ಡೀಸೆಲ್ ಸೇರಿದಂತೆ ಮಿಶ್ರಣ ಮಾಡದೆ ಮಾರಾಟ ಮಾಡುವ ಇಂಧನದ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿದ್ದಾರೆ. ಹೀಗಾಗಿ ತೈಲೋತ್ಪನ್ನಗಳ ದರಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಸ್ತುತ ದೇಶದ ತೈಲ ಆಮದು ಅವಲಂಬನೆಯನ್ನು ಕಡಿತಗೊಳಿಸುವ ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವ ಉದ್ದೇಶದಿಂದ ಕಬ್ಬು ಅಥವಾ ಹೆಚ್ಚುವರಿ ಆಹಾರಧಾನ್ಯದಿಂದ ತೆಗೆದ 10 ಪ್ರತಿಶತ ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲಾಗುತ್ತದೆ ಅಥವಾ ಬೆರೆಸಲಾಗುತ್ತದೆ (ಅಂದರೆ 10 ಪ್ರತಿಶತ ಎಥೆನಾಲ್‌ನ 90 ಪ್ರತಿಶತದಷ್ಟು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ). ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ದೇಶದ 75-80 ಪ್ರತಿಶತದಲ್ಲಿ ಸರಬರಾಜು ಮಾಡಲಾಗುತ್ತಿದೆ. ಆದರೆ ಉಳಿದ ಪ್ರದೇಶಗಳಲ್ಲಿ ಎಥೆನಾಲ್ ಮತ್ತು ಲಾಜಿಸ್ಟಿಕ್ಸ್ ಪೂರೈಕೆಗೆ ಅಡ್ಡಿಯಾಗಿದೆ.

ಮತ್ತೊಂದೆಡೆ, ಡೀಸೆಲ್‌ನಲ್ಲಿ ಖಾದ್ಯವಲ್ಲದ ಎಣ್ಣೆಕಾಳುಗಳಿಂದ ಹೊರತೆಗೆಯಲಾದ ಜೈವಿಕ ಡೀಸೆಲ್‌ನ ಪ್ರಾಯೋಗಿಕ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ದೇಶದಲ್ಲಿ ಹೆಚ್ಚು ಬಳಸುವ ಇಂಧನವಾಗಿದೆ.

ಇದೇ ವಿಚಾರವಾಗಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಇಂಧನವನ್ನು ಮಿಶ್ರಣ ಮಾಡುವುದು ಈ ಸರ್ಕಾರದ ಆದ್ಯತೆಯಾಗಿದೆ. ಇಂಧನ ಮಿಶ್ರಣದ ಪ್ರಯತ್ನಗಳನ್ನು ಉತ್ತೇಜಿಸಲು, ಮಿಶ್ರಣ ಮಾಡದ ಇಂಧನವು 2022 ರ ಅಕ್ಟೋಬರ್ 1 ನೇ ದಿನದಿಂದ ಪ್ರತಿ ಲೀಟರ್‌ಗೆ 2 ರೂ ಹೆಚ್ಚುವರಿ ಅಬಕಾರಿ ಸುಂಕವನ್ನು ಆಕರ್ಷಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com