ಕೇಂದ್ರ ಬಜೆಟ್ 2023-24: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ದೊಡ್ಡ ಘೋಷಣೆಗಳು!

ಮೋದಿ ಸರ್ಕಾರ 2.0ದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆ ಪ್ರಗತಿಯಲ್ಲಿದ್ದು, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
ಸೀತಾರಾಮನ್ ಬಜೆಟ್
ಸೀತಾರಾಮನ್ ಬಜೆಟ್

ನವದೆಹಲಿ: ಮೋದಿ ಸರ್ಕಾರ 2.0ದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆ ಪ್ರಗತಿಯಲ್ಲಿದ್ದು, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾದ ಅಂಶಗಳ ಪಟ್ಟಿ ಇಂತಿದೆ.
1ರೈಲ್ವೆಗೆ 2.4 ಲಕ್ಷ ಕೋಟಿ ರೂ, ಇದುವರೆಗಿನ ಅತಿ ಹೆಚ್ಚು
2. ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂಗೆ ಏರಿಕೆ
3. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶೇ.66ರಷ್ಟು ಹೆಚ್ಚುವರಿ ಅಂದರೆ  ಹೆಚ್ಚುಳವಾಗಿ 79,000 ಕೋಟಿ ರೂ ಮೀಸಲು
4. ಬಂಡವಾಳ ಹೂಡಿಕೆ ವೆಚ್ಚವನ್ನು ಶೇ.33 ರಿಂದ  10 ಲಕ್ಷ ಕೋಟಿ ರೂಗೆ ಹೆಚ್ಚಿಸಲಾಗುವುದು, 2024 ರ ಹಣಕಾಸು ವರ್ಷದಲ್ಲಿ GDP ಯ ಶೇ.3.3% ಕ್ಕೆ ಏರಿಕೆ
5 .ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ 13.7 ಲಕ್ಷ ಕೋಟಿ ರೂ
6. ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು, 2047 ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕುವ ಉದ್ದೇಶ
7. ಆದಿವಾಸಿಗಳಿಗೆ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ರೂ 15,000 ಕೋಟಿ ಮಿಷನ್
8. ಎಲ್ಲಾ ನಗರಗಳು ಮತ್ತು ಪಟ್ಟಣಗಳು 100 ಪ್ರತಿಶತದಷ್ಟು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಬದಲಾಯಿಸಲು ಯೋಜನೆ ಸಕ್ರಿಯಗೊಳಿಸಲಾಗುತ್ತದೆ
9. ಮುಂದಿನ 3 ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ
10. ಕೃತಕ ಬುದ್ದಿಮತ್ತೆ ಅಥವಾ AIಗಾಗಿ 3 ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ
11. 2,516 ಕೋಟಿ ರೂ ಗಳಲ್ಲಿ 63,000 ಕ್ರೆಡಿಟ್ ಸೊಸೈಟಿಗಳ ಗಣಕೀಕರಣ
12. ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳನ್ನು ಸ್ಥಾಪನೆ
13. ಪಳೆಯುಳಿಕೆ ಇಂಧನದ ಮೇಲಿನ ಕಡಿಮೆ ಅವಲಂಬನೆಗಾಗಿ ಗ್ರೀನ್ ಹೈಡ್ರೋಜನ್ ಮಿಷನ್: ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳಿಗೆ ಶಕ್ತಿ ಪರಿವರ್ತನೆಗಾಗಿ 35,000 ಕೋಟಿ ರೂ ಮೀಸಲು
14. ವ್ಯವಹಾರವನ್ನು ಸುಲಭಗೊಳಿಸಲು, 39,000 ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com