ಮುಂಬೈ: ಚೆನ್ನೈ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ತಮ್ಮ ಸಿಬ್ಬಂದಿಗೆ ನೆರವಿಗೆ ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಲಿಮಿಟೆಡ್ ಮುಂದಾಗಿದೆ.
ಮಳೆಯಿಂದ ಮನೆ, ಆಸ್ತಿ ಪಾಸ್ತಿಗೆ ನಷ್ಟವಾದ ಸಿಬ್ಬಂದಿಗೆಂದು ರು.1,100 ಕೋಟಿ ನೀಡಲು ನಿರ್ಧರಿಸಿದೆ. ಬಡ್ಡಿ ರಹಿತವಾಗಿ ಮುಂಗಡ ವೇತನ ನೀಡಲು ಕಂಪನಿ ನಿರ್ಧರಿಸಿದ್ದು, ರು.50 ಕೋಟಿ ಡೈರೆಕ್ಟ್ ಗ್ರಾಂಡ್ ಫಂಡ್ ಮೀಸಲಿಟ್ಟಿರುವುದಾಗಿ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಚಂದ್ರಶೇಖರನ್ ತಿಳಿಸಿದ್ದಾರೆ.
ಹಣಕಾಸಿನ ನೆರವು ಅಗತ್ಯವಿರುವ ಸಿಬ್ಬಂದಿಗೆ ರು.1ಲಕ್ಷದಿಂದ ಆರಂಭಿಸಿ ಮೂರು ತಿಂಗಳ ವೇತನವನ್ನು ಮುಂಗಡವಾಗಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.