ಆರ್ಥಿಕ ಬಿಕ್ಕಟ್ಟು: ಮಂಕಾಗಿರುವ ಭವಿಷ್ಯ?

ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅನಿಶ್ಚಿತತೆ ಮುಂದುವರಿದಿದ್ದು, ಮತ್ತೆ ನಿಧಾನಗತಿಯಲ್ಲಿ ಆರ್ಥಿಕ ವ್ಯವಹಾರ ಪುನಶ್ಚೇತನಗೊಳ್ಳುವ ಕಾಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅನಿಶ್ಚಿತತೆ ಮುಂದುವರಿದಿದ್ದು, ಮತ್ತೆ ನಿಧಾನಗತಿಯಲ್ಲಿ ಆರ್ಥಿಕ ವ್ಯವಹಾರ ಪುನಶ್ಚೇತನಗೊಳ್ಳುವ ಕಾಲ ಸನ್ನಿಹಿತವಾಗಿಲ್ಲ ಎಂದು ಪುಸ್ತಕವೊಂದರಲ್ಲಿ ಹೇಳಲಾಗುತ್ತಿದೆ.

ಭಾರತೀಯ ಮೂಲದ ಮೇಘನಾದ್ ಜಗದೀಶ್ ಚಂದ್ರ ದೇಸಾಯಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅರ್ಥಶಾಸ್ತ್ರಜ್ಞನಾಗಿದ್ದು, ಬ್ರಿಟನ್ ಸಂಸತ್ತಿನಲ್ಲಿ ಸದಸ್ಯರಾಗಿದ್ದಾರೆ.ಅವರು ಬರೆದಿರುವ ''ಹ್ಯೂಬ್ರಿಸ್: ವೈ ಎಕನಾಮಿಸ್ಟ್ ಫೈಲ್ ಡ್ ಟು ಪ್ರಿಡಿಕ್ಟ್ ದ ಕ್ರೈಸಿಸ್ ಅಂಡ್ ಹೌ ಟು ಅವಾಯ್ಡ್ ದ ನೆಕ್ಸ್ಟ್ ಒನ್'' ನಲ್ಲಿ ಪ್ರಸ್ತುತ ಪ್ರಪಂಚದ ಆರ್ಥಿಕ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಹಣದುಬ್ಬರ ಇಳಿಕೆ ಮತ್ತು ಯುರೋಪಿಯನ್ ವಲಯದಲ್ಲಿ ಬೆಳವಣಿಗೆ ಸ್ಥಗಿತದ ಬಗ್ಗೆ ಆತಂಕಪಡಬೇಕಾಗಿದೆ.ಚೀನಾ ದೇಶದಲ್ಲಿ ಆರ್ಥಿಕ ಬೆಳವಣಿಗೆ ಕುಗ್ಗುತ್ತಿದೆ. 1992ರಿಂದ 2007ರವರೆಗೆ ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತ ಈಗ ಸದ್ಯದ ಮಟ್ಟಿಗೆ ಪುನರಾವರ್ತನೆಯಾಗಿದೆ ಎಂಬ ಸಂಶಯವಿದೆ ಎಂದು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟು ಗಂಭೀರ ವಿಷಯವಾಗಿದ್ದರೂ ಇದಕ್ಕೆ ಪರಿಹಾರವಿದೆ ಎಂದು ದೇಸಾಯಿ ಹೇಳಿದ್ದಾರೆ. 1930ರ ವಿಶ್ವದ ಮಹಾನ್ ಆರ್ಥಿಕ ಬಿಕ್ಕಟ್ಟಿನ ನಂತರ ಅದರ ಪರಿಣಾಮ ಮುಂದೆ ಐದು ವರ್ಷಗಳವರೆಗೆ ಮುಂದುವರಿಯಿತು. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗಿದ್ದು, ಮತ್ತೆ ಸಹಜ ಸ್ಥಿತಿಗೆ ಮರಳಲು ಕೆಲವು ವರ್ಷ ಬೇಕಾಗಬಹುದು ಎಂದು ದೇಸಾಯಿ ಪುಸ್ತಕದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com