ಷೇರು ಆದಾಯದ ಮೇಲಿನ ತೆರಿಗೆ ಹೆಚ್ಚಳ ಶಂಕೆ; 137 ಅಂಕ ಕುಸಿದ ಸೆನ್ಸೆಕ್ಸ್!

ಸರ್ಕಾರ ಷೇರು ಆದಾಯದ ಮೇಲಿನ ತೆರಿಗೆ ಹೆಚ್ಚಳ ಮಾಡುವ ಕುರಿತಂತೆ ಸುದ್ದಿಗಳು ಪ್ರಸಾರವಾದ ಬೆನ್ನಲ್ಲೇ ಸೆನ್ಸೆಕ್ಸ್ 137 ಅಂಕಗಳಷ್ಟು ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ನೋಟು ನಿಷೇಧ ಬೆನ್ನಲ್ಲೆ ಭಾರತ ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಷೇರು ಆದಾಯದ ಮೇಲಿನ ತೆರಿಗೆ ಹೆಚ್ಚಳ ಮಾಡುವ ಕುರಿತಂತೆ ಸುದ್ದಿಗಳು  ಪ್ರಸಾರವಾದ ಬೆನ್ನಲ್ಲೇ ಸೆನ್ಸೆಕ್ಸ್ 137 ಅಂಕಗಳಷ್ಟು ಕುಸಿತ ಕಂಡಿದೆ.

ಮುಂಬೈ ಷೇರುಪೇಟೆಯಲ್ಲಿ ಸೋಮವಾರ ಬೆಳಗಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರು ಬಂಡವಾಳ ಹೂಡಲು ನಿರಾಸಕ್ತಿ ತೋರಿದ ಪರಿಣಾಮ ಸೆನ್ಸೆಕ್ಸ್ 137 ಅಂಕಗಳ ಕುಸಿತಕಂಡಿದೆ. ಆ ಮೂಲಕ ಸೆನ್ಸೆಕ್ಸ್  ಶೇ.0.9ರಷ್ಟು ಕುಸಿತಗೊಂಡು 25,904 ಅಂಕಗಳಿಗೆ ಸ್ಥಿರವಾಗಿದೆ. ಅಂತೆಯೇ ನಿಫ್ಟಿ ಕೂಡ 52 ಅಂಕಗಳ ಕುಸಿತದೊಂದಿಗೆ 7,934 ಅಂಕಗಳಿಗೆ ಕುಸಿದಿದೆ. ಇಂದಿನ ವಹಿವಾಟಿನಲ್ಲಿ ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಆರ್  ಐಎಲ್ ಸಂಸ್ಥೆಗಳು ಲಾಭಾಂಶ ಕಂಡಿದ್ದರೆ, ಭಾರ್ತಿ ಏರ್ ಟೆಲ್, ರೆಡ್ಡಿ ಲ್ಯಾಬ್ಸ್ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

ರುಪಾಯಿ ಮೌಲ್ಯ ಕುಸಿತ
ಇನ್ನು ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ನೀರಸ ಪ್ರತಿಕ್ರಿಯೆಯಿಂದಾಗಿ ರುಪಾಯಿ ಮೌಲ್ಯ ಕೂಡ ಕುಸಿತವಾಗಿದ್ದು, ಡಾಲರ್ ಎದರು 2 ಪೈಸೆಯಷ್ಟು ಇಳಿಕೆ ಕಂಡಿದೆ. ಆ ಮೂಲಕ ಪ್ರತೀ ಡಾಲರ್ ಗೆ 67.83ಕ್ಕೆ ರುಪಾಯಿ ಮೌಲ್ಯ  ಇಳಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com