ಮುರಿದುಬಿದ್ದ ಆಲಿಬಾಬಾ-ಸ್ನ್ಯಾಪ್ ಡೀಲ್ ಮಾತುಕತೆ

ಚೈನಾದ ದೈತ್ಯ ಅಂತರ್ಜಾಲ ಮಾರಾಟ ಸಂಸ್ಥೆ ಮತ್ತು ಭಾರತೀಯ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ಜೊತೆಗಿನ ಮಾತುಕತೆ
ಆಲಿಬಾಬಾ
ಆಲಿಬಾಬಾ

ನವದೆಹಲಿ: ಚೈನಾದ ದೈತ್ಯ ಅಂತರ್ಜಾಲ ಮಾರಾಟ ಸಂಸ್ಥೆ ಆಲಿಬಾಬಾ ಮತ್ತು ಭಾರತೀಯ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ಜೊತೆಗಿನ ಮಾತುಕತೆ ಮುರಿದುಬಿದ್ದಿದೆ.

ಸ್ನ್ಯಾಪ್ ದಿಲ್ ನ ಮೌಲ್ಯಮಾಪನ ಹೆಚ್ಚಾಗಿದ್ದು, ಇದನ್ನು ಆಲಿಬಾಬ ಒಪ್ಪದಿದ್ದುದೇ ಮಾತುಕತೆ ಮುರಿದುಬೀಳುವುದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ವಿಷಯವಾಗಿ ಎರಡೂ ಸಂಸ್ಥೆಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ. ಮೂಲಗಳ ಪ್ರಕಾರ ಆಲಿಬಾಬ ಭಾರತೀಯ ಸಂಸ್ಥೆಯನ್ನು ೪-೫ ಬಿಲಿಯನ್ ಯು ಎಸ್ ಡಾಲರ್ ಗಳಿಗೆ ಮೌಲ್ಯಮಾಪನ ಮಾಡಿದ್ದರೆ ಸ್ನ್ಯಾಪ್ ಡೀಲ್ ನ ನಿರೀಕ್ಷೆ ೬-೭ ಬಿಲಿಯನ್ ಡಾಲರ್ ಇತ್ತು ಎನ್ನಲಾಗಿದೆ.

ಭಾರತದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಳ್ಳಲು ಚೈನಾದ ಜ್ಯಾಕ್ ಮಾ ಮುನ್ನಡೆಸುತ್ತಿರುವ ಆಲಿಬಾಬ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ನಲ್ಲಿ ಸ್ಟೇಕ್ ಕೊಂಡುಕೊಳ್ಳುವ ಮಾತುಕತೆ ಇದಾಗಿತ್ತು.

ಈಗಾಗಲೇ ಅಮೆಜಾನ್ ಮತ್ತು ಪ್ಲಿಪ್ಕಾರ್ಟ್ ಸಂಸ್ಥೆಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ಭಾರಿ ಪೈಪೋಟಿಗೆ ಬಿದ್ದಿದ್ದು, ಆಲಿಬಾಬ ಕೂಡ ವ್ಯವಹಾರಕ್ಕೆ ಇಳಿಯುಯುವುದಕ್ಕೆ ಕಾತರ ತೋರಿಸುತ್ತಿರುವುದು ಪಂಡಿತರಿಗೆ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com