ಸಾವಿರ ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿದ ಸರ್. ಎಂ.ವಿ ಬ್ಯಾಂಕ್
ಬೆಂಗಳೂರು: ಮೂವತ್ತೈದು ವರ್ಷಗಳ ಸೀಮಿತ ಅವಧಿಯಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ಠೇವಣಿ ಹಣ ಸಂಗ್ರಹಿಸಿ ರಾಜ್ಯದಲ್ಲಿಯೇ ಪ್ರತಿಷ್ಠಿತ ಸಹಕಾರಿ ಬ್ಯಾಂಕೆಂಬ ಖ್ಯಾತಿಗೆ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ಪಾತ್ರವಾಗಿದೆ. ಈ ಹೆಗ್ಗಳಿಕೆಯ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್ ಇದೇ ಸೆ.15ಕ್ಕೆ 35ನೇ ವಾರ್ಷಿಕ ಆಚರಣೆ ಆಯೋಜಿಸಿದೆ. ಅಂದು ಸಾಮಾನ್ಯ ಸಭೆ ಮತ್ತು ಸರ್.ಎಂ. ವಿಶ್ವೇಶ್ವರಯ್ಯನವರು ಜನ್ಮ ದಿನಾಚರಣೆಯನ್ನು ಆಚರಿಸಲಿದೆ.
2012- 13ನೇ ಸಾಲಿನಲ್ಲಿ ಬ್ಯಾಂಕ್ 18 ಕೋಟಿ ಲಾಭ ಗಳಿಸಿದ್ದು, ಬ್ಯಾಂಕ್ ಪ್ರಸಕ್ತ 20,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. 1030ಕೋಟಿಗೂ ಮೀರಿ ಠೇವಣಿ ಸಂಗ್ರಹಿಸಿದ್ದು, 630ಕೋಟಿಗಳಷ್ಟು ಸಾಲ ಮುಂಗಡಗಳನ್ನು ವಿತರಿಸಿದೆ. ಬ್ಯಾಂಕ್ 25ಕೋಟಿಗಳ ಷೇರು ಬಂಡವಾಳ, 55ಕೋಟಿಗೂ ಹೆಚ್ಚು ನಿಧಿ ಸಂಗ್ರಹಿಸಿ, 1055ಕೋಟಿಗೂ ಮೀರಿ ದುಡಿಯುವ ಬಂಡವಾಳವನ್ನು ಹೊಂದಿದೆ. 2012- 13ನೇ ಸಾಲಿಗೆ ಒಟ್ಟು ಲಾಭ 1803.87ಲಕ್ಷ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಆರೋಗ್ಯಕರ ಬೆಳವಣಿಗೆಯನ್ನು ಗುರುತಿಸಿದ ಬ್ಯಾಂಕಿಂಗ್ ಕ್ಷೇತ್ರದ ಮಾಸ ಪತ್ರಿಕೆ ಮುಂಬೈನ ಬ್ಯಾಂಕಿಂಗ್ ಫ್ರಾಂಟಿಯರ್ಸ್ ಸಂಸ್ಥೆ 'ಜೂರಿ ಸ್ಪೆಷಲ್ ಅವಾರ್ಡ್' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸಹಕಾರಿ ಬ್ಯಾಂಕಿನ ಎಲ್ಲ ಗುಣಲಕ್ಷಣಗಳನ್ನು ಕಾಪಾಡಿಕೊಂಡು, ಪಾರದರ್ಶಕತ್ವ ಮತ್ತು ವೃತ್ತಿಪರತೆಯನ್ನು ಪ್ರತಿ ಹಂತದಲ್ಲಿಯೂ ಅಳವಡಿಸಿಕೊಂಡಿದೆ. ದೇಶದಲ್ಲೇ ಒಂದು ಉತ್ತಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮ್ಮ ಹೆಮ್ಮೆ. ವಿಶ್ವೇಶ್ವರಯ್ಯನವರ ಜನ್ಮದಿನದ ಆಚರಣೆ ಜತೆಗೆ ಸಾಮಾನ್ಯ ಸಭೆಯನ್ನೂ ಅಂದೇ ನಡೆಸಲಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ. ಚಂದ್ರಶೇಖರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

