ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೇಶದ ಮೂಲಸೌಕರ್ಯ, ತಯಾರಿಕೆ, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುವಂತೆ ಅಮೆರಿಕದ ಉದ್ಯಮಿಗಳನ್ನು ಸ್ವಾಗತಿಸಿದ್ದು, ನ್ಯಾಯಯುತ ಮತ್ತು ಸರಳ ತೆರಿಗೆ ನೀತಿಗಳನ್ನು ಜಾರಿಗೆ ತರುವ ಭರವಸೆಯನ್ನೂ ನೀಡಿದ್ದಾರೆ.
ಸೋಮವಾರ ಅಮೆರಿಕ ಮತ್ತು ಭಾರತ ವಾಣಿಜ್ಯ ಪರಿಷತ್ತಿನ 11ನೇ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಕೆಲವೇ ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ವಾಣಿಜ್ಯ ವಹಿವಾಟು 50,000 ಕೋಟಿ ಡಾಲರ್ ತಲುಪುವ ನಿರೀಕ್ಷೆ ವ್ಯಕ್ತಪಡಿಸಿದರು.