ಗುರಗಾಂವ್ನಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ 100ನೇ ಮಳಿಗೆ
ವಿಶ್ವದ ಮೂರನೇ ಅತಿದೊಡ್ಡ ಚಿನ್ನಾಭರಣ ಮಾರಾಟಗಾರರಾದ 'ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್' ಇತ್ತೀಚೆಗೆ ತನ್ನ 100ನೇ ಮಾರಾಟ ಮಳಿಗೆಯನ್ನು ಗುರಗಾಂವ್ನಲ್ಲಿ ತೆರೆಯಿತು.
ಈ ಮೂಲಕ ಉದ್ಯಮ ಸ್ಥಾಪಿತವಾಗಿ 20 ವರ್ಷ ಪೂರೈಸಿದ ಸಂಭ್ರಮ ಆಚರಿಸಿತು. ಮಳಿಗೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ದೇವ್ ಉದ್ಘಾಟಿಸಿದರು. ಕಂಪನಿಯ 22,000 ಕೋಟಿ ವಹಿವಾಟು ನಡೆಸುವ ಮೂಲಕ ಅಗ್ರ ಆಭರಣಗಳ ಬ್ರಾಂಡ್ಗಳ ನಡುವೆ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಸಂಸ್ಥೆ ಅಕ್ಟೋಬರ್ನಲ್ಲಿ ಸಿಂಗಾಪುರ, ಕೊಲ್ಕತ್ತ, ಅಹಮದಾಬಾದ್ನಲ್ಲಿ ತನ್ನ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ. ಜತೆಗೆ ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಬ್ಯಾಂಕಾಕ್ಗಳಿಗೆ ತನ್ನ ಬ್ರ್ಯಾಂಡ್ಗಳ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.
ಮೆಗಾಮಾರ್ಟ್ನಲ್ಲಿ ಬ್ರಾಂಡೆಡ್ ಉಡುಪುಗಳ ಹಬ್ಬ
'ಮೆಗಾಮಾರ್ಟ್' ಹಬ್ಬದ ಸೀಸನ್ಗಾಗಿ ಕೈಗೆಟುಕುವ ದರಗಳಲ್ಲಿ ಅಂತಾರಾಷ್ಟ್ರೀಯ ಬ್ರಾಂಡೆಡ್ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮೆಗಾಮಾರ್ಟ್ನ ಎಲ್ಲಾ ಮಳಿಗೆಯಲ್ಲಿ ತರಾವರಿ ಹಾಗೂ ವಿವಿಧ ವಿನ್ಯಾಸಗಳಿಂದ ಕೂಡಿರುವ ನೂತನ ಬ್ರಾಂಡೆಡ್ ಉಡುಪುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈ ಹಬ್ಬದ ಸೀಸನ್ನಲ್ಲಿ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರೊಂದಿಗೆ ಸೇರಿ ನಿಮ್ಮದೇ ಸ್ಟೈಲ್ ಅನಾವರಣ ಪಡಿಸುವ ಮೂಲಕ ಸಂಭ್ರಮದಿಂದ ಆಚರಿಸಿ ಎಂದು ಘೋಷಣೆ ನೀಡಿದೆ. 'ಮೆಗಾಮಾರ್ಟ್ನಲ್ಲಿ 'ಪ್ಯಾಷನ್ ಇಸ್ ಫಾರ್ ಆಲ್ ಮಾಸಸ್' ಎಂಬುದೇ ಮೂಲ ಮಂತ್ರ. ನಮ್ಮಲ್ಲಿ ಈ ಹಬ್ಬದ ಸೀಸನ್ ಸಲುವಾಗಿ ಹೊರತರಲಾಗಿರುವ ಅತ್ಯಾಕರ್ಷಕ ಆಫರ್ನಲ್ಲಿ ನೂತನ ಬ್ರಾಂಡೆಡ್ ಉಡುಪುಗಳು ಕೇವಲ 499 ರಿಂದ ಆರಂಭವಾಗಲಿವೆ' ಎಂದು ಮೆಗಾಮಾರ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಇ. ವೆಂಕಟ್ ಹೇಳಿದ್ದಾರೆ.
ಪರಿಕಾ ಹಾಸ್ಪಿಟಾಲಿಟಿಯಿಂದ ಹೊಸ ಡೈನಿಂಗ್ ತಾಣ
ಪರಿಕಾ ಹಾಸ್ಪಿಟಾಲಿಟಿ ಸರ್ವೀಸಸ್, 'ಪರಿಕಾ, ಕುಡ್ಲಾ, ಕನಕ್' ಎನ್ನುವ ಹೊಸ ಡೈನಿಂಗ್ ತಾಣಗಳನ್ನು ಆರಂಭಿಸಿದೆ. ಇವು ಸುಂದರ ಡೈನಿಂಗ್ ರೆಸ್ಟೋರೆಂಟ್ಗಳಾಗಿದ್ದು, ಜಾಗತಿಕ ಅಡುಗೆ ಹಾಗೂ ಕರಾವಳಿಯ ತಿನಿಸುಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿವೆ. ಕುಡ್ಲದಲ್ಲಿ, ಕುಲಗಳಿಂದಾಗಿ ಪಾರಂಪರಿಕವಾಗಿ ಬಂದಿರುವ ವೈವಿಧ್ಯಮಯ ಅಡುಗೆ ವಿಧಾನವಿದ್ದರೆ, ಪರಿಕಾವು ಜಾಗತಿಕ ಅಡುಗೆ ವೈವಿಧ್ಯದ ಸ್ವಾದಿಷ್ಟಮಯ ತಿನಿಸುಗಳನ್ನು ಉಣಬಡಿಸುತ್ತದೆ. ಇದು ಭಾರತೀಯ, ಓರಿಯಂಟಲ್ ಹಾಗೂ ಕಾಂಟಿನೆಂಟಲ್ ಪ್ರಕಾರಗಳನ್ನು ಒಳಗೊಂಡಂತೆ ವಿಶ್ವದ ಎಲ್ಲೆಡೆಯ ಅಡುಗೆ ಪ್ರಕಾರಗಳ ಮಿಶ್ರಣವಾಗಿದೆ. ಕನಕ್ ಗೋಲ್ಡ್ ಬ್ಯಾಂಕ್ವೆಟ್, ಸಂಭ್ರಮವನ್ನು ಆಚರಿಸುವ ತಾಣವಾಗಿದ್ದು, ಸಮ್ಮೇಳನಗಳು, ಸಮಾರಂಭಗಳು, ವಿವಾಹ ನಡೆಸುವುದಕ್ಕೆ ಸೂಕ್ತ ಸ್ಥಳವಾಗಿದೆ. ಉದ್ಘಾಟನೆಯಲ್ಲಿ ತಾರೆಗಳಾದ ದರ್ಶನ್, ರವಿಚಂದ್ರನ್ ಮತ್ತು ರಮಣಶ್ರೀ ಗ್ರೂಪ್ ಮುಖ್ಯಸ್ಥ ಷಡಕ್ಷರಿ ಮತ್ತಿತರರು ಹಾಜರಿದ್ದರು.
ಗಿಮಿ ಐರನ್ ಬೋರ್ಡ್
ಇಟಾಲಿಯನ್ ಮನೆ ಉಪಯೋಗದ ಉತ್ಪನ್ನಗಳ ತಯಾರಿಕಾ ಸಂಸ್ಥೆ 'ಗಿಮಿ ಇಂಡಿಯಾ' ನೂತನವಾಗಿ ಜಾರದಂತಹ ಸ್ಲಿಪ್ ರೆಸಿಸ್ಟೆಂಟ್ ವೆನೆಜಿಯಾ ಐರನ್ ಬೋರ್ಡ್ನ್ನು ಬಿಡುಗಡೆ ಮಾಡಿದೆ. ಬಟ್ಟೆಗಳ ಇಸ್ತ್ರೀಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಈ ಐರನ್ ಬೋರ್ಡ್ನ್ನು ನಾಲ್ಕು ಬೇರೆ ಬೇರೆ ಎತ್ತರಗಳಿಗೆ ಹೊಂದಿಸಬಹುದು. ಜತೆಗೆ ಬಲಗೈ ಅಥವಾ ಎಡಗೈ ಬಳಕೆದಾರರಿಗೆ ಅನುಕೂಲಕರ ರೀತಿಯಲ್ಲಿ ಐರನ್ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೀರ್ಘಕಾಲ ಬಾಳಿಕೆ ಬರುವ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್ ಹೊಂದಿರುವ ಈ ಉತ್ಪನ್ನ ಮೆಟಾಲಿಕ್ ಗ್ರೇ ಫಿನಿಶ್ ಹೊಂದಿದೆ. ಕಾಟನ್ ಕವರ್ ಪ್ಯಾಡ್ ಹೊಂದಿರುವ ಇದರ ಮೇಲೆ ಬಟ್ಟೆಗಳು ಕೂಡ ಜಾರುವಂತಿಲ್ಲ. ಜತೆಗೆ ಸ್ಟ್ರೆಚ್ ಸಿಸ್ಟಮ್ ಮತ್ತು ಕಾರ್ಡ್ ಬೈಂಡರ್ ಅನ್ನು ಒಳಗೊಂಡಿದೆ. ಈ ಐರನ್ನಲ್ಲಿ ಫುಲ್ ಔಟ್ ಬಾರ್ ಇದ್ದು ಇಸ್ತ್ರಿ ಮಾಡುವಾಗ ಮಕ್ಕಳು ಅಡ್ಡಿ ಮಾಡದಂತಹ ಚೈಲ್ಡ್ ಸೇಫ್ಟಿ ಲಾಕ್ ಇದ್ದು ಕುಸಿಯುವುದನ್ನು ತಡೆಯಬಹುದು.
ದಿ ರಿಟ್ಜ್-ಕಾರ್ಲ್ಟನ್ ಹೊಟೇಲ್ ಆರಂಭ
ಭಾರತದಲ್ಲಿ ಇದೇ ಮೊದಲ ಬಾರಿಗೆ ದಿ ರಿಟ್ಜ್-ಕಾರ್ಲ್ಟನ್ ಹೊಟೇಲ್ ಎಲ್.ಎಲ್.ಸಿ ಸಂಸ್ಥೆಯ ಪ್ರಥಮ ರಿಟ್ಜ್- ಕಾರ್ಲ್ಟನ್ ಹೊಟೇಲ್ ನಗರದಲ್ಲಿ ಇತ್ತೀಚಿಗೆ ಅಧಿಕೃತವಾಗಿ ಚಾಲನೆ ಪಡೆಯಿತು. ಇದರಲ್ಲಿ 277 ಅತಿಥಿ ಕೊಠಡಿಗಳಿದ್ದು, 7 ಆಹಾರ ಮತ್ತು ಪಾನೀಯ ಸ್ಥಳಗಳಿವೆ. ಜತೆಗೆ ವಿಸ್ತೃತ ಸಭೆ ಹಾಗೂ ಕಾರ್ಯಕ್ರಮಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಸ್ಥಳ ಕೂಡ ಲಭ್ಯ. ಹೊಟೇಲ್ನ ಪ್ರಮುಖ ಆಕರ್ಷಣೆ ಇಎಸ್ಪಿಎ ನೀಡುವ ರಿಟ್ಜ್ ಕಾರ್ಲ್ಟನ್ ಸ್ಪಾ, ಹೊರಾಂಗಣ ಈಜು ಕೊಳ, ಅತ್ಯಾಧುನಿಕ ಚಿಲ್ಲರೇ ಮಾರಾಟ ಮಳಿಗೆ. 'ರಿಟ್ಜ್ ಕಾರ್ಲ್ಟನ್' ಬೆಂಗಳೂರು ಹೋಟೆಲ್ ಉದ್ಘಾಟನೆಯ ನಂತರ ಮಾತನಾಡಿದ ಹೋಟೆಲ್ನ ಜನರಲ್ ಮ್ಯಾನೇಜರ್ ಶೇನ್ ಕ್ರೇಗ್, 'ಬೆಂಗಳೂರಿನ ವ್ಯವಹಾರ ಹಾಗೂ ವಹಿವಾಟು ವಿಭಾಗದ ಜತೆಗೆ ಮನರಂಜನಾ ಕ್ಷೇತ್ರಗಳನ್ನು ವೃದ್ಧಿಸುವ ಭರವಸೆ ನೀಡುತ್ತೇವೆ' ಎಂದರು.
'ನೈಟ್ ಫೀಲ್ಡ್ ಎಂಜೀನ್ಸ್ ಪ್ರೈ.ಲಿ.' ಅಸ್ತಿತ್ವಕ್ಕೆ
ಡಿಸೇಲ್ ಇಂಜೀನ್ಗಳು, ಪಂಪ್ಸೆಟ್ಗಳು, ಜನರೇಟರ್ಗಳ ಉತ್ಪಾದನೆ ಮತ್ತು ಇವುಗಳ ವಹಿವಾಟನ್ನು ತ್ವರಿತಗತಿಯಲ್ಲಿ ಉತ್ತೇಜಿಸಲು 'ನೈಟ್ ಫೀಲ್ಡ್ ಇಂಜೀನ್ಸ್ ಪ್ರೈ ಲಿ.,' ಅಸ್ತಿತ್ವಕ್ಕೆ ಬಂದಿದೆ. ನಗರದ ಬಸವನಗುಡಿಯ ಬುಲ್ ಟೆಂಪಲ್ ರಸ್ತೆ ಬಳಿ ಸಂಸ್ಥೆ ಪ್ರಾರಂಭವಾಗಿದ್ದು, ಕೃಷಿ ತೋಟಗಾರಿಕೆ ಉಪಕರಣಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಅನ್ನಪೂರ್ಣ ಗ್ರೂಪ್ಸ್ನ ಮತ್ತೊಂದು ವ್ಯವಹಾರ ವಹಿವಾಟು ಕಂಪನಿ ಇದಾಗಿದೆ. ಸಂಸ್ಥೆ, ತನ್ನ ಮಾರುಕಟ್ಟೆಯನ್ನು ದೇಶದಾದ್ಯಂತ ತಲುಪಲು ತನ್ನದೇ ಆದ ಮಾರಾಟ ವಿತರಣಾ ಜಾಲವನ್ನು ರೂಪಿಸಲಿದೆ. ಅಲ್ಲದೇ, ಅಗ್ರಿಮಾರ್ಟ್ ಕೃಷಿಯಂತ್ರ ಮಳಿಗೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿರುವ 126 ಅಗ್ರಿಮಾರ್ಟ್ ಮಳಿಗೆಗಳಲ್ಲಿ ನೈಟ್ ಫೀಲ್ಡ್ ಡೀಸೆಲ್ ಇಂಜಿನ್ಗಳು ಲಭ್ಯವಾಗಲಿವೆ ಎಂದು ಕಂಪನಿಯ ಸೈಲ್ಸ್ ಡೈರೆಕ್ಟರ್ ಎಸ್.ಸಿ.ಅರುಣ್ ತಿಳಿಸಿದರು.
ಸೋಮಾನಿ ಸೆರಾಮಿಕ್ಸ್ 9ನೇ ಮಳಿಗೆ ಆರಂಭ
ಭಾರತೀಯ ಸೆರಾಮಿಕ್ಸ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಸೋಮಾನಿ ಸೆರಾಮಿಕ್ಸ್ ಲಿಮಿಟೆಡ್ ಸಹ ಒಂದಾಗಿದೆ. ಈ ಸಂಸ್ಥೆ 9ನೇ ಮಳಿಗೆಯನ್ನು ಕಂಪನಿ ಅಧ್ಯಕ್ಷರಾದ ತಪನ್ ಜೇನಾ ಅವರು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಮ್ಮ ಜಾಲಬಂಧ ಬಲಗೊಂಡಿದೆ. ಇದರಿಂದ ಗ್ರಾಹಕರ ಬೇಡಿಕೆ ಪೂರೈಸರು ಸಾಧ್ಯವಾಗುತ್ತದೆ. ಗ್ರಾಹಕರನ್ನು ಇನ್ನಷ್ಟು ಉತ್ತಮವಾಗಿ ತಲುಪಲು ನಾವು ಕ್ರಮ ಕೈಗೊಳ್ಳುತ್ತೇವೆ. ಉದ್ಯಮ ಈಗ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಸೋಮಾನಿಯೂ ತನ್ನ ಗ್ರಾಹಕರಿಗೆ ಅತ್ಯುತ್ತಮವಾದದ್ದನ್ನೇ ಕೊಡಲು ಬಯಸುತ್ತದೆ ಎಂದರು. ಹೊಸದಾದ ಈ ಮಳಿಗೆ ಗ್ರಾಹಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ಒದಗಿಸುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

