ಮಾರುಕಟ್ಟೆ ಆರಂಭದಲ್ಲಿ ಸಕಾರತ್ಮಕ ವಹಿವಾಟು ಕಂಡಿದ್ದ ಮುಂಬೈ ಷೇರುಪೇಟು, ದುರ್ಬಲ ಜಾಗತಿಕ ವಹಿವಾಟಿನಿಂದಾಗಿ ಮಧ್ಯಾಹ್ನದ ವೇಳೆಗೆ ಕುಸಿತಕಂಡಿದೆ. ನಿಫ್ಟಿಯಲ್ಲಿಯೂ ಕೂಡ 20 ಅಂಕಗಳ ಕುಸಿತಕಂಡುಬಂದಿದೆ. ಇನ್ನು ನಾಳೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿ ಪರಾಮರ್ಶೆ ಮಾಡಲಿದ್ದು, ಹಣದುಬ್ಬರ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ದರ ಕಡಿತ ಮಾಡುವ ಕುರಿತು ಆಶಾಭಾವ ವ್ಯಕ್ತವಾಗಿತ್ತು.