ಕಪ್ಪುಹಣ: 638 ಜನರಿಂದ ಒಟ್ಟು 3 ,770 ಕೋಟಿ ರೂಪಾಯಿ ಸಂಗ್ರಹ

ಕಪ್ಪು ಹಣ ಹೊಂದಿರುವ ಸುಮಾರು 600 ಕ್ಕೂ ಹೆಚ್ಚು ಜನರು ಸ್ವತಃ ಒನ್ ಟೈಂ ಕಂಪ್ಲಯನ್ಸ್'(ದಂಡ ಕಟ್ಟಿ ಹಣವನ್ನು ಅಧಿಕೃತಗೊಳಿಸುವುದು)ಗೆ ಮುಂದಾಗಿದ್ದಾರೆ.
ಕಪ್ಪು ಹಣ(ಸಾಂಕೇತಿಕ ಚಿತ್ರ)
ಕಪ್ಪು ಹಣ(ಸಾಂಕೇತಿಕ ಚಿತ್ರ)
Updated on: 

ನವದೆಹಲಿ: ಕಪ್ಪು ಹಣ ಹೊಂದಿರುವ ಸುಮಾರು 600 ಕ್ಕೂ ಹೆಚ್ಚು ಜನರು ಸ್ವತಃ  ಒನ್ ಟೈಂ ಕಂಪ್ಲಯನ್ಸ್'(ದಂಡ ಕಟ್ಟಿ ಹಣವನ್ನು ಅಧಿಕೃತಗೊಳಿಸುವುದು)ಗೆ ಮುಂದಾಗಿದ್ದು ಈ ವರೆಗೂ 3 ,770 ಕೋಟಿ ರೂಪಾಯಿಯಷ್ಟು ಕಪ್ಪು ಹಣ ಸಂಗ್ರಹ ಮಾಡಲಾಗಿದೆ.
ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಅಧ್ಯಕ್ಷ ಅನಿತಾ ಕಪೂರ್ ಪ್ರಕಾರ, 638 ಜನರು ಕಪ್ಪು ಹಣದ ವಿವರ ಘೋಷಿಸಲು ಮುಂದಾಗಿದ್ದಾರೆ. ಕಪ್ಪು ಹಣ ಘೋಷಣೆ ಮಾಡಿಕೊಂಡಿರುವವರು ತೆರಿಗೆ ಹಾಗೂ ದಂಡ ಪಾವತಿ ಮಾಡಲು 2015 ರ ಡಿ.31 ವರೆಗೆ ಕಾಲಾವಕಾಶ ಇದೆ ಎಂದು ಹೇಳಿದ್ದಾರೆ. 
ಕಪ್ಪು ಹಣ ಘೋಶಿಸಿಕೊಳ್ಳುವುದಕ್ಕಾಗಿ ಸೆ.30 ರಂದು ಕೊನೆಯ ದಿನವಾದ್ದರಿಂದ ಆದಾಯ ತೆರಿಗೆ ಇಲಾಖೆಯಲ್ಲಿ ನೆರೆದಿದ್ದವರ ಸಂಖ್ಯೆ ಹೆಚ್ಚಿತ್ತು. ರಾಜಸ್ಥಾನ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ಕಪ್ಪು ಹಣ ಘೋಷಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com