
ನವದೆಹಲಿ: ಜಾಗತಿಕವಾಗಿ ೫೦೦ ಕ್ಕೂ ಹೆಚ್ಚು ಹೂಡಿಕೆದಾರರನ್ನು ಸಂದರ್ಶಿಸಿ ನಡೆಸಿರುವ ಸಮೀಕ್ಷೆಯಲ್ಲಿ ಭಾರತ ಹೂಡಿಕೆಗೆ ಅತ್ಯಾಕರ್ಷಕ ದೇಶವಾಗಿ ಹೊರಹೊಮ್ಮಿದೆ ಎಂದು ಅರ್ನ್ಸ್ಟ್ ಅಂಡ್ ಯಂಗ್ ಸಂಸ್ಥೆ ಬುಧವಾರ ತಿಳಿಸಿದೆ.
೫೦೫ ಜನ ಹೂಡಿಕೆದಾರರಲ್ಲಿ ಶೇಕಡಾ ೩೨ ಜನರು ಭಾರತವನ್ನು ಆಯ್ಕೆ ಮಾಡಿದ್ದರೆ ೧೫% ಜನ ಚೀನಾವನ್ನು ಆಯ್ಕೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಪೂರ್ವ ಏಶಿಯಾ, ಬ್ರೆಜಿಲ್ ಮತ್ತು ಉತ್ತರ ಅಮೇರಿಕಾ ಸ್ಥಾನ ಪಡೆದಿವೆ.
"ಭಾರತದ ಬಗ್ಗೆ ಆಸಕ್ತಿ ಹೆಚ್ಚಿರುವುದರಲ್ಲಿ ಸಂದೇಹವೇ ಇಲ್ಲ" ಎಂದಿದ್ದಾರೆ ಅರ್ನ್ಸ್ಟ್ ಅಂಡ್ ಯಂಗ್ ಅಧಿಕಾರಿ ಮಾರ್ಕ್ ಒಟ್ಟಿ.
Advertisement