ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಚೀನಾ, ಯುಎಸ್ ನ್ನು ಹಿಂದಿಕ್ಕಿದ ಭಾರತ

ವಿದೇಶಿ ನೇರಬಂಡವಾಳ ಹೂಡಿಕೆಯಲ್ಲಿ 63 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗಳನ್ನು ಆಕರ್ಷಿಸುವ ಮೂಲಕ ಭಾರತ ಚೀನಾವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.
ಮೇಕ್ ಇನ್ ಇಂಡಿಯಾ (ಸಾಂದರ್ಭಿಕ ಚಿತ್ರ)
ಮೇಕ್ ಇನ್ ಇಂಡಿಯಾ (ಸಾಂದರ್ಭಿಕ ಚಿತ್ರ)

ನವದೆಹಲಿ: ವಿದೇಶಿ ನೇರಬಂಡವಾಳ ಹೂಡಿಕೆಯಲ್ಲಿ 63 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗಳನ್ನು ಆಕರ್ಷಿಸುವ ಮೂಲಕ ಭಾರತ ಚೀನಾವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.
ಫೈನಾಷಿಯಲ್ ಟೈಮ್ಸ್ ವರದಿಯ ಪ್ರಕಾರ 2015 ರಲ್ಲಿ ಎಫ್ ಡಿಐ ಯೋಜನೆಗಳಲ್ಲಿ ಶೇ.8 ರಷ್ಟು ಏರಿಕೆಯಾಗಿದ್ದು, ಪ್ರಮುಖ ವಿದೇಶಿ ಕಂಪನಿಗಳಾದ ಫಾಕ್ಸ್ ಕಾನ್, ಸನ್ ಎಡಿಸನ್ ಅನುಕ್ರಮವಾಗಿ 5 ಬಿಲಿಯನ್ ಡಾಲರ್, 4 ಬಿಲಿಯನ್ ಡಾಲರ್  ಮೌಲ್ಯದ ಯೋಜನೆಗಳಿಗೆ ಬಂಡವಾಳ ಹೂಡಲು ಒಪ್ಪಿಗೆ ಸೂಚಿಸಿದ್ದವು. ಕಲ್ಲಿದ್ದಲು, ನೈಸರ್ಗಿಕ ಅನಿಲ, ತೈಲ, ನವೀಕರಸಬಹುದಾದ ಇಂಧನ ಕ್ಷೇತ್ರದಲ್ಲಿ ಬೃಹತ್ ಯೋಜನೆಗಳಿಗೆ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದುಬಂದಿರುವುದರಿಂದ ಭಾರತ ಎಫ್ ಡಿಐ ನಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದೆ.
2015 ರಲ್ಲಿ ಭಾರತ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂದಿಕೆಯನ್ನು ಗಳಿಸಿದ್ದು ಅಮೆರಿಕವಾನ್ನೂ ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. 12 .4 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಗಳಿಸಿರುವ ಗುಜರಾತ್, 8 .3 ಬಿಲಿಯನ್ ಡಾಲರ್ ಗಳಿಸಿರುವ ಮಹಾರಾಷ್ಟ್ರ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿರುವ ರಾಜ್ಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com