ಸಂಗ್ರಹ ಚಿತ್ರ
ವಾಣಿಜ್ಯ
ಸ್ನ್ಯಾಪ್‍ಡೀಲ್ ವಿರುದ್ಧ ಎಫ್ ಐಆರ್ ದಾಖಲು
ಜನಪ್ರಿಯ ಆನ್‍ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ಸಂಕಷ್ಟಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...
ಮುಂಬೈ: ಜನಪ್ರಿಯ ಆನ್‍ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ಸಂಕಷ್ಟಕ್ಕೆ ಸಿಲುಕಿದೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್ ಡಿಎ) ಸ್ನ್ಯಾಪ್‍ಡೀಲ್ ವಿರುದ್ಧ ಮೊಕದ್ದಮೆ ಹೂಡಿದೆ.
ಆನ್‍ಲೈನ್‍ನಲ್ಲಿ ಔಷಧಗಳ ಅಕ್ರಮ ಮಾರಾಟದ ಬಗ್ಗೆ ವೆಬ್‍ಸೈಟ್‍ನ ಸಿಇಓ ಕುನಾಲ್ ಬೆಹ್ಲ್ ಹಾಗೂ ಕಂಪನಿ ನಿರ್ದೇಶಕರ ವಿರುದ್ಧ ದೂರು ಸಲ್ಲಿಸಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ ಎಂದು ಎಫ್ ಡಿಎ ಕಮಿಷನರ್ ಹರ್ಷದೀಪ್ ಕಾಂಬ್ಳೆ ತಿಳಿಸಿದ್ದಾರೆ.
ಏಪ್ರಿಲ್ ನಲ್ಲಿ ಎಫ್ ಡಿಎ ಸ್ನ್ಯಾಪ್‍ಡೀಲ್ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿ ಕೊಳ್ಳಲು ಮುಂದಾದಾಗ, ಪಟ್ಟಿಯಿಂದ ಎಲ್ಲ ಔಷಧಗಳನ್ನು ತೆಗೆದುಹಾಕುವುದಾಗಿಯೂ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಕಂಪನಿ ಭರವಸೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ