ನವದೆಹಲಿ: ಆದಾಯ ತೆರಿಗೆ ಇಲಾಖೆ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ಅನ್ನು ಪ್ರವೇಶಿಸಿದೆ. "incometaxindia_'ಎಂಬ ಹ್ಯಾಂಡಲ್ನಲ್ಲಿ ಟ್ವಿಟರ್ನಲ್ಲಿ ಖಾತೆ ಹೊಂದಿರುವವರು ಫಾಲೋ ಮಾಡಬಹುದಾಗಿದೆ.
ಇಲಾಖೆಯ ಹೊಸ ನಿಯಮಗಳು, ಮಾಹಿತಿಗಳನ್ನು ನಾಗರಿಕರಿಗೆ ಶೀಘ್ರವಾಗಿ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಟ್ವಿಟರ್ನಲ್ಲಿ ಖಾತೆ ಹೊಂದಿದೆ. ``ತೆರಿಗೆದಾರರಿಗೆ ಸಂಬಂಧಿಸಿದ ಎಲ್ಲ ತಾಜಾ ಮಾಹಿತಿ ಪಡೆಯಲು ನಮ್ಮನ್ನು ಫಾಲೋ ಮಾಡಿ'' ಎಂದು ಇಲಾಖೆ ಮೊದಲ ಟ್ವೀಟ್ ಮಾಡಿದೆ.
ತೆರಿಗೆ ಕಾನೂನು, ಆನ್ಲೈನ್ನಲ್ಲಿ ತೆರಿಗೆ ಪಾವತಿ, ರಿಟನ್ರ್ಸ್ ಸಲ್ಲಿಕೆ ಸೇರಿದಂತೆ ಇತರ ಮಾಹಿತಿಗಳನ್ನು https://incometaxindiaefiling.gov.in. ನಲ್ಲಿ ಪಡೆಯಿರಿ ಎಂದು ಮಾಹಿತಿ ನೀಡಿದೆ. ಜಾರಿ ನಿರ್ದೇಶನಾಲಯ, ಸಿಬಿಡಿಟಿ ಈಗಾಗಲೇ ಖಾತೆಗಳನ್ನು ಹೊಂದಿವೆ.