ಷೇರುಮಾರುಕಟ್ಟೆ
ಷೇರುಮಾರುಕಟ್ಟೆ

313 ಅಂಕಗಳ ಕಡಿತದೊಂದಿಗೆ ಷೇರುಮಾರುಕಟ್ಟೆ ಮುಕ್ತಾಯ

313.62 ಅಂಕಗಳನ್ನು ಕಳೆದುಕೊಳ್ಳುವ ಮೂಲಕ ಭಾರತೀಯ ಷೇರುಮಾರುಕಟ್ಟೆ ಸೋಮವಾರದ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.

ಮುಂಬೈ: 313.62 ಅಂಕಗಳನ್ನು ಕಳೆದುಕೊಳ್ಳುವ ಮೂಲಕ ಭಾರತೀಯ ಷೇರುಮಾರುಕಟ್ಟೆ ಸೋಮವಾರದ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ.

27,893.25 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ ಬಿಎಸ್ಇ ಸೆನ್ಸೆಕ್ಸ್, ಶೇ.1.12ರಷ್ಟು ಅಂದರೆ 313.62 ಅಂಕಗಳ ಕಡಿತದೊಂದಿಗೆ 27,643.88 ಅಂಕಗಳಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿತು. ನಿಫ್ಟಿಯಲ್ಲಿಯೂ ಕೂಡ 1.05 ರಷ್ಟು ಕಡಿತವಾಗಿದ್ದು, 89 ಅಂಕಗಳ ಕಡಿತದೊಂದಿಗೆ 8,370.25 ಅಂಕಗಳಿಗೆ ವಹಿವಾಟು ಮುಕ್ತಾಯವಾಗಿದೆ.

ಇನ್ನು ಸೋಮವಾರದ ವಹಿವಾಟಿನಲ್ಲಿ ಕೈಲಾಶ್ (ಶೇ.9.96), ಡಿಶ್ ಟಿವಿ (ಶೇ.3.76), ಮ್ಯಾಕ್ಸ್ (ಶೇ.3.66), ಬ್ರಿಟಾನಿಯಾ ಸಂಸ್ಥೆ (ಶೇ.3.6)ಗಳು ಅಲ್ಪ ಪ್ರಮಾಣದ ಲಾಭ ಕಾಣುವ ಮೂಲಕ ತಮ್ಮ ಷೇರುಗಳ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಇಂಡಿಯನ್ ಹೊಟೆಲ್ ಕೋ ಲಿಮಿಟೆಡ್ (ಶೇ.5.72), ನೌಕ್ರಿ.ಕಾಮ್ (ಶೇ.5.42), ಕೆನರಾ ಬ್ಯಾಂಕ್ (ಶೇ5.08) ಮತ್ತು ಟೆಕ್ ಮಹೀಂದ್ರಾ ಲಿಮಿಟೆಡ್ (ಶೇ.4.85) ಸಂಸ್ಥೆಗಳು ನಷ್ಟ ಅನುಭವಿಸಿವೆ.

ಉಳಿದಂತೆ ಆಟೋ ಮೊಬೈಲ್ ಕ್ಷೇತ್ರದ ಷೇರುಗಳಲ್ಲಿ 62.34 ಅಂಕಗಳ ಕುಸಿತವಾಗಿದ್ದು, 19, 116.40 ಅಂಕಗಳಿಗೆ ಸ್ಥಿರವಾಗಿದೆ. ಬ್ಯಾಂಕಿಂಗ್ ಕ್ಷೇತ್ರ 146.75 ಅಂಕಗಳ ಕಡಿತದೊಂದಿಗೆ 21,045.54  ಅಂಕಗಳಿಗೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರ 10.75 ಅಂಕಗಳ ಕಡಿತದೊಂದಿಗೆ 1, 546.79 ಅಂಕಗಳಿಗೆ ಸ್ಥಿರವಾಗಿದೆ.

ರುಪಾಯಿ ಮೌಲ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದು, ಡಾಲರ್ ಎದುರು 0.09 ರಷ್ಟು ಚೇತರಿಕೆ ಕಾಣುವ ಮೂಲಕ ರುಪಾಯಿ ಮೌಲ್ಯ 63.58ಕ್ಕೆ ಏರಿಕೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com