ಸಣ್ಣ ಹಣಕಾಸು ಬ್ಯಾಂಕುಗಳಿಗೆ ಆರ್ ಬಿಐ ಅನುಮತಿ: ಮುಂದ್ರಾ

ಮುಂದಿನ ಕೆಲವು ದಿನಗಳಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಪರವಾನಗಿಯನ್ನು ನೀಡಲಿದೆ ಎಂದು ಉಪ ಗವರ್ನರ್ ಎಸ್.ಎಸ್.ಮುಂದ್ರ...
ಆರ್ ಬಿಐ ಉಪ ಗವರ್ನರ್ ಎಸ್.ಎಸ್.ಮುಂದ್ರಾ
ಆರ್ ಬಿಐ ಉಪ ಗವರ್ನರ್ ಎಸ್.ಎಸ್.ಮುಂದ್ರಾ
Updated on: 

ನವದೆಹಲಿ: ಮುಂದಿನ ಕೆಲವು ದಿನಗಳಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಪರವಾನಗಿಯನ್ನು ನೀಡಲಿದೆ ಎಂದು ಉಪ ಗವರ್ನರ್ ಎಸ್.ಎಸ್.ಮುಂದ್ರ ತಿಳಿಸಿದ್ದಾರೆ. ಆರ್ ಬಿಐ ಕಳೆದ ತಿಂಗಳು ಪಾವತಿ ಬ್ಯಾಂಕುಗಳ ಸ್ಥಾಪನೆಗೆ 11 ಘಟಕಗಳಿಗೆ ತಾತ್ವಿಕ ಅನುಮತಿ ನೀಡಿತ್ತು.

ಆರ್ ಬಿಐ ಸಣ್ಣ ಹಣಕಾಸು ಬ್ಯಾಂಕುಗಳ ಅನುಮತಿಗೆ 72 ಅರ್ಜಿಗಳನ್ನು ಸ್ವೀಕರಿಸಿದೆ. ಸಣ್ಣ ಹಣಕಾಸು ಬ್ಯಾಂಕುಗಳು ಬ್ಯಾಂಕ್ ಸೇವೆಗಳಾದ ನಗದುಗಳನ್ನು ಸ್ವೀಕರಿಸಿ ಸಣ್ಣ ರೈತರಿಗೆ, ಸೂಕ್ಷ್ಮ ವ್ಯಾಪಾರ ಉದ್ಯಮಗಳಿಗೆ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಮತ್ತು ಅಸಂಘಟಿತ ವಲಯಗಳಿಗೆ ಧನಸಹಾಯ ನೀಡುತ್ತದೆ ಎಂದು ಮುಂದ್ರಾ ಆರ್ಥಿಕ ತಜ್ಞರ ಸಭೆಯಲ್ಲಿ ತಿಳಿಸಿದ್ದಾರೆ.

ಅಮೆರಿಕಾದ ಫೆಡರಲ್ ರಿಸರ್ವ್ ನ ದರ ಹೆಚ್ಚಳದ ಪರಿಣಾಮವನ್ನು ಎದುರಿಸಲು ಭಾರತ ಸಜ್ಜಾಗಿದೆ. ಚಾಲ್ತಿ ಖಾತೆ ಕೊರತೆ, ವಿದೇಶಿ ವಿನಿಮಯ ಅನುಪಾತ ಮತ್ತು ಆರ್ಥಿಕ ವಾತಾವರಣವು ಸ್ಥಿರವಾಗಿದೆ ಎಂದು ಹೇಳಿದರು.

ಕೇಂದ್ರ ಅಂಕಿಅಂಶ ಕಾರ್ಯಾಲಯ ಬಿಡುಗಡೆ ಮಾಡಿರುವ ಮೊದಲ ತ್ರೈ ಮಾಸಿಕ ಆರ್ಥಿಕ ದಾಖಲೆಗಳು ಆರ್ ಬಿಐಯ ಯೋಜನೆಗೆ ಹತ್ತಿರವಾಗಿದೆ ಎಂದು ಹೇಳಿದ್ದಾರೆ. ಜನವರಿ 2016ರ ಹೊತ್ತಿಗೆ ಆರ್ ಬಿಐ ಶೇಕಡಾ 6ರಷ್ಟು ಚಿಲ್ಲರೆ ಹಣದುಬ್ಬರ ಗುರಿಯನ್ನು ಹೊಂದಿದೆ.ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಮಾತನಾಡಿ, ಭಾರತ ಆರ್ಥಿಕವಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಇದು ಕೆಲವು ಸಮಯದವರೆಗೆ ಉಳಿಯುತ್ತದೆ ಎಂದರು.

ಚೀನಾದಲ್ಲಿನ ಆರ್ಥಿಕ ಬದಲಾವಣೆಯಿಂದ ಭಾರತಕ್ಕೆ ಲಾಭವಾಗಿದೆ. ಹಲವು ಚೀನಾ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com