ಅಂತರ್ಜಾಲ ಮಾರಾಟ ಸಂಸ್ಥೆಗಳಿಗೆ ದಂಡ ವಿಧಿಸಿದ ಕೇರಳ ಸರ್ಕಾರ

ಕೇರಳ ವಾಣಿಜ್ಯ ತೆರಿಗೆ ಇಲಾಖೆ ಫ್ಲಿಪ್ ಕಾರ್ಟ್ ಮತ್ತು ಜಬಾಂಗ್ ಸೇರಿದಂತೆ ನಾಲ್ಕು ಅಂತರ್ಜಾಲ ಮಾರಾಟ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಮ್: ಕೇರಳ ವಾಣಿಜ್ಯ ತೆರಿಗೆ ಇಲಾಖೆ ಫ್ಲಿಪ್ ಕಾರ್ಟ್ ಮತ್ತು ಜಬಾಂಗ್ ಸೇರಿದಂತೆ ನಾಲ್ಕು ಅಂತರ್ಜಾಲ ಮಾರಾಟ ಸಂಸ್ಥೆಗಳಿಗೆ, ಅಕ್ರಮ ವ್ಯವಹಾರ ನಡೆಸಿದ ಆರೋಪದ ಮೇಲೆ ೫೩.೬೩ ಕೋಟಿ ದಂಡ ವಿಧಿಸಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಬೇಹುಗಾರಿಕಾ ವಿಭಾಗ ೨೦೧೨-೧೩ ಮತ್ತು ೨೦೧೩-೧೪ ನೆ ಸಾಲಿಗೆ ಈ ದಂಡ ವಿಧಿಸಿದೆ ಎಂದು ಅಧಿಕೃತ ಹೇಳಿಕೆ ಇಂದು ತಿಳಿಸಿದೆ.

ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಗೆ ೪೭.೧೫ ಕೋಟಿ , ಜಬಾಂಗ್ ಗೆ ೩.೮೯ ಕೋಟಿ, ವೆಕ್ಟಾರ್ ಇ ಕಾಮರ್ಸ್ ಗೆ ೨.೨೩ ಕೋಟಿ ಮತ್ತು ರಾಬ್ ಮಾಲ್ ಅಪ್ಪಾರೆಲ್ಸ್ ಗೆ ೩೬ ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com