ಅಲ್ಪಸಂಖ್ಯಾತರ ಶಿಕ್ಷಣಕ್ಕೆ ವಿಶ್ವಬ್ಯಾಂಕ್ ನೆರವು

ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಸ್ಕಿಲ್ ತರಬೇತಿ ನೀಡಲು 50 ದಶಲಕ್ಷ ಡಾಲರ್ ಸಾಲ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಸಹಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಸ್ಕಿಲ್ ತರಬೇತಿ ನೀಡಲು 50 ದಶಲಕ್ಷ ಡಾಲರ್ ಸಾಲ ಒಪ್ಪಂದಕ್ಕೆ ವಿಶ್ವಬ್ಯಾಂಕ್ ಸಹಿ ಮಾಡಿದೆ. 
ಕೇಂದ್ರ ಸರ್ಕಾರ ಕಳೆದ ಆಗಸ್ಟ್‍ನಲ್ಲಿ ಆರಂಭಿಸಿದ ಈ ಕುರಿತ `ನಯೀ ಮಂಜಿಲ್' ಯೋಜನೆಗೆ ಸಾಲದ ನೆರವು ನೀಡಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. 
ಅವಕಾಶಗಳಿಲ್ಲದಿರುವ ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಮಕ್ಕಳಿಗಾಗಿ ಈ ಯೋಜನೆ ರೂಪಿಸಲಾಗಿದೆ. ಅವರನ್ನು ಶಾಲೆಗೆ ಸೇರಿಸುವುದು, ಶಿಕ್ಷಣ ಮುಗಿದವರಿಗೆ ವೃತ್ತಿ ತರಬೇತಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ತರಬೇತಿ ನಂತರ ಉದ್ಯೋಗ ಕಲ್ಪಿಸುವ ಕೆಲಸವನ್ನೂ ಮಾಡಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com