ಟಿಸಿಎಸ್, ಕಾಗ್ನಿಜೆಂಟ್ ಮುಂಚೂಣಿ

ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಸೇವೆಯಲ್ಲಿ ದೇಶದ ಟಾಟಾ ಕನ್ಸಲ್ಟೆನ್ಸಿ ಮತ್ತು ಅಮೆರಿಕ ಮೂಲದ ಕಾಗಿಜಂಟ್ ಈ ವರ್ಷದಲ್ಲಿ ಅಗ್ರಗಣ್ಯ ಸ್ಥಾನವನ್ನು ಉಳಿಸಿಕೊಂಡಿವೆ...
ಟಿಸಿಎಸ್ ಮತ್ತು ಕಾಗ್ನಿಜೆಂಟ್ (ಸಂಗ್ರಹ ಚಿತ್ರ)
ಟಿಸಿಎಸ್ ಮತ್ತು ಕಾಗ್ನಿಜೆಂಟ್ (ಸಂಗ್ರಹ ಚಿತ್ರ)

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಸೇವೆಯಲ್ಲಿ ದೇಶದ ಟಾಟಾ ಕನ್ಸಲ್ಟೆನ್ಸಿ ಮತ್ತು ಅಮೆರಿಕ ಮೂಲದ ಕಾಗಿಜಂಟ್ ಈ ವರ್ಷದಲ್ಲಿ ಅಗ್ರಗಣ್ಯ ಸ್ಥಾನವನ್ನು ಉಳಿಸಿಕೊಂಡಿವೆ.

200809ನೇ ಸಾಲಿನಲ್ಲಿ ಉದ್ಬವಿಸಿದ ಜಾಗತಿಕ ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವ ನಡುವೆಯೂ 2015ರಲ್ಲಿ ಈ ಎರಡೂ ಕಂಪನಿಗಳು ಮುಂಚೂಣಿ ಸ್ಥಾನದಲ್ಲಿ ಮುಂದುವರೆದಿವೆ. ಅಗ್ರಗಣ್ಯ ಸ್ಥಾನವನ್ನು ಉಳಿಸಿಕೊಂಡಿರುವುದಷ್ಟೆ ಅಲ್ಲ ಪೈಪೋಟಿ ಕಂಪನಿಗಳಾದ ಐಬಿಎಂ ಮತ್ತು ಆ್ಯಕ್ಸೆಂಚರ್‍ನಿಂದ ಹಲವು ಒಪ್ಪಂದಗಳನ್ನು ಕಿತ್ತುಕೊಳ್ಳುವಲ್ಲಿಯೂ ಯಶಸ್ವಿಯಾಗಿವೆ. ಕಳೆದ ಮೂರು  ವರ್ಷಗಳಲ್ಲಿ ಈ ಎರಡೂ ಕಂಪನಿಗಳ ಆದಾಯದಲ್ಲಿ 500 ಕೋಟಿ ಡಾಲರ್ ಏರಿಕೆ ಕಂಡಿದೆ. ಇದು ಇನ್ಫೋಸಿಸ್ ಮತ್ತು ವಿಪ್ರೋ ವಹಿವಾಟು ಏರಿಕೆ ಕಂಡಿರುವುದಕ್ಕೆ ಹೋಲಿಸಿದರೆ ಮೂರು ಪಟ್ಟು  ಹೆಚ್ಚು ಐಟಿ ಕ್ಷೇತ್ರದ ಕುರಿತು ಸಂಶೋಧನಾ ಸಂಸ್ಥೆ ಎಚ್‍ಎಫ್ ಎಸ್ ರೀಸರ್ಚ್ ವರದಿ ಹೇಳಿದೆ.

ನಿಗದಿತ ಅವಧಿಯಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸುವುದು ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮವ ನ್ನು ವಿವರಿಸುವಲ್ಲಿ ಪ್ರಮುಖ ಅಳತೆಗೋಲು. ಕಂಪನಿ ಸ್ಪರ್ಧಾತ್ಮಕತೆ ಸಾಮಥ್ರ್ಯ,  ಹೊಸ ಒಪ್ಪಂದಗಳನ್ನು ಪಡೆಯುವಲ್ಲಿನ ಶಕ್ತಿ ತೋರಿಸಲಿದೆ. ಈ ವರ್ಷಆರ್ಥಿಕ ಹಿಂಜರಿತದ ನಡುವೆಯೂ ಈ ಕಂಪನಿಗಳು ಎಲ್ಲ ತ್ರೈಮಾಸಿಕಗಳಲ್ಲೂ ಸುಸ್ಥಿರ ಪ್ರಗತಿಯನ್ನು ಕಾಯ್ದುಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com