

ವಾಷಿಂಗ್ಟನ್: ಕಾರುಗಳು, ಕಚೇರಿಗಳಿಗೆ ಮಾತ್ರ ಹವಾನಿಯಂತ್ರಿತ ಅಲ್ಲ. ಈಗ ಮೊಬೈಲ್‍ಗೂ ಹವಾನಿಯಂತ್ರಣ ಬಂದಿದೆ.
ಅಮೆರಿಕದ ಪ್ರಮುಖ ಕಾರು ತಯಾರಿಕಾ ಕಂಪನಿ ಷವರ್ಲೆ ಅತಿ ಹೆಚ್ಚು ಬಿಸಿಯಾಗುವ ಸ್ಮಾರ್ಟ್ ಫೋನ್‍ಗಳಿಗಾಗಿ ಎಸಿ ಅಭಿವೃದ್ಧಿಪಡಿಸಿದೆ. ಫೋನ್‍ಗಳ ಕ್ಷಮತೆ ಮತ್ತು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಎಸಿ ಅಭಿವೃದ್ಧಿ ಪಡಿಸಲಾಗಿದೆ. ಈ ಸಾಧನವನ್ನು ಆಕ್ಟೀವ್ ಫೋನ್ ಕೂಲಿಂಗ್ ಎಂದು ಕರೆಲಾಗಿದ್ದು, ಕಾರಿನ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಮತ್ತು ಸೂರ್ಯನಕಿರಣಗಳು ನೇರವಾಗಿ ಕಾರಿನೊಳಗೆ ಬಿದ್ದಾಗ ಸ್ಮಾರ್ಟ್ ಫೋನ್‍ಗಳು ಹೆಚ್ಚು ಬಿಸಿಯಾಗುವುದರಿಂದ ಚಾರ್ಜ್ ಆಗುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಎಸಿ ಅಭಿವೃದ್ಧಿಪಡಿಸಲಾಗಿದೆ.
ಸ್ಮಾರ್ಟ್ ಫೋನ್‍ಗಳಲ್ಲಿ ಲಿಥಿಯಂ ಬ್ಯಾಟರಿ ಅಳವಡಿಸಲಾಗಿದ್ದು ಹೆಚ್ಚು ಬಳಸುವುದರಿಂದ ಮತ್ತು ನಿರಂತರವಾಗಿ ಬಿಸಿಯಲ್ಲಿ ಇದ್ದರೆ ಬ್ಯಾಟರಿಗೆ ಧಕ್ಕೆಯಾಗಲಿದೆ. ಈ ಎಸಿ ಮಾರುಕಟ್ಟೆಗೆ ಬರುವುದು ಮುಂದಿನ ವರ್ಷವೇ. ಕಂಪನಿ 2016ರಲ್ಲಿ ಇಂಪಾಲ, ಮಾಲಿಬು, ವೋಲ್ಟ್ ಮ್ತತು ಕ್ಯೂಜ್ ಮಾದರಿಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದ್ದು ಅವು ವೈರ್ ಲೆಸ್ ಚಾರ್ಜಿಂಗ್ ಹೊಂದಿರಲಿವೆ ಎಂದು ಕಂಪನಿ ತಿಳಿಸಿದೆ.