ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 308 ಅಂಕ ಕುಸಿತ

ರಿಸರ್ವ್ ಬ್ಯಾಂಕ್ ತನ್ನ ನೀತಿ ಪರಾಮರ್ಶೆ ಮಾಡಲಿದ್ದು ಸಕಾರತ್ಮಕ ಬೆಳವಣಿಗೆ ನಿರೀಕ್ಷೆ ನಡುವೆಯೂ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ 308 ಅಂಕಗಳ ಕುಸಿತ ಕಂಡಿದೆ.
ಮುಂಬೈ ಷೇರು ಮಾರುಕಟ್ಟೆ
ಮುಂಬೈ ಷೇರು ಮಾರುಕಟ್ಟೆ

ಮುಂಬೈ: ರಿಸರ್ವ್ ಬ್ಯಾಂಕ್ ತನ್ನ ನೀತಿ ಪರಾಮರ್ಶೆ ಮಾಡಲಿದ್ದು ಸಕಾರತ್ಮಕ ಬೆಳವಣಿಗೆ ನಿರೀಕ್ಷೆ ನಡುವೆಯೂ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ 308 ಅಂಕಗಳ ಕುಸಿತ ಕಂಡಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ 32 ಪೈಸೆಯಷ್ಟು ಕುಸಿದಿರುವುದು ಸಹ ಸೆನ್ಸೆಕ್ಸ್ ಇಳಿಕೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ದುರ್ಬಲ ವಹಿವಾಟು ಪರಿಣಾಮdiMdaagi ಸೋಮವಾರವೂ ಸೆನ್ಸೆಕ್ಸ್ ನಲ್ಲಿ 71 ಅಂಕಗಳ ಕುಸಿತ ಉಂಟಾಗಿತ್ತು. ನಿಫ್ಟಿ 94 .80 ಅಂಕ ಇಳಿಕೆಯಾಗಿತ್ತು.
ಆರ್ ಬಿಐ ಸೆ.29 ರಂದು  ತನ್ನ ನೀತಿ ಪರಾಮರ್ಶೆ ಮಾಡಲಿದ್ದು, ಹಣದುಬ್ಬರ ದರ ಇಳಿಕೆಯಾಗಿರುವುದರಿಂದ ಬಡ್ಡಿ ದರ  ಇಳಿಕೆ ಮಾಡುವ ನಿರೀಕ್ಷೆ ಇದ್ದು ಷೇರು ಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ನಿರೀಕ್ಷಿಸಲಾಗಿತ್ತು. ಆದರೂ ಸಹ ಬಿಎಸ್ಇ ಸೆನ್ಸೆಕ್ಸ್ ಇಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com